ICC Test Ranking: ರವಿಚಂದ್ರನ್ ಅಶ್ವಿನ್ ಈಗ ನಂಬರ್ 1 ಟೆಸ್ಟ್ ಬೌಲರ್

ಭಾರತ ತಂಡದ ಸ್ಟಾರ್ ಬೌಲರ್ ರವಿಚಂದ್ರನ್ ಅಶ್ವಿನ್ ಐಸಿಸಿ ಟೆಸ್ಟ್ ರ್‍ಯಾಂಕಿಂಗ್‌ನಲ್ಲಿ ನಂಬರ್ 1 ಬೌಲರ್ ಆಗಿದ್ದಾರೆ. ಕಳೆದ ವಾರ ಎರಡನೇ ಸ್ಥಾನದಲ್ಲಿದ್ದ ಅಶ್ವಿನ್ ಈ ವಾರ ಜೇಮ್ಸ್ ಆಂಡರ್ಸನ್‌ರನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ್ದಾರೆ.
ಸತತ 1466 ದಿನಗಳ ಕಾಲ ಐಸಿಸಿ ಟೆಸ್ಟ್ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿದ್ದ ಆಸ್ಟ್ರೇಲಿಯಾ ಟೆಸ್ಟ್ ತಂಡದ ನಾಯಕ ಪ್ಯಾಟ್ ಕಮಿನ್ಸ್ ಕಳೆದ ವಾರ ನಂಬರ್ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಕುಸಿತ ಕಂಡಿದ್ದರು. ಇಂಗ್ಲೆಂಡ್‌ನ 40 ವರ್ಷದ ವೇಗದ ಬೌಲರ್ ಜೇಮ್ಸ್ ಆಂಡರ್ಸನ್ ಅಗ್ರಸ್ಥಾನಕ್ಕೇರಿದ್ದರು.
ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲನೇ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದು ಅಗ್ರಸ್ಥಾನಕ್ಕೇರಲು ಕಾರಣವಾಗಿತ್ತು. ಎರಡನೇ ಟೆಸ್ಟ್‌ನಲ್ಲಿ ಆಂಡರ್ಸನ್ ಕೇವಲ ಮೂರು ವಿಕೆಟ್ ಪಡೆಯುವಲ್ಲಿ ಮಾತ್ರ ಸಫಲರಾಗಿದ್ದರು.
ಕಳೆದ ವಾರ ಅಶ್ವಿನ್ ಆಂಡರ್ಸನ್‌ಗಿಂದ ಕೇವಲ 2 ಅಂಕಗಳಿಂದ ಮಾತ್ರ ಹಿಂದಿದ್ದರು. ಈ ವಾರ ಅವರು ಆಂಡರ್ಸನ್‌ರನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಅವರು ರ್‍ಯಾಂಕಿಂಗ್‌ನಲ್ಲಿ ಮೊದಲನೇ ಸ್ಥಾನವನ್ನು ಅಲಂಕರಿಸಿದ್ದಾರೆ.
ರವಿಚಂದ್ರನ್ ಅಶ್ವಿನ್ 864 ಅಂಕಗಳೊಂದಿಗೆ ನಂಬರ್ 1 ಸ್ಥಾನದಲ್ಲಿದ್ದರೆ, ಜೇಮ್ಸ್ ಆಂಡರ್ಸನ್ 859 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಪ್ಯಾಟ್ ಕಮ್ಮಿನ್ಸ್ 3ನೇ ಸ್ಥಾನದಲ್ಲಿ ಮುಂದುವರೆದಿದ್ದಾರೆ. ಯಾವುದೇ ಪಂದ್ಯವನ್ನಾಡದಿದ್ದರೂ ಜಸ್ಪ್ರೀತ್ ಬುಮ್ರಾ 795 ಅಂಕಗಳೊಂದಿಗೆ 4ನೇ ಸ್ಥಾನಕ್ಕೆ ಏರಿಕೆ ಕಂಡಿದ್ದಾರೆ.

ರವೀಂದ್ರ ಜಡೇಜಾ 8ನೇ ಸ್ಥಾನಕ್ಕೆ ಏರಿಕೆ
ಭಾರತದ ಮತ್ತೊಬ್ಬ ಪ್ರಮುಖ ಆಲ್‌ರೌಂಡರ್ ರವೀಂದ್ರ ಜಡೇಜಾ, ಟೆಸ್ಟ್ ಬೌಲಿಂಗ್ ರ್‍ಯಾಂಕಿಂಗ್‌ನಲ್ಲಿ 8ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಕಳೆದ ವಾರ ಅವರು 9ನೇ ಸ್ಥಾನದಲ್ಲಿದ್ದರು. ರವೀಂದ್ರ ಜಡೇಜಾ ಟೆಸ್ಟ್ ಕ್ರಿಕೆಟ್‌ನಲ್ಲಿ ಆಲ್‌ರೌಂಡರ್ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
ಸದ್ಯ ನಂಬರ್ 1 ಬೌಲರ್ ಆಗಿರುವ ರವಿಚಂದ್ರನ್ ಅಶ್ವಿನ್, ಆಲ್‌ರೌಂಡರ್ ವಿಭಾಗದಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ. ಜಡೇಜಾ 460 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದು, ರವಿಚಂದ್ರನ್ ಅಶ್ವಿನ್ 376 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.

ಬ್ಯಾಟಿಂಗ್ ರ್‍ಯಾಂಕಿಂಗ್‌ನಲ್ಲಿ ರೋಹಿತ್ ಕುಸಿತ
ಬ್ಯಾಟಿಂಗ್‌ನಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಕುಸಿತ ಕಂಡಿದ್ದಾರೆ. 7ನೇ ಸ್ಥಾನದಲ್ಲಿದ್ದ ಅವರು ಈಗ 9ನೇ ಸ್ಥಾನಕ್ಕೆ ಕುಸಿದಿದ್ದು, ರಿಷಬ್ ಪಂತ್ ಕೂಡ 6ನೇ ಸ್ಥಾನದಿಂದ 8ನೇ ಸ್ಥಾನಕ್ಕೆ ಕುಸಿತ ಕಂಡಿದ್ದಾರೆ. ಕೇನ್ ವಿಲಿಯಮ್ಸನ್ 2 ಸ್ಥಾನಗಳ ಏರಿಕೆ ಕಂಡಿದ್ದು, 6ನೇ ಸ್ಥಾನಕ್ಕೆ ಜಿಗಿದಿದ್ದಾರೆ.
ಜೋ ರೂಟ್ ಕೂಡ ಎರಡು ಸ್ಥಾನಗಳಷ್ಟು ಏರಿಕೆ ಕಂಡಿದ್ದು 3ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಆಸ್ಟ್ರೇಲಿಯಾದ ಮಾರ್ನಸ್ ಲ್ಯಾಬುಸ್ಚಾಗ್ನೆ ಅಗ್ರಸ್ಥಾನದಲ್ಲಿ ಮುಂದುವರೆದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications