For Quick Alerts
ALLOW NOTIFICATIONS  
For Daily Alerts
 

ICC Test Rankings: ವೃತ್ತಿ ಜೀವನದ ಅತ್ಯುತ್ತಮ ಸ್ಥಾನಕ್ಕೇರಿದ ಪಾಕ್ ಆಟಗಾರರು

ICC Test Rankings: Career-best positions for 3 Pak players, Ashwin in Top-10

ಅಬುಧಾಬಿ: ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಟೆಸ್ಟ್‌ ಕ್ರಿಕೆಟ್ ರ್‍ಯಾಂಕಿಂಗ್‌ನಲ್ಲಿ ಪಾಕಿಸ್ತಾನದ ಮೂವರು ಬೌಲರ್‌ಗಳು ವೃತ್ತಿ ಜೀವನದ ಅತ್ಯುತ್ತಮ ಸಾಧನೆ ತೋರಿದ್ದಾರೆ. ಇತ್ತೀಚೆಗಷ್ಟೇ ಮುಕ್ತಾಯಗೊಂಡ ಜಿಂಬಾಬ್ವೆ-ಪಾಕಿಸ್ತಾನ ನಡುವಿನ ಎರಡು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಪಾಕ್‌ 2-0ಯ ಜಯ ಗಳಿಸಿತ್ತು. ಹೀಗಾಗಿ ಪಾಕ್‌ ಆಟಗಾರರ ರ್‍ಯಾಂಕಿಂಗ್‌ನಲ್ಲಿ ಗಣನೀಯ ಏರಿಕೆ ಕಂಡಿದೆ.

ಪಾಕಿಸ್ತಾನ ಬೌಲರ್‌ಗಳಾದ ಹಸನ್ ಅಲಿ, ಶಾಹೀನ್ ಅಫ್ರಿದಿ ಮತ್ತು ನೌಮನ್ ಅಲಿ ಟೆಸ್ಟ್‌ ರ್‍ಯಾಂಕಿಂಗ್‌ನಲ್ಲಿ ದೊಡ್ಡ ಜಿಗಿತ ಕಂಡಿದ್ದಾರೆ. ಇನ್ನು ಭಾರತೀಯ ಆಟಗಾರರಲ್ಲಿ ಬ್ಯಾಟ್ಸ್‌ಮನ್‌ ವಿರಾಟ್ ಕೊಹ್ಲಿ 5ನೇ, ರಿಷಭ್ ಪಂತ್ 6ನೇ, ರೋಹಿತ್ ಶರ್ಮಾ 8ನೇ ಸ್ಥಾನ ಪಡೆದುಕೊಂಡಿದ್ದಾರೆ. ಬೌಲರ್‌ಗಳಲ್ಲಿ ಆರ್‌ ಅಶ್ವಿನ್ 2ನೇ ಸ್ಥಾನದಲ್ಲಿದ್ದಾರೆ.

ಎತ್ತರಕ್ಕೆ ಜಿಗಿದ ಪಾಕ್ ಬೌಲರ್‌ಗಳು

ಎತ್ತರಕ್ಕೆ ಜಿಗಿದ ಪಾಕ್ ಬೌಲರ್‌ಗಳು

ಜಿಂಬಾಬ್ವೆ ಟೆಸ್ಟ್ ಸರಣಿಯ ಬಳಿಕ ಗಮನಾರ್ಹ ಎತ್ತರಕ್ಕೆ ಜಿಗಿದಿರುವ ಪಾಕ್‌ ಬೌಲರ್‌ಗಳೆಂದರೆ ಹಸನ್ ಅಲಿ (ದ್ವಿತೀಯ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ 5-27) 6 ಸ್ಥಾನ ಜಿಗಿದು ಸದ್ಯ 14ನೇ ಸ್ಥಾನದಲ್ಲಿದ್ದಾರೆ. ದ್ವಿತೀಯ ಟೆಸ್ಟ್‌ನ ದ್ವಿತೀಯ ಇನ್ನಿಂಗ್ಸ್‌ನಲ್ಲಿ 5-52 ಸಾಧನೆ ತೋರಿದ್ದ ಶಾಹೀನ್ ಅಫ್ರಿದಿ 9 ಸ್ಥಾನ ಜಿಗಿದು ಈಗ 22ರಲ್ಲಿದ್ದಾರೆ. ಮತ್ತೊಬ್ಬ ಬೌಲರ್ ನೌಮನ್ ಅಲಿ (ದ್ವಿತೀಯ ಟೆಸ್ಟ್‌ನ ದ್ವಿತೀಯ ಇನ್ನಿಂಗ್ಸ್‌ನಲ್ಲಿ 5-86) 54ರಿಂದ 46ನೇ ಸ್ಥಾನಕ್ಕೇರಿದ್ದಾರೆ.

ಟೆಸ್ಟ್‌ ಬ್ಯಾಟಿಂಗ್‌ ಸ್ಥಾನಗಳು

ಟೆಸ್ಟ್‌ ಬ್ಯಾಟಿಂಗ್‌ ಸ್ಥಾನಗಳು

1. ಕೇನ್ ವಿಲಿಯಮ್ಸನ್ (ನ್ಯೂಜಿಲೆಂಡ್, 919 ಪಾಯಿಂಟ್ಸ್‌), 2. ಸ್ಟೀವ್ ಸ್ಮಿತ್ (ಆಸ್ಟ್ರೇಲಿಯಾ, 891), 3. ಮಾರ್ನಸ್ ಲ್ಯಬುಶೇನ್ (ಆಸ್ಟ್ರೇಲಿಯಾ, 878), 4. ಜೋ ರೂಟ್ (ಇಂಗ್ಲೆಂಡ್), 5. ವಿರಾಟ್ ಕೊಹ್ಲಿ (ಭಾರತ), 6. ರಿಷಭ್ ಪಂತ್ (ಭಾರತ), 7. ಹೆನ್ರಿ ನಿಕೋಲ್ಸ್ (ನ್ಯೂಜಿಲೆಂಡ್), 8. ರೋಹಿತ್ ಶರ್ಮಾ (ಭಾರತ), 9. ಡೇವಿಡ್ ವಾರ್ನರ್ (ಆಸ್ಟ್ರೇಲಿಯಾ), 10. ಬಾಬರ್ ಅಝಾಮ್ (ಪಾಕಿಸ್ತಾನ್).

ಕಮಿನ್ಸ್ ಬೆಸ್ಟ್ ಬೌಲರ್

ಕಮಿನ್ಸ್ ಬೆಸ್ಟ್ ಬೌಲರ್

ಬೌಲಿಂಗ್‌: 1. ಪ್ಯಾಟ್ ಕಮಿನ್ಸ್ (ಆಸ್ಟ್ರೇಲಿಯಾ, 908), 2. ಆರ್ ಅಶ್ವಿನ್ (ಭಾರತ, 850), 3. ನೀಲ್ ವ್ಯಾಗ್ನರ್ (ನ್ಯೂಜಿಲೆಂಡ್, 825), 4. ಜೇಮ್ಸ್ ಆ್ಯಂಡರ್ಸನ್ (ಇಂಗ್ಲೆಂಡ್), 5. ಜೋಶ್ ಹ್ಯಾಝಲ್ವುಡ್ (ಆಸ್ಟ್ರೇಲಿಯಾ), 6. ಟಿಮ್ ಸೌಥೀ (ನ್ಯೂಜಿಲೆಂಡ್), 7. ಸ್ಟುವರ್ಟ್ ಬ್ರಾಡ್ (ಇಂಗ್ಲೆಂಡ್), 8. ಜೇಸನ್ ಹೋಲ್ಡರ್ (ವೆಸ್ಟ್ ಇಂಡೀಸ್), 9. ಕಾಗಿಸೊ ರಬಾಡ (ದಕ್ಷಿಣ ಆಫ್ರಿಕಾ), 10. ಮಿಚೆಲ್ ಸ್ಟಾರ್ಕ್ (ಆಸ್ಟ್ರೇಲಿಯಾ).

ಆಲ್ ರೌಂಡರ್, ದೇಶಗಳು

ಆಲ್ ರೌಂಡರ್, ದೇಶಗಳು

1. ಜೇಸನ್ ಹೋಲ್ಡರ್ (ವೆಸ್ಟ್‌ ಇಂಡೀಸ್, 423), 2. ಬೆನ್ ಸ್ಟೋಕ್ಸ್ (ಇಂಗ್ಲೆಂಡ್, 393), 3. ರವೀಂದ್ರ ಜಡೇಜಾ (ಭಾರತ, 386), 4. ಆರ್‌ ಅಶ್ವಿನ್ (ಭಾರತ), 5. ಶಕೀಬ್ ಅಲ್ ಹಸನ್ (ಬಾಂಗ್ಲಾದೇಶ).
ದೇಶಗಳ ರ್‍ಯಾಂಕಿಂಗ್‌: ಟೆಸ್ಟ್‌ ಕ್ರಿಕೆಟ್‌ನಲ್ಲಿ ಭಾರತ, ನ್ಯೂಜಿಲೆಂಡ್, ಇಂಗ್ಲೆಂಡ್, ಆಸ್ಟ್ರೇಲಿಯಾ, ಪಾಕಿಸ್ತಾನ ತಂಡಗಳು ಕ್ರಮವಾಗಿ ಮೊದಲ ಐದು ಸ್ಥಾನ ಪಡೆದುಕೊಂಡಿವೆ.

Story first published: Wednesday, May 12, 2021, 19:43 [IST]
Other articles published on May 12, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+