ICC T20 Ranking: 4ನೇ ಸ್ಥಾನಕ್ಕೇರಿದ ಬಾಬರ್ ಅಜಂ; ಅಗ್ರಸ್ಥಾನದಲ್ಲೇ ಉಳಿದ ಭಾರತೀಯ ಸ್ಫೋಟಕ ಬ್ಯಾಟರ್!
ಬುಧವಾರ, ಮೇ 1ರಂದು ನವೀಕರಿಸಿದ ಇತ್ತೀಚಿನ ಐಸಿಸಿ ಟಿ20 ಶ್ರೇಯಾಂಕದಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಂ 4ನೇ ಸ್ಥಾನಕ್ಕೆ ಏರಿಕೆ ಕಂಡಿದ್ದಾರೆ.
ನ್ಯೂಜಿಲೆಂಡ್ ವಿರುದ್ಧ ಸ್ವದೇಶದಲ್ಲಿ ಇತ್ತೀಚಿಗೆ ಮುಕ್ತಾಯಗೊಂಡ ಟಿ20 ಸರಣಿಯಲ್ಲಿ ಬ್ಯಾಟ್‌ನೊಂದಿಗೆ ಅದ್ಭುತ ಪ್ರದರ್ಶನದ ನಂತರ ಬಾಬರ್ ಅಜಂ ಒಂದು ಸ್ಥಾನ ಮೇಲಕ್ಕೆ ಜಿಗಿದಿದ್ದಾರೆ.
ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ನಡುವಿನ ನಾಲ್ಕು ಪಂದ್ಯಗಳ ಸರಣಿಯು 2-2 ಅಂತರದಲ್ಲಿ ಡ್ರಾನಲ್ಲಿ ಕೊನೆಗೊಂಡಿತು. ಬಾಬರ್ ಅಜಂ 138ರ ಸ್ಟ್ರೈಕ್ ರೇಟ್ ಮತ್ತು 31ರ ಸರಾಸರಿಯಲ್ಲಿ 125 ರನ್ ಗಳಿಸಿದರು.

ಕಳೆದ ವರ್ಷ ನಂಬರ್ 1 ಬ್ಯಾಟರ್ ಆಗಿದ್ದ ಬಾಬರ್ ಅಜಂ ಅವರು ಸದ್ಯ 763 ರೇಟಿಂಗ್ ಪಾಯಿಂಟ್‌ಗಳನ್ನು ಹೊಂದಿದ್ದಾರೆ. ಬ್ಯಾಟಿಂಗ್ ಚಾರ್ಟ್‌ನಲ್ಲಿ ನಂ 1 ಸ್ಥಾನದಲ್ಲಿರುವ ಭಾರತೀಯ ಬ್ಯಾಟಿಂಗ್ ತಾರೆ ಸೂರ್ಯಕುಮಾರ್ ಯಾದವ್‌ಗಿಂತ 98 ಕಡಿಮೆ ರೇಟಿಂಗ್ ಪಾಯಿಂಟ್ ಹೊಂದಿದ್ದಾರೆ.
ಬಾಬರ್ ಅಜಂ ನಿಧಾನವಾಗಿ ಸರಣಿ ಪ್ರಾರಂಭಿಸಿದರು. ಆದರೆ ಅಂತಿಮ ಟಿ20 ಪಂದ್ಯದಲ್ಲಿ ಪಂದ್ಯ-ವಿಜೇತ 69 ರನ್ ಗಳಿಸಿ ಪಾಕಿಸ್ತಾನ ತಂಡವು ಸರಣಿ ಸಮಬಲಗೊಳಿಸಲು ಸಹಾಯ ಮಾಡಿದರು.
ಇನ್ನು ಭಾರತದ ಸ್ಫೋಟಕ ಬ್ಯಾಟರ್ ಸೂರ್ಯಕುಮಾರ್ ಯಾದವ್ ಅವರು ಟಿ20 ಬ್ಯಾಟಿಂಗ್ ಶ್ರೇಯಾಂಕದಲ್ಲಿ ನಂಬರ್ 1 ಸ್ಥಾನದಲ್ಲೇ ಮುಂದುವರೆದಿದ್ದಾರೆ. ಕಳೆದ ಒಂದು ವರ್ಷದಿಂದ ಅಗ್ರಸ್ಥಾನ ತಮ್ಮದಾಗಿಸಿಕೊಂಡಿದ್ದಾರೆ. ಮತ್ತೊಬ್ಬ ಭಾರತೀಯ ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್ ಟಿ20 ಬ್ಯಾಟಿಂಗ್ ಶ್ರೇಯಾಂಕದಲ್ಲಿ 6ನೇ ಸ್ಥಾನದಲ್ಲಿದ್ದಾರೆ.
ಐಪಿಎಲ್ 2024ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಅದ್ಭುತ ಫಾರ್ಮ್‌ನಲ್ಲಿರುವ ಇಂಗ್ಲೆಂಡ್‌ನ ಫಿಲಿಪ್ ಸಾಲ್ಟ್ 802 ರೇಟಿಂಗ್ ಪಾಯಿಂಟ್‌ಗಳೊಂದಿಗೆ 2ನೇ ಸ್ಥಾನದಲ್ಲಿದ್ದು, 3ನೇ ಸ್ಥಾನದಲ್ಲಿರುವ ಪಾಕಿಸ್ತಾನದ ಮೊಹಮ್ಮದ್ ರಿಜ್ವಾನ್ ಅವರಿಗಿಂತ 18 ಹೆಚ್ಚು ರೇಟಿಂಗ್ ಪಾಯಿಂಟ್‌ಗಳನ್ನು ಹೊಂದಿದ್ದಾರೆ.
5ನೇ ಸ್ಥಾನಕ್ಕೆ ಕುಸಿದಿರುವ ದಕ್ಷಿಣ ಆಫ್ರಿಕಾದ ಏಡೆನ್ ಮಾರ್ಕ್ರಾಮ್ ಬದಲಿಗೆ ಬಾಬರ್ ಅಜಂ 4ನೇ ಸ್ಥಾನಕ್ಕೆ ಏರಿದರು. ಇದೇ ವೇಳೆ ಪಾಕಿಸ್ತಾನ ತಂಡದ ಸಹ ಆಟಗಾರ ಫಖರ್ ಜಮಾನ್ ಅವರು ಇತ್ತೀಚಿನ ಟಿ20 ಶ್ರೇಯಾಂಕಗಳ ನವೀಕರಣದಲ್ಲಿ ಏರಿಕೆ ಕಂಡರು.
ಆಕ್ರಮಣಕಾರಿ ಎಡಗೈ ಆಟಗಾರ ಫಖರ್ ಜಮಾನ್ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ತಮ್ಮ 104 ರನ್‌ಗಳ ಶತಕದ ಹಿನ್ನಲೆಯಲ್ಲಿ 10 ಸ್ಥಾನಗಳನ್ನು ಸುಧಾರಿಸಿ 62ನೇ ಸ್ಥಾನಕ್ಕೆ ತಲುಪಿದ್ದಾರೆ.

ಇನ್ನು ಅತಿ ದೊಡ್ಡ ಗಮನ ಸೆಳೆದವರು ನ್ಯೂಜಿಲೆಂಡ್‌ನ ಟಿಮ್ ಸೀಫರ್ಟ್. ಅನುಭವಿ ಬಲಗೈ ಬ್ಯಾಟರ್ 144.06ರ ಸ್ಟ್ರೈಕ್ ರೇಟ್‌ನಲ್ಲಿ ಸರಣಿಯಲ್ಲಿ 85 ರನ್ ಗಳಿಸಿದ ನಂತರ ಏಳು ಸ್ಥಾನಗಳ ಏರಿಕೆ ಕಂಡರು.
ಟಿ20 ಕ್ರಿಕೆಟ್‌ನ ಬೌಲರ್‌ಗಳ ನವೀಕರಿಸಿದ ಶ್ರೇಯಾಂಕದಲ್ಲಿ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ಆಟಗಾರರು ದೊಡ್ಡ ಲಾಭ ಪಡೆದಿದ್ದಾರೆ. ವೇಗದ ಬೌಲರ್ ಶಾಹೀನ್ ಅಫ್ರಿದಿ ನ್ಯೂಜಿಲೆಂಡ್ ವಿರುದ್ಧದ ನಾಲ್ಕು ಪಂದ್ಯಗಳಲ್ಲಿ ಎಂಟು ವಿಕೆಟ್‌ಗಳನ್ನು ಪಡೆದ ನಂತರ, ಮೂರು ಸ್ಥಾನಗಳ ಏರಿಕೆ ಕಂಡು 14ನೇ ಸ್ಥಾನ ತಲುಪಿದ್ದಾರೆ.
ಐಸಿಸಿ ಟಿ20 ಬ್ಯಾಟಿಂಗ್ ಶ್ರೇಯಾಂಕಗಳು
1. ಸೂರ್ಯಕುಮಾರ್ ಯಾದವ್ - 861 ರೇಟಿಂಗ್ ಪಾಯಿಂಟ್
2. ಫಿಲಿಪ್ ಸಾಲ್ಟ್ - 802
3. ಮೊಹಮ್ಮದ್ ರಿಜ್ವಾನ್ - 784
4. ಬಾಬರ್ ಅಜಂ - 763
5. ಏಡೆನ್ ಮಾರ್ಕ್ರಾಮ್ - 755
6. ಯಶಸ್ವಿ ಜೈಸ್ವಾಲ್ - 714
7. ರಿಲೀ ರೋಸ್ಸೌ - 689
8. ಜೋಸ್ ಬಟ್ಲರ್ - 680
9. ರೀಜಾ ಹೆಂಡ್ರಿಕ್ಸ್ - 660
10. ಡೇವಿಡ್ ಮಲಾನ್ - 657
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications