For Quick Alerts
ALLOW NOTIFICATIONS  
For Daily Alerts
 

ಟಿ20 ರ‍್ಯಾಂಕಿಂಗ್: ಸೂರ್ಯನಿಗಿಲ್ಲ ಸಾಟಿ, ನಂಬರ್ 1 ಸ್ಥಾನದಲ್ಲಿ ಸೂರ್ಯಕುಮಾರ್ ವಿರಾಜಮಾನ

ICC t20 Ranking: Team India batter Suryakumar becomes worlds No.1 T20I overtakes Mohammad Rizwan

ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಸೂರ್ಯಕುಮಾರ್ ಯಾದವ್ ಚುಟುಕು ಮಾದರಿಯಲ್ಲಿ ತಮ್ಮ ಅದ್ಭುತ ಓಟವನ್ನು ಮುಂದುವರಿಸಿದ್ದಾರೆ. ಈ ಬಾರಿಯ ವಿಶ್ವಕಪ್‌ನಲ್ಲಿಯೂ ಸೂರ್ಯಕುಮಾರ್ ಅಮೋಘ ಪ್ರದರ್ಶನ ನೀಡುತ್ತಿದ್ದು ಚುಟುಕು ಮಾದರಿಯ ಕ್ರಿಕೆಟ್‌ನಲ್ಲಿ ನಂಬರ್ 1 ಬ್ಯಾಟರ್ ಆಗಿ ಹೊರಹೊಮ್ಮಿದ್ದಾರೆ. ಐಸಿಸಿ ಬಿಡುಗಡೆಗೊಳಿಸಿರುವ ಪರಿಷ್ಕೃತ ಶ್ರೇಯಾಂಕ ಪಟ್ಟಿಯಲ್ಲಿ ಸೂರ್ಯಕುಮಾರ್ ಯಾದವ್ ಮೊದಲ ಸ್ಥಾನಕ್ಕೇರಿದ್ದಾರೆ.

ಪಾಕಿಸ್ತಾನದ ಆರಂಭಿಕ ಆಟಗಾರ ಮೊಹಮ್ಮದ್ ರಿಜ್ವಾನ್ ಈವರೆಗೆ ಮೊದಲ ಸ್ಥಾನದಲ್ಲಿದ್ದರು. ವಿಶ್ವಕಪ್‌ನಲ್ಲಿಯೂ ಸೂರ್ಯಕುಮಾರ್ ಯಾದವ್ ಅದ್ಭುತವಾಗಿ ಬ್ಯಾಟ್ ಬೀಸುತ್ತಿದ್ದು ಸ್ಥಿರ ಪ್ರದರ್ಶನ ನೀಡಲು ಯಶಸ್ವಿಯಾಗಿದ್ದಾರೆ. ಇದು ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್ ಶ್ರೇಯಾಂಕದ ಮೇಲೆ ಪ್ರಭಾವ ಬೀರಿದ್ದು ಪಾಕ್ ಆಟಗಾರನನ್ನು ಹಿಂದಕ್ಕೆ ತಳ್ಳಿ ಮೊದಲ ಸ್ಥಾನವನ್ನು ಪಡೆದುಕೊಂಡಿದ್ದಾರೆ.

863 ಅಂಕಗಳಿಸಿದ ಸೂರ್ಯಕುಮಾರ್ ಯಾದವ್

863 ಅಂಕಗಳಿಸಿದ ಸೂರ್ಯಕುಮಾರ್ ಯಾದವ್

ಟಿ20 ಮಾದರಿಯಲ್ಲಿ ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿ ಸೂರ್ಯಕುಮಾರ್ ಯಾದವ್ 863 ಅಂಕಗಳನ್ನು ಪಡೆದುಕೊಂಡು ಮೊದಲ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಇನ್ನು ಈ ಬಾರಿಯ ವಿಶ್ವಕಪ್‌ನಲ್ಲಿ ಮಿಂಚಲು ವಿಫಲವಾಗಿರುವ ಪಾಕಿಸ್ತಾನದ ಮೊಹಮ್ಮದ್ ರಿಜ್ವಾನ್ ಎರಡನೇ ಸ್ಥಾನಕ್ಕೆ ಕುಸಿದಿದ್ದು 842 ಅಂಕಗಳನ್ನು ಹೊಂದಿದ್ದಾರೆ. ಇನ್ನು ಮೂರನೇ ಸ್ಥಾನದಲ್ಲಿ ನ್ಯೂಜಿಲೆಂಡ್ ತಂಡದ ಆಟಗಾರ ಡಿವೋನ್ ಕಾನ್ವೆ ಮೂರನೇ ಸ್ಥಾನದಲ್ಲಿದ್ದು 792 ಅಂಕಗಳನ್ನು ಹೊಂದಿದ್ದಾರೆ.

ಸತತ ಎರಡು ಅರ್ಧ ಶತಕ ಸಿಡಿಸಿದ ಸೂರ್ಯ

ಸತತ ಎರಡು ಅರ್ಧ ಶತಕ ಸಿಡಿಸಿದ ಸೂರ್ಯ

ಇನ್ನು ಈ ಬಾರಿಯ ವಿಶ್ವಕಪ್‌ನಲ್ಲಿ ಸೂರ್ಯಕುಮಾರ್ ಯಾದವ್ ಅಮೋಘ ಪ್ರದರ್ಶನ ನೀಡಿ ಮಿಂಚುತ್ತಿದ್ದಾರೆ. ಕಳೆದ ಎರಡು ಪಂದ್ಯಗಳಲ್ಲಿ ಸೂರ್ಯಕುಮಾರ್ ಯಾದವ್ ಅರ್ಧ ಶತಕ ಸಿಡಿಸಿ ಮಿಂಚಿದ್ದು ತಂಡದ ಅದ್ಭುತ ಪ್ರದರ್ಶನದಲ್ಲಿ ಮಹತ್ವದ ಪಾತ್ರವಹಿಸಿದ್ದಾರೆ. ಮೊದಲಿಗೆ ನೆದರ್ಲೆಂಡ್ಸ್ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಅರ್ಧ ಶತಕ ಸಿಡಿಸಿ ಮಿಂಚಿದ ಸೂರ್ಯಕುಮಾರ್ ಮಂಗಳವಾರ ನಡೆದ ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿಯೂ 30 ರನ್‌ಗಳ ಕೊಡುಗೆ ನೀಡುವ ಮೂಲಕ ತಂಡದ ಬೃಹತ್ ಮೊತ್ತಕ್ಕೆ ಕೊಡುಗೆ ನೀಡಿದ್ದಾರೆ. ಈ ಮೂಲಕ ಈ ಬಾರಿಯ ವಿಶ್ವಕಪ್‌ನಲ್ಲಿ ಸೂರ್ಯಕುಮಾರ್ ಯಾದವ್ ನಾಲ್ಕು ಪಂದ್ಯಗಳಲ್ಲಿ 164 ರನ್‌ಗಳಿಸಿದ್ದಾರೆ.

ಪದಾರ್ಪಣೆಯ ಬಳಿಕ ಸೂರ್ಯ ಸ್ಥಿರ ಪ್ರದರ್ಶನ

ಪದಾರ್ಪಣೆಯ ಬಳಿಕ ಸೂರ್ಯ ಸ್ಥಿರ ಪ್ರದರ್ಶನ

ಕಳೆದ ವರ್ಷದ ಮಾರ್ಚ್ ತಿಂಗಳಿನಲ್ಲಿ ಸೂರ್ಯಕುಮಾರ್ ಯಾದವ್ ಭಾರತ ತಂಡಕ್ಕೆ ಪದಾರ್ಪಣೆಯನ್ನು ಮಾಡಿದರು. ಅದಾದ ಬಳಿಕ ಸತತವಾಗಿ ಸ್ಥಿರ ಪ್ರದರ್ಶನವನ್ನು ನೀಡಿಕೊಂಡೇ ಬರುತ್ತಿದ್ದು ತಂಡದ ಆಧಾರ ಸ್ಥಂಭವಾಗಿದ್ದಾರೆ. ಈವರೆಗೆ ಸೂರ್ಯ ಭಾರತದ ಪರವಾಗಿ 38 ಟಿ20 ಪಂದ್ಯಗಳನ್ನು ಆಡಿದ್ದು ಇದರಲ್ಲಿ 12 ಅರ್ಧ ಶತಕ ಹಾಗೂ ಒಂದು ಅದ್ಭುತ ಶತಕ ಸಿಡಿಸಿದ್ದಾರೆ. ಇನ್ನು ಏಕದಿನ ತಂಡದಲ್ಲಿಯೂ ಭಾರತದ ಪ್ರಮುಖ ಆಟಗಾರನಾಗಿರುವ ಸೂರ್ಯಕುಮಾರ್ ಯಾದವ್ 13 ಏಕದಿನ ಪಂದ್ಯಗಳಲ್ಲಿ ಆಡಿದ್ದಾರೆ.

ಟಾಪ್ 10ರಲ್ಲಿ ಕೊಹ್ಲಿ

ಟಾಪ್ 10ರಲ್ಲಿ ಕೊಹ್ಲಿ

ಇನ್ನು ಈ ಬಾರಿಯ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಅಮೋಘ ಫಾರ್ಮ್‌ನಲ್ಲಿದ್ದು ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿಯೂ ಕೊಹ್ಲಿ ಅಜೇಯ ಅರ್ಧ ಶತಕ ಸಿಡಿಸಿ ಮಿಂಚಿದ್ದಾರೆ. ಈ ಮೂಲಕ ಈ ಬಾರಿಯ ವಿಶ್ವಕಪ್‌ನಲ್ಲಿ ಭಾರತ ಆಡಿದ ನಾಲ್ಕು ಪಂದ್ಯಗಳ ಪೈಕಿ 3ರಲ್ಲಿ ಅರ್ಧ ಶತಕ ಸಿಡಿಸಿದ್ದು ಎದುರಾಳಿ ತಂಡಗಳಿಗೆ ಆಘಾತ ನಿಡುತ್ತಿದ್ದಾರೆ. ಇದಕ್ಕೂ ಮುನ್ನ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಹಾಗೂ ನೆದರ್ಲೆಂಡ್ಸ್ ವಿರುದ್ಧ ಅಜೇಯ ಅರ್ಧ ಶತಕ ಸಿಡಿಸಿದ್ದರು.

Story first published: Wednesday, November 2, 2022, 15:59 [IST]
Other articles published on Nov 2, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+