For Quick Alerts
ALLOW NOTIFICATIONS  
For Daily Alerts
 

ICC T20 Ranking: ಮೊದಲ ಬಾರಿಗೆ ಟಾಪ್ 10ರೊಳಗೆ ಪ್ರವೇಶಸಿದ ಯಶಸ್ವಿ ಜೈಸ್ವಾಲ್, ಅಕ್ಷರ್ ಪಟೇಲ್

ಸದ್ಯ ನಡೆಯುತ್ತಿರುವ ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ ನಂತರ, ಐಸಿಸಿ ಪುರುಷರ ಟಿ20 ಆಟಗಾರರ ಶ್ರೇಯಾಂಕದಲ್ಲಿ ಭಾರತೀಯ ಆಟಗಾರರು ಗಮನಾರ್ಹ ಲಾಭ ಗಳಿಸಿದ್ದಾರೆ.

ಆಲ್‌ರೌಂಡರ್ ಅಕ್ಷರ್ ಪಟೇಲ್ ಬೌಲರ್‌ಗಳ ಶ್ರೇಯಾಂಕ ಪಟ್ಟಿಯಲ್ಲಿ ವೃತ್ತಿಜೀವನದ ಅತ್ಯುತ್ತಮ ಐದನೇ ಸ್ಥಾನಕ್ಕೆ ತಲುಪಲು 12 ಸ್ಥಾನಗಳ ಏರಿಕೆ ಕಂಡರು.

ICC T20 Rankings: Indias Yashasvi Jaiswal And Axar Patel Enters Top 10 For the First Time

ಅಫ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಸರಣಿಯ ಮೊದಲ ಎರಡು ಟಿ20 ಪಂದ್ಯಗಳಲ್ಲಿ ಭಾರತ ತಂಡದ ಆರು ವಿಕೆಟ್‌ಗಳ ಗೆಲುವಿನಲ್ಲಿ 23 ರನ್‌ಗಳಿಗೆ 2 ವಿಕೆಟ್ ಮತ್ತು 16 ರನ್‌ಗಳಿಗೆ 2 ವಿಕೆಟ್ ಗಳಿಸಿದ ಅಕ್ಷರ್ ಪಟೇಲ್ ಅವರು ಇತ್ತೀಚಿನ ಐಸಿಸಿ ಶ್ರೇಯಾಂಕಗಳ ನವೀಕರಣದ ನಂತರ ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ಎರಡು ಸ್ಥಾನಗಳ ಏರಿಕೆಯಾಗಿ 16ನೇ ಸ್ಥಾನಕ್ಕೆ ತಲುಪಿದ್ದಾರೆ.

ಇನ್ನು ಇಂದೋರ್‌ನಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅವರು 34 ಎಸೆತಗಳಲ್ಲಿ 68 ರನ್ ಗಳಿಸಿ ಏಳು ಸ್ಥಾನಗಳನ್ನು ಮೇಲಕ್ಕೇರಿ ವೃತ್ತಿಜೀವನದ ಅತ್ಯುತ್ತಮ 6ನೇ ಸ್ಥಾನಕ್ಕೆ ತಲುಪಿದರು.

ICC T20 Rankings: Indias Yashasvi Jaiswal And Axar Patel Enters Top 10 For the First Time

ಮತ್ತೊಬ್ಬ ಎಡಗೈ ಆಟಗಾರ ಶಿವಂ ದುಬೆ ಅವರ ಅಜೇಯ 60 ಮತ್ತು 63 ರನ್‌ಗಳ ಸತತ ಅರ್ಧಶತಕಗಳು ಅವರನ್ನು 265ನೇ ಸ್ಥಾನದಿಂದ 58ನೇ ಸ್ಥಾನಕ್ಕೆ ಏರಲು ನೆರವಾದವು.

ಐಸಿಸಿ ಶ್ರೇಯಾಂಕದಲ್ಲಿ ಗಮನಾರ್ಹ ಲಾಭ ಗಳಿಸಿದ ಮತ್ತೊಬ್ಬ ಆಟಗಾರ ನ್ಯೂಜಿಲೆಂಡ್‌ನ ಫಿನ್ ಅಲೆನ್. ಅವರ ಎರಡು ಇನ್ನಿಂಗ್ಸ್‌ಗಳಲ್ಲಿ 15 ಎಸೆತಗಳಲ್ಲಿ 34 ರನ್ 15 ಮತ್ತು 41 ಎಸೆತಗಳಲ್ಲಿ 74 ರನ್‌ಗಳ ಆಟದಿಂದ ತನ್ನ ತಂಡವು ಪಾಕಿಸ್ತಾನದ ವಿರುದ್ಧ ಮೊದಲ ಎರಡು ಪಂದ್ಯಗಳನ್ನು ಗೆಲ್ಲಲು ಸಹಾಯ ಮಾಡಿತು. ಬ್ಯಾಟರ್‌ಗಳ ಶ್ರೇಯಾಂಕದಲ್ಲಿ 11 ಸ್ಥಾನಗಳ ಮೇಲಕ್ಕೇರಿ 16ನೇ ಸ್ಥಾನಕ್ಕೆ ಏರಿದರು.

ಕಿವೀಸ್‌ನ ಸಹ ಆಟಗಾರ ಟಿಮ್ ಸೌಥಿ ಮೊದಲ ಎರಡು ಪಂದ್ಯಗಳಲ್ಲಿ ಆರು ವಿಕೆಟ್‌ಗಳನ್ನು ಕಬಳಿಸಿದರು ಮತ್ತು ಬೌಲರ್‌ಗಳ ಪಟ್ಟಿಯಲ್ಲಿ ಎಂಟು ಸ್ಥಾನಗಳ ಏರಿಕೆ ಕಂಡು 18ನೇ ಸ್ಥಾನದಲ್ಲಿದ್ದಾರೆ.

ಟಿ20 ಟಾಪ್ 10 ಬ್ಯಾಟಿಂಗ್ ಶ್ರೇಯಾಂಕ

1. ಸೂರ್ಯಕುಮಾರ್ ಯಾದವ್ - 869
2. ಫಿಲ್ ಸಾಲ್ಟ್ - 802
3. ಮೊಹಮ್ಮದ್ ರಿಜ್ವಾನ್ - 775
4. ಬಾಬರ್ ಅಜಂ - 763
5. ಏಡೆನ್ ಮಾರ್ಕ್ರಾಮ್ - 755
6. ಯಶಸ್ವಿ ಜೈಸ್ವಾಲ್ - 739
7. ರಿಲೀ ರೋಸ್ಸೌ - 689
8. ಜೋಸ್ ಬಟ್ಲರ್ - 680
9. ರುತುರಾಜ್ ಗಾಯಕ್ವಾಡ್ - 661

ಇನ್ನು ಶುಭ್ಮನ್ ಗಿಲ್ ಬ್ಯಾಟರ್‌ಗಳ ಶ್ರೇಯಾಂಕದಲ್ಲಿ ಏಳು ಸ್ಥಾನ ಮೇಲೇರಿ 60ನೇ ಸ್ಥಾನ ತಲುಪಿದರೆ, ತಿಲಕ್ ವರ್ಮಾ ಮೂರು ಸ್ಥಾನ ಮೇಲೇರಿ 61ನೇ ಸ್ಥಾನಕ್ಕೇರಿದರು ಮತ್ತು ಅರ್ಶ್‌ದೀಪ್ ಸಿಂಗ್ ಬೌಲರ್‌ಗಳ ಶ್ರೇಯಾಂಕದಲ್ಲಿ ನಾಲ್ಕು ಸ್ಥಾನ ಮೇಲೇರಿ 21ನೇ ಸ್ಥಾನ ತಲುಪಿದ ಭಾರತದ ಇತರ ಆಟಗಾರರಾಗಿದ್ದಾರೆ.

ಅಫ್ಘಾನಿಸ್ತಾನದ ನಜಿಬುಲ್ಲಾ ಝದ್ರಾನ್ ಒಂದು ಸ್ಥಾನದಿಂದ 46ನೇ ಸ್ಥಾನ ತ;ಲುಪಿದರು ಮತ್ತು ಮೊಹಮ್ಮದ್ ನಬಿ ಎರಡು ಸ್ಥಾನಗಳ ಏರಿಕೆ ಕಂಡು 54ನೇ ಸ್ಥಾನ ತಲುಪಿದರು.

ನ್ಯೂಜಿಲೆಂಡ್ ವಿರುದ್ಧದ ಮೊದಲ ಎರಡು ಪಂದ್ಯಗಳಲ್ಲಿ ಸತತ ಅರ್ಧ ಶತಕಗಳನ್ನು ಗಳಿಸಿದ ಪಾಕಿಸ್ತಾನದ ಸ್ಟಾರ್ ಬ್ಯಾಟರ್ ಬಾಬರ್ ಅಜಂ ಒಂದು ಸ್ಥಾನ ಮೇಲಕ್ಕೇರಿ ನಾಲ್ಕನೇ ಸ್ಥಾನದಲ್ಲಿದ್ದರೆ, ಫಖರ್ ಜಮಾನ್ 14 ಸ್ಥಾನ ಮೇಲೇರಿ 81ನೇ ಸ್ಥಾನದಲ್ಲಿದ್ದಾರೆ.

ಕಿವೀಸ್ ಆಲ್‌ರೌಂಡರ್ ಡ್ಯಾರಿಲ್ ಮಿಚೆಲ್ ಒಂಬತ್ತು ಸ್ಥಾನಗಳ ಏರಿಕೆ ಕಂಡು 37ನೇ ಸ್ಥಾನ ತಲುಪಿದರೆ ಮತ್ತು ಕೇನ್ ವಿಲಿಯಮ್ಸನ್ 13 ಸ್ಥಾನ ಮೇಲೇರಿ 59ನೇ ಸ್ಥಾನ ತಲುಪಿದ್ದಾರೆ.

ಟಿ20 ಟಾಪ್ 10 ಬೌಲಿಂಗ್ ಶ್ರೇಯಾಂಕ

1. ಆದಿಲ್ ರಶೀದ್ - 726
2. ಅಕೇಲ್ ಹೊಸೈನ್ - 683
3. ವನಿಂದು ಹಸರಂಗ - 680
3. ಮಹೀಶ್ ತೀಕ್ಷಣ - 680
5. ಅಕ್ಷರ್ ಪಟೇಲ್ - 667
6. ರವಿ ಬಿಷ್ಣೋಯ್ - 666
7. ರಶೀದ್ ಖಾನ್ - 658
8. ತಬ್ರೈಜ್ ಶಮ್ಸಿ - 654
9. ಫಜಲ್ಹಕ್ ಫಾರೂಕಿ - 645

ಬೌಲಿಂಗ್ ಶ್ರೇಯಾಂಕದಲ್ಲಿ ಶ್ರೀಲಂಕಾದ ಸ್ಪಿನ್ನರ್‌ಗಳಾದ ವನಿಂದು ಹಸರಂಗ ಮತ್ತು ಮಹೀಶ್ ತೀಕ್ಷಣ ಕ್ರಮವಾಗಿ ಒಂದು ಮತ್ತು ಎರಡು ಸ್ಥಾನಗಳ ಮೇಲೇರಿ ಜಂಟಿ ಮೂರನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಪಾಕಿಸ್ತಾನದ ವೇಗದ ಬೌಲರ್ ಹ್ಯಾರಿಸ್ ರೌಫ್ ಎರಡು ಪಂದ್ಯಗಳಲ್ಲಿ ಐದು ವಿಕೆಟ್‌ಗಳನ್ನು ಕಬಳಿಸುವ ಮೂಲಕ ಎರಡು ಸ್ಥಾನಗಳ ಮೇಲೇರಿ ಜಂಟಿ-14ನೇ ಸ್ಥಾನಕ್ಕೆ ತಲುಪಿದ್ದಾರೆ. ಇನ್ನು ನ್ಯೂಜಿಲೆಂಡ್ ಬೌಲರ್ ಆಡಮ್ ಮಿಲ್ನೆ ಎರಡು ಪಂದ್ಯಗಳಲ್ಲಿ ಆರು ವಿಕೆಟ್‌ಗಳನ್ನು ಗಳಿಸುವ ಮೂಲಕ ಅವರು 66ನೇ ಸ್ಥಾನದಿಂದ ಜಂಟಿ 47ನೇ ಸ್ಥಾನಕ್ಕೆ ಮುನ್ನಡೆದಿದ್ದಾರೆ.

Story first published: Wednesday, January 17, 2024, 18:52 [IST]
Other articles published on Jan 17, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+