ICC T20 Rankings: ಪಾಕಿಸ್ತಾನ ಫಸ್ಟು, ಭಾರತ ನೆಕ್ಸ್ಟು, ರಾಹುಲ್ ಬೆಸ್ಟು!

ನವದೆಹಲಿ, ಮಾರ್ಚ್ 13: ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಪುರುಷರ ಟಿ20 ರ್ಯಾಂಕ್ ಪಟ್ಟಿಯನ್ನು ಪ್ರಕಟಿಸಿದೆ. ನೂತನ ಪಟ್ಟಿಯಲ್ಲಿ ಟೀಮ್ ಇಂಡಿಯಾ ದ್ವಿತೀಯ ಸ್ಥಾನ ಉಳಿಸಿಕೊಂಡಿದೆ. ಪಾಕಿಸ್ತಾನ ತಂಡ ಕೂಡ ಮೊದಲ ಸ್ಥಾನದಲ್ಲೇ ಮುಂದುವರೆದಿದೆ.
ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಭಾರತ ಪ್ರವಾಸದ ಟಿ20 ಸರಣಿಯ ಎರಡು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಕನ್ನಡಿಗ ಕೆಎಲ್ ರಾಹುಲ್ ರ್ಯಾಂಕ್ ಪಟ್ಟಿಯಲ್ಲಿ ಮೇಲಕ್ಕೆ ಜಿಗಿದಿದ್ದಾರೆ. ಕೆಎಲ್ ರಾಹುಲ್ ಸದ್ಯ 5ನೇ ಸ್ಥಾನ ಆವರಿಸಿಕೊಂಡಿದ್ದಾರೆ.
ಐಸಿಸಿ ಟಿ20 ನೂತನ ರ್ಯಾಂಕ್ ಪಟ್ಟಿಯಲ್ಲಿ ಆಟಗಾರರ, ವಿವಿಧ ತಂಡಗಳ ಸ್ಥಿತಿಗತಿಗಳ ಸಂಕ್ಷಿಪ್ತ ಮಾಹಿತಿ ಕೆಳಗೆ ನೀಡಿದ್ದೇವೆ.

ಪಾಕಿಸ್ತಾನ ನಂ.1
ಚುಟುಕು ಕ್ರಿಕೆಟ್ ಮಾದರಿ ಟಿ20ಯಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡ ಅಗ್ರ ಸ್ಥಾನದಲ್ಲೇ ಗಟ್ಟಿಯಾಗಿದೆ. ಪಾಕ್ ಖಾತೆಯಲ್ಲೀಗ 135 ರೇಟಿಂಗ್ ಪಾಯಿಂಟ್ಸ್ ಇವೆ. ದ್ವಿತೀಯ ಸ್ಥಾನದಲ್ಲಿ ಭಾರತವಿದ್ದು 122 ರೇಟಿಂಗ್ ಪಾಯಿಂಟ್ ಗಳಿಸಿದೆ. ಇನ್ನು ಆಸ್ಟ್ರೇಲಿಯಾ (120), ಇಂಗ್ಲೆಂಡ್ (119), ದಕ್ಷಿಣ ಆಫ್ರಿಕಾ (118) ಮೂರರಿಂದ 5ರೊಳಗೆ ಸ್ಥಾನ ಪಡೆದಿವೆ.

ಬಾಬರ್ ಸೂಪರ್
ಟಿ20 ಬ್ಯಾಟಿಂಗ್ ರ್ಯಾಂಕಿಂಗ್‌ನಲ್ಲಿ ಪಾಕಿಸ್ತಾನ ಸ್ಫೋಟಕ ಬ್ಯಾಟ್ಸ್ಮನ್ ಬಾಬರ್ ಅಝಾಮ್ ಮೊದಲ ಸ್ಥಾನದಲ್ಲಿದ್ದಾರೆ. ನ್ಯೂಜಿಲ್ಯಾಂಡ್ ಬ್ಯಾಟ್ಸ್ಮನ್ ಕಾಲಿನ್ ಮುನ್ರೋ, ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್‌ವೆಲ್, ಆ್ಯರನ್ ಫಿಂಚ್, ಲೋಕೇಶ್ ರಾಹುಲ್ ಎರಡರಿಂದ 5ರಲ್ಲಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿಯಲ್ಲಿ ರಾಹುಲ್ 50+47 ರನ್ ಬಾರಿಸಿದ್ದು ಅವರನ್ನು ರ್ಯಾಂಕ್ ಪಟ್ಟಿಯಲ್ಲಿ ಮೇಲಕ್ಕೆ ತಂದಿದೆ.

ರಶೀದ್ ಖಾನ್ ಅಗ್ರ ಬೌಲರ್
ಅಫ್ಘಾನ್ ಸ್ಟಾರ್ ಬೌಲರ್ ರಶೀದ್ ಖಾನ್ ಅವರು ಬೌಲರ್‌ಗಳ ರ್ಯಾಂಕಿಂಗ್‌ನಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ. ಖಾನ್ ಖಾತೆಯಲ್ಲಿ 780 ರೇಟಿಂಗ್ ಪಾಯಿಂಟ್ಸ್ ಇವೆ. ಪಾಕ್ ಬೌಲರ್ ಶದಾಬ್ ಖಾನ್ ದ್ವಿತೀಯ, ಇಂಗ್ಲೆಂಡ್‌ನ ಆದಿಲ್ ರಶೀದ್ ತೃತೀಯ, ಪಾಕ್‌ನ ಇಮಾದ್ ವಾಸಿಮ್ ಚತುರ್ಥ, ಭಾರತದ ಕುಲದೀಪ್ ಯಾದವ್ 5ನೇ ಸ್ಥಾನದಲ್ಲಿದ್ದಾರೆ.

ಮ್ಯಾಕ್ಸ್‌ವೆಲ್ ಮೊದಲು
ಟಿ20 ಆಲ್ ರೌಂಡರ್‌ಗಳಲ್ಲಿ ಆಸೀಸ್ ಸ್ಫೋಟಕ ಬ್ಯಾಟ್ಸ್ಮನ್ ಗ್ಲೆನ್ ಮ್ಯಾಕ್ಸ್‌ವೆಲ್ ನಂ.1 ಸ್ಥಾನದಲ್ಲಿದ್ದಾರೆ. ಶಕೀಬ್ ಅಲ್ ಹಸನ್ (ಬಾಂಗ್ಲಾದೇಶ), ಮೊಹಮ್ಮದ್ ನಬಿ (ಅಫ್ಘಾನ್‌ಸ್ತಾನ), ಮೊಹಮದುಲ್ಲ (ಬಾಂಗ್ಲಾದೇಶ), ರಿಚರ್ಡ್ ಬರ್ರಿಂಗ್ಟನ್ (ಸ್ಕಾಟ್ಲೆಂಡ್) ಕ್ರಮವಾಗಿ ಎರಡರಿಂದ ಐದರ ಸ್ಥಾನ ಆವರಿಸಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications