
ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಐಸಿಸಿ ಟಿ20 ಪುರುಷರ ವಿಶ್ವಕಪ್ ಗ್ರೂಪ್ Aನ ಎರಡನೇ ಪಂದ್ಯದಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ ವಿರುದ್ಧ ನೆದರ್ಲೆಂಡ್ಸ್ ಪಂದ್ಯ ಗೆದ್ದು ಬೀಗಿದೆ.
ಜಿಲಾಂಗ್ನ ಸೈಮಂಡ್ಸ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಯುಎಇ ನೀಡಿದ್ದ 112 ಟಾರ್ಗೆಟ್ ಬೆನ್ನತ್ತಿದ ನೆದರ್ಲೆಮಡ್ಸ್ 3 ವಿಕೆಟ್‌ಗಳಿಂದ ಪಂದ್ಯ ಗೆದ್ದು ಬೀಗಿತು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಯುಎಇ ಪರ ಮುಹಮ್ಮದ್ ವಾಸಿಂ 47 ಎಸೆತಗಳಲ್ಲಿ 41ರನ್ ಗಳಿಸಿದ್ದು ಬಿಟ್ಟರೆ ಬೇರೆ ಯಾವೊಬ್ಬ ಬ್ಯಾಟರ್ ಕೂಡ ತಂಡಕ್ಕೆ ಆಧಾರವಾಗುವಲ್ಲಿ ವಿಫಲಗೊಂಡರು. ನೆದರ್ಲೆಂಡ್ಸ್ ಪ್ರಬಲ ಬೌಲಿಂಗ್ ದಾಳಿಗೆ ಯುಎಇ ನಿಗದಿತ 20 ಒವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 111 ರನ್ ಕಲೆಹಾಕಿತು.
112ರನ್ ಗುರಿ ಬೆನ್ನತ್ತಿದ ನೆದರ್ಲೆಂಡ್ಸ್ ಕುಂಟುತ್ತಾ ಗುರಿ ತಲುಪುವಲ್ಲಿ ಯಶಸ್ವಿಯಾಯಿತು. 19.5 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು ನೆದರ್ಲೆಂಡ್ಸ್ ಗೆಲುವಿನ ಗೆರೆ ದಾಟಿದೆ.
ಯುಎಇ ಪರ ಪರ ಉತ್ತಮ ಬೌಲಿಂಗ್ ಮಾಡಿದ ಅಯಾನ್ ಅಫ್ಜಾನ್ ಖಾನ್ 3 ಓವರ್ ಬೌಲಿಂಗ್ ಮಾಡಿ 15ರನ್ ನೀಡಿ 1 ವಿಕೆಟ್ ಪಡೆದರು. ಜುನೈದ್ ಸಿದ್ದಿಕಿ 4 ಓವರ್‌ಗೆ 24ರನ್ ನೀಡಿ 3 ವಿಕೆಟ್ ಕಬಳಿಸಿದ್ರು.
ಇದಕ್ಕೂ ಮುನ್ನ ಯುಎಇ ಬೌಲರ್ ಅಯಾನ್ ಅಫ್ಜಾನ್ ಬ್ಯಾಟಿಂಗ್ ವೇಳೆಯಲ್ಲಿ ಎಡವಟ್ಟು ಮಾಡಿಕೊಂಡಿದ್ದಾರೆ. 7 ಎಸೆತಗಳಲ್ಲಿ 5 ರನ್ ಕಲೆಹಾಕಿ ಔಟಾದ ಅಫ್ಜಾನ್ ಖಾನ್ ಫ್ರೆಡ್ ಕ್ಲಾಸೆನ್‌ಗೆ ವಿಕೆಟ್ ಒಪ್ಪಿಸಿದ್ರು. ಔಟಾಗಿ ಪೆವಿಲಿಯನ್ ತೆರಳುತ್ತುವ ವೇಳೆಯಲ್ಲಿ 16 ವರ್ಷದ ಅಫ್ಘಾನ್ ಮುಗ್ಗರಿಸಿ ಬಿದ್ದಿದ್ದಾರೆ.
16 year old Aayan Afzal Khan played his first game in a World Cup today and had figures of 3-0-15-1. We're sure he'll remember it.
— 12th Khiladi (@12th_khiladi) October 16, 2022
But He will also remember this!pic.twitter.com/pjjHykvpxI
ಯುವ ಬ್ಯಾಟರ್ ಅಫ್ಜಾನ್ ಖಾನ್ ವಿಶ್ವಕಪ್‌ನಲ್ಲಿ ತನ್ನ ಮೊದಲ ಪಂದ್ಯವನ್ನಾಡುವಾಗ ಉತ್ತಮ ಬೌಲಿಂಗ್ ಪ್ರದರ್ಶಿಸಿದ್ದಲ್ಲದೆ ಬ್ಯಾಟಿಂಗ್ ಮುಗಿಸಿ ತೆರಳುವಾಗ ಬಿದ್ದಿದ್ದನ್ನು ಮರೆಯಲು ಸಾಧ್ಯವಿಲ್ಲ. ಪೆವಿಲಿಯನ್‌ನತ್ತ ಸಾಗುವಾಗ ಬೌಂಡರಿ ಲೈನ್‌ನ ಕುಷನ್ ದಾಟಲು ಹೋಗಿ ಎಡವಿ ಬಿದ್ದಿದ್ದಾರೆ. ನೆಮ್ಮದಿ ವಿಚಾರ ಏನಂದ್ರೆ ಸದ್ಯ ಅವರು ತಲೆಗೆ ಹೆಲ್ಮೆಟ್ ಧರಿಸಿದ್ದು, ಮುಖಕ್ಕೆ ಯಾವುದೇ ಗಾಯವಾಗಿಲ್ಲ.
5 ಎಸೆತಗಳಲ್ಲಿ 7ರನ್ ಕಲೆಹಾಕಿದ್ದ ಅಫ್ಜಾನ್ ಖಾನ್ ಔಟಾಗಿದ್ದರ ಕುರಿತು ಸಾಕಷ್ಟು ಕೋಪಗೊಂಡಿದ್ರು. ಹೀಗಾಗಿಯೇ ಸಾಕಷ್ಟು ಕೋಪದಿಂದಲೇ ಪೆವಿಲಿಯನ್‌ನತ್ತ ತೆರಳುವಾಗ ಈ ಘಟನೆ ನಡೆದಿದೆ.