ICC T20 World Cup: ಕೊನೆ ಕ್ಷಣದಲ್ಲಿ ಭಾರತದ ಟಿ20 ವಿಶ್ವಕಪ್ ತಂಡದಲ್ಲಿ ಬದಲಾವಣೆ ಸಾಧ್ಯತೆ

ಭಾರತ ಈಗಾಗಲೇ ಟಿ20 ವಿಶ್ವಕಪ್‌ಗಾಗಿ ತಂಡವನ್ನು ಅಂತಿಮಗೊಳಿಸಿದ್ದು, ಆಡುವ ಹನ್ನೊಂದರ ಬಳಗವನ್ನು ಅಂತಿಮಗೊಳಿಸಲು ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ಸರಣಿಯಲ್ಲಿ ವಿವಿಧ ಕಾಂಬಿನೇಷನ್‌ಗಳನ್ನು ಪ್ರಯತ್ನಿಸುತ್ತಿದೆ. ಆದರೆ, ಕೊನೆ ಹಂತದಲ್ಲಿ ಭಾರತದ ಟಿ20 ವಿಶ್ವಕಪ್ ತಂಡದಲ್ಲಿ ಬದಲಾವಣೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಮೊಹಮ್ಮದ್ ಶಮಿ ಮತ್ತು ದೀಪಕ್ ಹೂಡ ಲಭ್ಯತೆ ಬಗ್ಗೆ ಇನ್ನೂ ಯಾವುದೇ ಸ್ಪಷ್ಟನೆ ಇಲ್ಲದ ಕಾರಣ ಅಂತಿಮ ಕ್ಷಣದಲ್ಲಿ ಟೀಂ ಇಂಡಿಯಾದಲ್ಲಿ ಬದಲಾವಣೆ ಆಗಬಹುದು ಎಂದು ಹೇಳಲಾಗುತ್ತಿದೆ.
ಕೋವಿಡ್ -19 ಗೆ ತುತ್ತಾಗಿರುವ ಮೊಹಮ್ಮದ್ ಶಮಿ ಇನ್ನೂ ಚೇತರಿಸಿಕೊಳ್ಳುತ್ತಿದ್ದಾರೆ ದೀಪಕ್ ಹೂಡಾ ಬೆನ್ನಿನ ಗಾಯದಿಂದ ಬಳಲುತ್ತಿದ್ದಾರೆ. ಇಬ್ಬರೂ ಕೂಡ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ಅಲಭ್ಯರಾಗಿದ್ದಾರೆ. ಐಪಿಎಲ್ 2022 ರಿಂದ ಶಮಿ ಯಾವುದೇ ಟಿ 20 ಪಂದ್ಯಗಳನ್ನು ಆಡಿಲ್ಲವಾದ್ದರಿಂದ, ಕೊನೆಯ ಕ್ಷಣದಲ್ಲಿ ಬದಲಾವಣೆಯಾಗಬಹುದು.
ಬಿಸಿಸಿಐ ಅಕ್ಟೋಬರ್ 9 ರೊಳಗೆ ಗಾಯವನ್ನು ಲೆಕ್ಕಿಸದೆ ತಂಡದಲ್ಲಿ ಬದಲಾವಣೆಗಳನ್ನು ಮಾಡಬಹುದು. ಐಸಿಸಿ ಅನುಮತಿ ನೀಡಿದರೆ ಅಕ್ಟೋಬರ್ 15 ರವರೆಗೆ ಕೊನೆಯ ಕ್ಷಣದಲ್ಲಿ ಬದಲಾವಣೆಗಳನ್ನು ಮಾಡಲು ಅವರಿಗೆ ಇನ್ನೂ ಆರು ದಿನಗಳ ಅವಕಾಶವಿದೆ.

ಐಪಿಎಲ್ ನಂತರ ಯಾವುದೇ ಪಂದ್ಯವನ್ನಾಡಿಲ್ಲ
ಟಿ20 ವಿಶ್ವಕಪ್‌ಗೆ ಮೊದಲು ಶಮಿ ಯಾವುದೇ ಪಂದ್ಯಗಳನ್ನು ಆಡದಿರುವುದು ನಿಜಕ್ಕೂ ಕಳವಳಕಾರಿ. ಸಮಾಧಾನಕರ ಸಂಗತಿ ಎಂದರೆ, ಅವರು ಫಿಟ್ ಆಗಿದ್ದಾರೆ ಮತ್ತು ಅಭ್ಯಾಸ ಪಂದ್ಯಗಳಲ್ಲಿ ಆಡಲು ಸಾಧ್ಯವಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿದ್ದಾರೆ.
ತಂಡದಲ್ಲಿ ಬದಲಾವಣೆ ಮಾಡಲು ನಮಗೆ ಸಮಯವಿದೆ. ಹಾಗಾಗಿ, ನಮಗೆ ಅದರ ಬಗ್ಗೆ ಯಾವದೇ ಸಮಸ್ಯೆ ಇಲ್ಲ. ದೀಪಕ್ ಹೂಡಾ ಕುರಿತು ವರದಿ ಬಂದ ನಂತರ ನಮಗೆ ಹೆಚ್ಚಿನ ಸ್ಪಷ್ಟತೆ ಸಿಗಲಿದೆ. ಸದ್ಯಕ್ಕೆ, ತಂಡವು ಮೀಸಲು ಸೇರಿದಂತೆ ಒಂದೇ ಆಗಿರುತ್ತದೆ. ನಮಗೆ ಸ್ಪಷ್ಟತೆ ಸಿಗುವವರೆಗೆ ತಂಡದಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
T20 World Cup: ಟಿ20 ವಿಶ್ವಕಪ್ ಭಾರತ ತಂಡದಲ್ಲಿ ತಪ್ಪಾಗಿ ಆಯ್ಕೆಯಾದ 3 ಆಟಗಾರರು

ಬೌಲಿಂಗ್ ಸಮಸ್ಯೆ ಸುಧಾರಣೆಯಾಗಬೇಕಿದೆ
ಬೆನ್ನುನೋವಿನ ನಂತರ ಜಸ್ಪ್ರೀತ್ ಬುಮ್ರಾ ಇನ್ನೂ ಲಯವನ್ನು ಮರಳಿ ಪಡೆಯುತ್ತಿದ್ದಾರೆ. ಹರ್ಷಲ್ ಪಟೇಲ್ ಪಕ್ಕೆಲುಬಿನ ಗಾಯದಿಂದ ವಾಪಸಾಗಿದ್ದು ಇನ್ನೂ ಉತ್ತಮ ಪ್ರದರ್ಶನ ನೀಡಿಲ್ಲ. ಸುದೀರ್ಘ 6 ತಿಂಗಳ ಗಾಯದ ವಿರಾಮದಿಂದ ಮರಳಿದ ನಂತರ ದೀಪಕ್ ಚಹಾರ್ ಅವರಿಗೆ ಹೆಚ್ಚಿನ ಅವಕಾಶವನ್ನು ನೀಡಲಾಗಿಲ್ಲ. ಸ್ನಾಯು ಗಾಯದ ನಂತರ ಉಮೇಶ್ ಯಾದವ್ ಕೂಡ ಶೇಕಡಾ 100 ರಷ್ಟು ಫಿಟ್ ಆಗಿಲ್ಲ. ಮೊಹಮ್ಮದ್ ಶಮಿ ತಾಂತ್ರಿಕವಾಗಿ ಗಾಯಗೊಂಡಿಲ್ಲ ಆದರೆ ಇನ್ನೂ ಕೋವಿಡ್‌ನಿಂದ ಚೇತರಿಸಿಕೊಳ್ಳುತ್ತಿದ್ದಾರೆ ಮತ್ತು ಪ್ರಸ್ತುತ ಅವರು ಅಲಭ್ಯರಾಗಿದ್ದಾರೆ.
ಏಷ್ಯಾಕಪ್ ಮತ್ತು ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಭಾರತಕ್ಕೆ ಬೌಲಿಂಗ್ ದೊಡ್ಡ ಸಮಸ್ಯೆಯಾಗಿದೆ. ಅದರಲ್ಲೂ, ಹರ್ಷಲ್ ಪಟೇಲ್, ಬುಮ್ರಾ ತಂಡಕ್ಕೆ ಸೇರಿದ ಮೇಲೂ ಕೂಡ ಅಂತಿಮ ಓವರ್ ಗಳಲ್ಲಿ ಭಾರತ ಹೆಚ್ಚಿನ ರನ್ ಬಿಟ್ಟುಕೊಡುತ್ತಿರುವುದು ಕಳವಳಕಾರಿಯಾಗಿದೆ.

ಶಮಿ ಯಾವಾಗ ಮರಳುತ್ತಾರೆ ಗೊತ್ತಿಲ್ಲ
"ಮೊಹಮ್ಮದ್ ಶಮಿ ಯಾವಾಗ ಚೇತರಿಸಿಕೊಳ್ಳುತ್ತಾರೆ ಎಂದು ಹೇಳುವುದು ಕಷ್ಟ. ಅವರು ಹೃದಯ-ನಾಳೀಯ ಪರೀಕ್ಷೆಯನ್ನು ತೆರವುಗೊಳಿಸಬೇಕಾಗಿದೆ. ಈ ಸಮಯದಲ್ಲಿ, ನಾವು ವೈದ್ಯಕೀಯ ತಂಡದ ಅನುಮತಿಗಾಗಿ ಕಾಯುತ್ತಿದ್ದೇವೆ. ಅವರು ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ, ತಂಡಕ್ಕೆ ಸೇರಿಕೊಳ್ಳಬಹುದು," ಎಂದು ಬಿಸಿಸಿಐ ಅಧಿಕಾರಿ ಹೇಳಿದರು.
ವೈದ್ಯಕೀಯ ತಂಡವು ಶಮಿ ಹಿಂತಿರುಗುವ ಬಗ್ಗೆ ಯಾವುದೇ ಟೈಮ್‌ಲೈನ್ ಅನ್ನು ಒದಗಿಸಿಲ್ಲ, ಇದು ಆಯ್ಕೆದಾರರಿಗೆ ತಲೆನೋವಾಗಿದೆ. ಮೂಲಗಳ ಪ್ರಕಾರ, ಶಮಿಗೆ ಆಸ್ಟ್ರೇಲಿಯಾಕ್ಕೆ ಪ್ರಯಾಣಿಸಲು ಪರೀಕ್ಷೆಗಳನ್ನು ತೆರವುಗೊಳಿಸಲು ಅಕ್ಟೋಬರ್ 5 ರವರೆಗೆ ಸಮಯವಿದೆ. ಶಮಿ ಮೀಸಲು ಆಟಗಾರರಲ್ಲಿ ಸ್ಥಾನ ಪಡೆದಿದ್ದಾರೆ, ಭಾರತವು ಎಲ್ಲಾ ಮೀಸಲು ಆಟಗಾರರೊಂದಿಗೆ ಅಕ್ಟೋಬರ್ 6 ರಂದು ಆಸ್ಟ್ರೇಲಿಯಾಕ್ಕೆ ತೆರಳಲಿದೆ.

ದೀಪಕ್ ಹೂಡಾಗೆ ಗಾಯದ ಸಮಸ್ಯೆ
ದೀಪಕ್ ಹೂಡಾರ ಆರಂಭಿಕ ವರದಿಯು ಬೆನ್ನು ಸೆಳೆತ ಎಂದು ಸೂಚಿಸಿದ್ದರೂ, ಅದು ಸ್ಪಷ್ಟವಾಗಿಲ್ಲ. ಇದು ಬೆನ್ನಿನ ಗಾಯವಾಗಿದೆ. ಹೂಡಾ 15 ಸದಸ್ಯರ ತಂಡದಲ್ಲಿದ್ದಾರೆ ಮತ್ತು ತಂಡದಲ್ಲಿ ಕೇವಲ 2 ನೇ ಸ್ಪಿನ್ ಆಲ್‌ರೌಂಡರ್ ಆಗಿದ್ದಾರೆ. ಅಕ್ಷರ್ ಪಟೇಲ್ ಅವರ ಬ್ಯಾಕಪ್ ಆಗುವ ನಿರೀಕ್ಷೆಯಿದೆ.
"ಹೂಡಾಗೆ ಬೆನ್ನಿನ ಗಾಯವಾಗಿದೆ. ಅವರು ಬೆಂಗಳೂರಿನಲ್ಲಿ ಸ್ಕ್ಯಾನ್‌ಗೆ ಒಳಗಾಗುತ್ತಾರೆ ಮತ್ತು ಎನ್‌ಸಿಎಗೆ ವರದಿ ಮಾಡುತ್ತಾರೆ. ನನಗೆ ತಿಳಿದ ಮಟ್ಟಿಗೆ ಇದು ಗಂಭೀರವಾಗಿಲ್ಲ. ಆದರೆ ವೈದ್ಯಕೀಯ ತಂಡದಿಂದ ವರದಿ ಬಂದರೆ ಅದು ಸ್ಪಷ್ಟವಾಗಲಿದೆ. ಶ್ರೇಯಸ್ ಈಗಾಗಲೇ ಬ್ಯಾಕಪ್ ಆಗಿದ್ದು, ತಿರುವನಂತಪುರದಲ್ಲಿ ತಂಡವನ್ನು ಸೇರಿಕೊಂಡಿದ್ದಾರೆ. ಅಗತ್ಯವಿದ್ದರೆ, ಅವರು ವಿಶ್ವಕಪ್‌ಗೆ ಬರಬಹುದು," ಎಂದು ಬಿಸಿಸಿಐ ಅಧಿಕಾರಿ ಹೇಳಿದರು.
ಐಸಿಸಿ ಟಿ20 ವಿಶ್ವಕಪ್‌ಗೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಬ್ ಪಂತ್, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ಆರ್.ಅಶ್ವಿನ್, ಯುಜ್ವೇಂದ್ರ ಚಹಾಲ್, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications