
ಸ್ಮಿತ್ ಮೊದಲೆರಡು ಇನ್ನಿಂಗ್ಸ್‌ಗಳಲ್ಲಿ 36 ಮತ್ತು 6 ರನ್
ಸ್ಟೀವ್ ಸ್ಮಿತ್ ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಬ್ಯಾಟ್‌ನೊಂದಿಗೆ ಉತ್ತಮ ಪ್ರದರ್ಶನವನ್ನು ನೀಡಿರಲಿಲ್ಲ. ಸ್ಮಿತ್ ಮೊದಲೆರಡು ಇನ್ನಿಂಗ್ಸ್‌ಗಳಲ್ಲಿ 36 ಮತ್ತು ಆರು ರನ್‌ಗಳೊಂದಿಗೆ ವಿಕೆಟ್ ಒಪ್ಪಿಸಿದರು. ಇದೀಗ ಅಜಂಗಿಂತ ಐದು ಪಾಯಿಂಟ್‌ಗಳ ಹಿಂದೆ ಬಿದ್ದು ಮೂರನೇ ಸ್ಥಾನಕ್ಕೆ ಇಳಿದಿದ್ದಾರೆ.
ಇದೇ ವೇಳೆ ಅತ್ಯುತ್ತಮ ಫಾರ್ಮ್‌ನಲ್ಲಿ ಸಾಗುತ್ತಿರುವ ಆಸ್ಟ್ರೇಲಿಯಾದ ಇನ್ನೋರ್ವ ಬ್ಯಾಟರ್ ಟ್ರಾವಿಸ್ ಹೆಡ್, ಮೊದಲ ಬಾರಿಗೆ ಅಗ್ರ ಐದು ಶ್ರೇಯಾಂಕದಲ್ಲಿ ಕಾಣಿಸಿಕೊಂಡರು. ಈಗ 826 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಇಂಗ್ಲೆಂಡ್‌ನ ಜೋ ರೂಟ್‌ನೊಂದಿಗೆ ಜಂಟಿ ನಾಲ್ಕನೇ ಸ್ಥಾನದಲ್ಲಿದ್ದಾರೆ.

ಶುಭಮನ್ ಗಿಲ್, ಚೇತೇಶ್ವರ ಪೂಜಾರ ದೊಡ್ಡ ಜಿಗಿತ
ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಬೆನ್ ಸ್ಟೋಕ್ಸ್ ಎರಡು ಸ್ಥಾನ ಏರಿಕೆ ಕಂಡು 23ನೇ ಸ್ಥಾನ ತಲುಪಿದ್ದರೆ, ಒಲ್ಲಿ ಪೋಪ್ 1 ಸ್ಥಾನ ಏರಿಕೆಯಿಂದ 28ನೇ ಶ್ರೇಯಾಂಕದಲ್ಲಿದ್ದಾರೆ.
ಇನ್ನು ಪಾಕಿಸ್ತಾನ ವಿರುದ್ಧದ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದ ಹ್ಯಾರಿ ಬ್ರೂಕ್ ಅವರು ಇತ್ತೀಚಿನ ಟೆಸ್ಟ್ ಬ್ಯಾಟಿಂಗ್ ಶ್ರೇಯಾಂಕದಲ್ಲಿ 11 ಸ್ಥಾನಗಳ ಜಿಗಿತ ಕಂಡು ಅಗ್ರ 50 ರೊಳಗೆ ಸ್ಥಾನ ಪಡೆದು, ಜಂಟಿ 44ನೇ ಸ್ಥಾನದಲ್ಲಿದ್ದಾರೆ.
ಇದೇ ವೇಳೆ ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿದ್ದ ಭಾರತದ ಬ್ಯಾಟರ್ ಚೇತೇಶ್ವರ ಪೂಜಾರ ಮತ್ತು ಶುಭಮನ್ ಗಿಲ್ ಕೂಡ ಟೆಸ್ಟ್ ಶ್ರೇಯಾಂಕದಲ್ಲಿ ದೊಡ್ಡ ಜಿಗಿತವನ್ನು ಕಂಡಿದ್ದಾರೆ. ಚೇತೇಶ್ವರ ಪೂಜಾರ ಇತ್ತೀಚಿನ ಅಪ್‌ಡೇಟ್‌ನಲ್ಲಿ 19 ಸ್ಥಾನಗಳ ಏರಿಕೆ ಕಂಡು 19ನೇ ಸ್ಥಾನಕ್ಕೆ ಬಂದರೆ, ಶುಭಮನ್ ಗಿಲ್ 10 ಸ್ಥಾನಗಳ ಏರಿಕೆಯೊಂದಿಗೆ ಜಂಟಿ 54ನೇ ಸ್ಥಾನದಲ್ಲಿದ್ದಾರೆ. ಇನ್ನೋರ್ವ ಬ್ಯಾಟರ್ ಶ್ರೇಯಸ್ ಅಯ್ಯರ್ ಕೂಡ 11 ಸ್ಥಾನ ಏರಿಕೆ ಕಂಡು 26ನೇ ಸ್ಥಾನದಲ್ಲಿದ್ದಾರೆ.

ಟೆಸ್ಟ್ ಬೌಲರ್ ರ್‍ಯಾಂಕಿಂಗ್
ಬೌಲರ್‌ಗಳ ಐಸಿಸಿ ಟೆಸ್ಟ್ ರ್‍ಯಾಂಕಿಂಗ್‌ನಲ್ಲಿ ಟಾಪ್ 10ರೊಳಗೆ ಸ್ಥಾನಪಲ್ಲಟಗೊಂಡ ಏಕೈಕ ಬೌಲರ್ ಕಗಿಸೊ ರಬಾಡ. ದಕ್ಷಿಣ ಆಫ್ರಿಕಾದ ವೇಗಿ ನಾಲ್ಕು ಸ್ಥಾನ ಮೇಲೇರಿ ಮೂರನೇ ಕ್ರಮಾಂಕದಲ್ಲಿದ್ದಾರೆ.
ಇನ್ನು ಬಾಂಗ್ಲಾದೇಶ ವಿರುದ್ಧದ ಪ್ರದರ್ಶನದ ನಂತರ ಅಕ್ಷರ್ ಪಟೇಲ್ ಮತ್ತು ಕುಲದೀಪ್ ಯಾದವ್ ಗಣನೀಯ ಲಾಭವನ್ನು ಗಳಿಸಿದ್ದಾರೆ. ಅಕ್ಷರ್ ಪಟೇಲ್ ತಮ್ಮ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಅಗ್ರ 20ರೊಳಗೆ ಪ್ರವೇಶಿಸಿ ಈಗ 18ನೇ ಸ್ಥಾನವನ್ನು ಆಕ್ರಮಿಸಿಕೊಂಡಿದ್ದಾರೆ. ಕುಲದೀಪ್ ಯಾದವ್ 19 ಸ್ಥಾನಗಳ ಜಿಗಿತ ಕಂಡು 49ನೇ ರ್‍ಯಾಂಕಿಂಗ್ ತಲುಪಿದ್ದಾರೆ.

ಆಲ್‌ರೌಂಡರ್‌ಗಳ ಶ್ರೇಯಾಂಕಗಳು
ಬಾಂಗ್ಲಾದೇಶದ ನಾಯಕ ಶಕೀಬ್ ಅಲ್ ಹಸನ್ ಅವರು ಆಲ್‌ರೌಂಡರ್‌ಗಳ ಶ್ರೇಯಾಂಕದಲ್ಲಿ ಬೆನ್ ಸ್ಟೋಕ್ಸ್‌ಗಿಂತ ಮುಂದಿದ್ದಾರೆ. ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ನಾಲ್ಕನೇ ಸ್ಥಾನಕ್ಕೆ ಇಳಿಯುತ್ತಿದ್ದಂತೆ ಶಕೀಬ್ ಅಲ್ ಹಸನ್ 3ನೇ ಸ್ಥಾನಕ್ಕೇರಿದರು.


Click it and Unblock the Notifications
