ICC T20 Ranking: ಟಾಪ್ 10ನಿಂದ ಹೊರಬಿದ್ದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ

ಇತ್ತೀಚಿನ ಟಿ20 ಪಂದ್ಯಗಳಲ್ಲಿ ಸತತ ವೈಫಲ್ಯ ಅನುಭವಿಸಿರುವ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ, ಐಸಿಸಿ ಟಿ20 ರ್ಯಾಂಕಿಂಗ್ ಟಾಪ್ 10ನಿಂದ ಹೊರಬಿದ್ದಿದ್ದು, ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಕೂಡ ತಮ್ಮ ಸ್ಥಾನದಲ್ಲಿ ಕುಸಿತ ಕಂಡಿದ್ದಾರೆ.
ನಾಯಕ ರೋಹಿತ್ ಶರ್ಮಾ ಲಕ್ನೋ ಮತ್ತು ಧರ್ಮಶಾಲಾದಲ್ಲಿ ಪ್ರವಾಸಿ ಲಂಕಾದ ವಿರುದ್ಧ ಬೇಗನೆ ಔಟಾಗುವ ಮೂಲಕ 2 ಸ್ಥಾನಗಳನ್ನು ಕಳೆದುಕೊಂಡು 13 ನೇ ಸ್ಥಾನಕ್ಕೆ ಕುಸಿದಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧದ 3 ಪಂದ್ಯಗಳ ಟಿ20 ಅಂತರಾಷ್ಟ್ರೀಯ ಸರಣಿಯ ಮುಕ್ತಾಯದ ನಂತರ 10 ನೇ ಸ್ಥಾನದಲ್ಲಿದ್ದ ವಿರಾಟ್ ಕೊಹ್ಲಿ, ಸರಣಿಯ ಅಂತಿಮ ಪಂದ್ಯ ಮತ್ತು ಶ್ರೀಲಂಕಾ ವಿರುದ್ಧದ ಸಂಪೂರ್ಣ ಟಿ20 ಸರಣಿಯಲ್ಲಿ ವಿಶ್ರಾಂತಿ ಪಡೆದರು. ಗಮನಾರ್ಹವೆಂದರೆ, ವೆಸ್ಟ್ ಇಂಡೀಸ್ ವಿರುದ್ಧ 2ನೇ ಟಿ20 ಪಂದ್ಯದಲ್ಲಿ ಮ್ಯಾಚ್ ವಿನ್ನಿಂಗ್ ಫಿಫ್ಟಿ ಬಾರಿಸಿದಾಗ ಕೊಹ್ಲಿ ಫಾರ್ಮ್‌ಗೆ ಮರಳುವ ಲಕ್ಷಣಗಳನ್ನು ತೋರಿಸಿದ್ದರು. ಆದ್ರೆ ಮೂರನೇ ಪಂದ್ಯಕ್ಕೆ ಅಲಭ್ಯರಾಗಿದ್ದಷ್ಟೇ ಅಲ್ಲದೆ ಲಂಕಾ ವಿರುದ್ಧವೂ ವಿಶ್ರಾಂತಿ ಪಡೆದಿದ್ದಾರೆ.
ಇದೇ ಅವಧಿಯಲ್ಲಿ ಪೂರ್ಣ ಪ್ರಮಾಣದ ನಾಯಕನಾಗಿ ಆಯ್ಕೆಗೊಂಡ ಬಳಿಕ ರೋಹಿತ್ ದಾಖಲೆ ಮೇಲೆ ದಾಖಲೆ ಬರೆಯುತ್ತಿದ್ದಾರೆ. ಶ್ರೀಲಂಕಾ ವಿರುದ್ಧ 2 ಪಂದ್ಯಗಳಲ್ಲಿ ದುಷ್ಮಂತ ಚಮೀರಾಗೆ ಔಟ್ ಆಗುವ ಮೂಲಕ ಸಾಮಾನ್ಯ ಪ್ರದರ್ಶನ ನೀಡಿದರು. ಶ್ರೀಲಂಕಾ ವಿರುದ್ಧದ 3 ಪಂದ್ಯಗಳಲ್ಲಿ ಅವರು ಕೇವಲ 50 ರನ್ ಗಳಿಸಿದರು.
ಸರಣಿಯ ಸಮಯದಲ್ಲಿ ಅದ್ಭುತ ಫಾರ್ಮ್‌ನಲ್ಲಿದ್ದ ಶ್ರೇಯಸ್ ಅಯ್ಯರ್ ಟಿ20 ರ್ಯಾಂಕಿಂಗ್‌ನಲ್ಲಿ 27 ಸ್ಥಾನಗಳ ಏರಿಕೆಗೊಂಡು 18 ನೇ ಸ್ಥಾನಕ್ಕೆ ತಲುಪಿದ್ದಾರೆ. ಭಾರತವು ಶ್ರೀಲಂಕಾವನ್ನು 3-0 ಅಂತರದಿಂದ ಸೋಲಿಸಿದ ಸಂದರ್ಭದಲ್ಲಿ ಅಯ್ಯರ್ ಮೂರು ಅಜೇಯ ಅರ್ಧಶತಕಗಳನ್ನು ಗಳಿಸಿದರು, 27 ವರ್ಷ ವಯಸ್ಸಿನ ಅಯ್ಯರ್ 174 ರ ಸ್ಟ್ರೈಕ್ ರೇಟ್‌ನಲ್ಲಿ 204 ರನ್ ಗಳಿಸಿದರು.
ಟಾಪ್ 10ನಲ್ಲಿರುವ ಏಕೈಕ ಭಾರತೀಯ ಕೆ.ಎಲ್ ರಾಹುಲ್
ಗಾಯಗೊಂಡು ಶ್ರೀಲಂಕಾ ಸರಣಿಯನ್ನು ಸಹ ಕಳೆದುಕೊಂಡಿರುವ ಕೆ.ಎಲ್ ರಾಹುಲ್ ಅವರು ಅಗ್ರ 10 ರಲ್ಲಿ ಏಕೈಕ ಭಾರತೀಯ ಆಟಗಾರರಾಗಿದ್ದಾರೆ. ಏತನ್ಮಧ್ಯೆ, ಶ್ರೀಲಂಕಾದ ಪಾಥುಮ್ ನಿಸ್ಸಾಂಕಾ ಸರಣಿಯ ಎರಡನೇ ಪಂದ್ಯದಲ್ಲಿ 75 ರನ್ ಗಳಿಸಿದರು ಮತ್ತು ಅವರು ಆರು ಸ್ಥಾನಗಳ ಏರಿಕೆಯೊಂದಿಗೆ ಒಂಬತ್ತನೇ ಸ್ಥಾನಕ್ಕೆ ತಲುಪಿದ್ದಾರೆ.
ಪಾಕಿಸ್ತಾನ ನಾಯಕ ಬಾಬರ್ ಅಜಮ್ ಮತ್ತು ಮೊಹಮ್ಮದ್ ರಿಜ್ವಾನ್ ಐಸಿಸಿ ಟಿ20 ರ್ಯಾಂಕಿಂಗ್‌ನಲ್ಲಿ ಮೊದಲೆರಡು ಸ್ಥಾನ ಪಡೆದಿದ್ದಾರೆ.
ಇನ್ನು ಬೌಲರ್‌ಗಳ ಪಟ್ಟಿಯಲ್ಲಿ ಶ್ರೀಲಂಕಾ ವಿರುದ್ಧ ಉತ್ತಮ ಪ್ರದರ್ಶನ ನೀಡಿದ ಭುವನೇಶ್ವರ್ ಕುಮಾರ್ 3 ಸ್ಥಾನ ಏರಿಕೆ ಕಂಡು 17ನೇ ಸ್ಥಾನಕ್ಕೆ ತಲುಪಿದ್ದಾರೆ. ಅವರು ಅಗ್ರ 20 ರೊಳಗಿನ ಏಕೈಕ ಭಾರತೀಯ ಬೌಲರ್ ಆಗಿದ್ದು, ಜಸ್ಪ್ರೀತ್ ಬುಮ್ರಾ 3 ಸ್ಥಾನಗಳನ್ನು ಕಳೆದುಕೊಂಡು 28 ನೇ ಸ್ಥಾನಕ್ಕೆ ತಲುಪಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications