For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್: ಸೆಮಿಫೈನಲ್‌ನಲ್ಲಿ ಸೆಣೆಸಲು 4 ತಂಡಗಳು ಸಜ್ಜು: ಫೈನಲ್‌ ತಲುಪುವ ಆ 2 ತಂಡಗಳು ಯಾವುದು!?

ICC T20 World Cup 2021 Semi Final : Qualified Teams, Schedule, preview in Kannada

ಟಿ20 ವಿಶ್ವಕಪ್‌ನ ಸೂಪರ್ 12 ಹಂತದ ಪಂದ್ಯಗಳು ಬಹುತೇಕ ಮುಕ್ತಾಯವಾಗಿದ್ದು ಭಾರತ ಹಾಗು ನಮೀಬಿಯಾ ವಿರುದ್ಧದ ಏಕೈಕ ಪಂದ್ಯ ಬಾಕಿಯಿದೆ. ಟೀಮ್ ಇಂಡಿಯಾ, ದಕ್ಷಿಣ ಆಫ್ರಿಕಾ, ಹಾಲಿ ಚಾಂಪಿಯನ್ ವೆಸ್ಟ್ ಇಂಡೀಸ್ ಸಹಿತ ಸೂಪರ್ 12 ಹಂತದಲ್ಲಿ ಭಾಗವಹಿಸಿದ್ದ 12 ತಂಡಗಳ ಪೈಕಿ 8 ತಂಡಗಳು ಟೂರ್ನಿಯಿಂದ ಹೊರಬಿದ್ದಿದೆ. ಉಳಿದ ನಾಲ್ಕು ತಂಡಗಳು ಸೆಮಿ ಫೈನಲ್‌ಗೆ ಪ್ರವೇಶ ಪಡೆದುಕೊಂಡಿದೆ.

ಈ ಬಾರಿಯ ವಿಶ್ವಕಪ್‌ನಲ್ಲಿ ಇನ್ನು ಕೇವಲ ಮೂರು ಪಂದ್ಯಗಳು ಮಾತ್ರವೇ ಇದ್ದು ಚಾಂಪಿಯನ್ ಯಾರಾಗಲಿದ್ದಾರೆ ಎಂಬ ಕುತೂಹಲಕ್ಕೆ ಫೈನಲ್ ಪಂದ್ಯದಲ್ಲಿ ಉತ್ತರ ದೊರೆಯಲಿದೆ. ಬುಧವಾರ ಹಾಗೂ ಗುರುವಾರದಂದು ಸೆಮಿ ಫೈನಲ್ ಪಂದ್ಯಗಳು ನಡೆಯಲಿದ್ದು ಮುಂದಿನ ಭಾನುವಾರ ಫೈನಲ್ ಪಂದ್ಯ ನಡೆಯಲಿದೆ.

ಮೊದಲ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್‌ಗೆ ನ್ಯೂಜಿಲೆಂಡ್ ಎದುರಾಳಿ: ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಆರಂಬದಿಂದಲೇ ಅದ್ಭುತ ಪ್ರದರ್ಶನ ನೀಡಿದ ಇಂಗ್ಲೆಂಡ್ ತಂಡ ಸೂಪರ್ 12 ಹಂತದ ಐದು ಪಂದ್ಯಗಳ ಪೈಕಿ ನಾಲ್ಕರಲ್ಲಿ ಅದ್ಭುತ ಜಯ ಸಾಧಿಸಿದೆ. ಈ ಪ್ರದರ್ಶನದಿಂದಾಗಿ ಗ್ರೂಪ್ 1ರ ಮೊದಲ ತಂಡವಾಗಿ ಇಂಗ್ಲೆಂಡ್ ಸೆಮಿಫೈನಲ್‌ಗೆ ಪ್ರವೇಶ ಪಡೆದುಕೊಂಡಿದೆ. ಮತ್ತೊಂದೆಡೆ ನ್ಯೂಜಿಲೆಂಡ್ ತಂಡ ಗ್ರೂಪ್ 2ರಲ್ಲಿ ಉತ್ತಮ ಪ್ರದರ್ಶನ ನೀಡಿದೆ. ಪಾಕಿಸ್ತಾನದ ವಿರುದ್ಧ ಒಂದು ಪಂದ್ಯ ಸೋಲು ಕಂಡಿದ್ದು ಹೊರತುಪಡಿಸಿದರೆ ಉಳಿದೆಲ್ಲಾ ಪಂದ್ಯಗಳಲ್ಲಿಯೂ ಕಿವೀಸ್ ಪಡೆ ಸರ್ವಾಂಗೀಣ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದೆ. ಹೀಗಾಗಿ ಇಂಗ್ಲೆಂಡ್ ವಿರುದ್ಧ ಸೆಣೆಸಾಡಿ ಗೆಲುವು ಸಾಧಿಸುವ ವಿಶ್ವಾಸದಲ್ಲಿದೆ.

ಪಾಕಿಸ್ತಾನ ತಂಡಕ್ಕೆ ಆಸ್ಟ್ರೇಲಿಯಾ ಸವಾಲು: ಈ ಭಾರಿಯ ಟಿ20 ವಿಶ್ವಕಪ್‌ನ ಗ್ರೂಪ್ 2ರಲ್ಲಿ ಪಾಕಿಸ್ತಾನ ಅಜೇಯ ತಂಡವಾಗಿ ಸೆಮಿ ಫೈನಲ್‌ಗೆ ಪ್ರವೇಶ ಪಡೆದುಕೊಂಡಿದೆ. ಭಾರತ ಹಾಗೂ ನ್ಯೂಜಿಲೆಂಡ್‌ನಂತಾ ಬಲಿಷ್ಠ ತಂಡಗಳ ವಿರುದ್ಧ ಭರ್ಜರಿ ಪ್ರದರ್ಶನ ನೀಡಿ ಗೆಲುವು ಸಾಧಿಸಿರುವ ಪಾಕಿಸ್ತಾನ ತಂಡಕ್ಕೆ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ತಂಡ ಸವಾಲೊಡ್ಡಲಿದೆ. ಆಡಿದ ಐದು ಪಂದ್ಯಗಳ ಪೈಕಿ ನಾಲ್ಕರಲ್ಲಿ ಗೆಲುವು ಸಾಧಿಸಿದ ಆಸ್ಟ್ರೇಲಿಯಾ ದಕ್ಷಿಣ ಆಫ್ರಿಕಾ ತಂಡಕ್ಕಿಂತ ನೆಟ್‌ ರನ್‌ರೇಟ್‌ನಲ್ಲಿ ಮೇಲುಗೈ ಸಾಧಿಸಿದ್ದ ಕಾರಣದಿಂದಾಗಿ ಸೆಮಿಫೈನಲ್‌ಗೆ ಪ್ರವೇಶ ಗಿಟ್ಟಿಸಿಕೊಂಡಿದೆ. ಇದೀಗ ಪಾಕಿಸ್ತಾನ ತಂಡಕ್ಕೆ ಸೋಲುಣಿಸಿ ಫೈನಲ್‌ಗೆ ಪ್ರವೇಶಿಸುವ ಲೆಕ್ಕಾಚಾರದಲ್ಲಿದೆ ಆರೋನ್ ಫಿಂಚ್ ಪಡೆ.

ಭಾನುವಾರ ನಡೆಯಲಿದೆ ಫೈನಲ್: ಇನ್ನು ಈ ಬಾರಿಯ ಟಿ20 ವಿಶ್ವಕಪ್‌ನ ಫೈನಲ್ ಪಂದ್ಯ ಮುಂದಿನ ಭಾನುವಾರ ನಡೆಯಲಿದೆ. ಎರಡು ಸೆಮಿ ಫೈನಲ್‌ಗಳಲ್ಲಿ ಜಯ ಗಳಿಸಿದ 2 ತಂಡಗಳು ಈ ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗಲಿದ್ದು ಯಾರಿಗೆ ಚಾಂಪಿಯನ್ ಪಟ್ಟ ದೊರೆಯಲಿದೆ ಎಂಬ ಪ್ರಶ್ನೆಗೆ ಉತ್ತರ ದೊರೆಯಲಿದೆ. ಹೀಗಾಗಿ ಈ ನಿರ್ಣಾಯಕ ಘಟ್ಟಕ್ಕೆ ಪ್ರವೇಶಿಸುವ ಆ ಎರಡು ತಂಡಗಳು ಯಾವುದು ಎಂಬುದು ಕೂಡ ಪ್ರಮುಖವಾಗಿದೆ.

Story first published: Monday, November 8, 2021, 12:51 [IST]
Other articles published on Nov 8, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+