Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಬಾಂಗ್ಲಾ ಟೆಸ್ಟ್ ಡ್ರಾ, ಭಾರತದ ಐಸಿಸಿ ಶ್ರೇಯಾಂಕ ಕುಸಿತ

ದುಬೈ, ಜೂ.14: ಬಾಂಗ್ಲಾದೇಶ ಹಾಗೂ ಭಾರತ ನಡುವಿನ ಏಕೈಕ ಟೆಸ್ಟ್ ಪಂದ್ಯ ಡ್ರಾ ನಲ್ಲಿ ಅಂತ್ಯಗೊಂಡಿದ್ದರಿಂದ ಟೀಂ ಇಂಡಿಯಾದ ಐಸಿಸಿ ಶ್ರೇಯಾಂಕ ಕುಸಿದಿದೆ. ಭಾರತ ಎರಡು ಅಂಕ ಕಳೆದುಕೊಂಡು ಒಂದು ಸ್ಥಾನ ಕೆಳಗಿಳಿದಿದೆ. ಮೂರನೇ ಸ್ಥಾನದಿಂದ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ ಎಂದು ಭಾನುವಾರ ಪ್ರಕಟಗೊಂಡಿರುವ ಹೊಸ ಪಟ್ಟಿಯಲ್ಲಿ ಹೇಳಲಾಗಿದೆ.

ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಉತ್ತಮ ಅಟ ಪ್ರದರ್ಶಿಸಿದರೂ ಬಾಂಗ್ಲಾ ವಿರುದ್ದ ಪಂದ್ಯ ಗೆಲ್ಲಲು ಮಳೆ ಅಡ್ಡಿಯಾಯಿತು.

| ಚಿತ್ರಗಳು | ಪಂದ್ಯದ 5ನೇ ದಿನದ ವರದಿ

ಈ ಪಂದ್ಯಕ್ಕೂ ಮುನ್ನ ನ್ಯೂಜಿಲೆಂಡ್ ಜೊತೆಗೆ 99 ಅಂಕಗಳೊಂದಿಗೆ ಸಮನಾಗಿದ್ದ ಭಾರತ ಅಂಕ ಕಳೆದುಕೊಂಡು 97 ಅಂಕ ಪಡೆದು 4ನೇ ಸ್ಥಾನಕ್ಕೆ ಕುಸಿಯಿತು. ಇಂಗ್ಲೆಂಡ್ ಹಾಗೂ ಪಾಕಿಸ್ತಾನ ತಲಾ 97 ಅಂಕ ಗಳನ್ನು ಪಡೆದುಕೊಂಡಿದೆ.

India slip to 4th after draw in Bangladesh

ದಶಮಾಂಶ ಲೆಕ್ಕಾಚಾರದಂತೆ ಭಾರತ 97.47 ಅಂಕ, ಇಂಗ್ಲೆಂಡ್ 97.33 ಹಾಗೂ ಪಾಕಿಸ್ತಾನ 96.75 ಅಂಕ ಪಡೆದಿವೆ. ಈ ಮೂರು ತಂಡಗಳಿಂದ ಒಂದು ಅಂಕ ಕಡಿಮೆ ಪಡೆದಿರುವ ಶ್ರೀಲಂಕಾ 7ನೇ ಸ್ಥಾನದಲ್ಲಿದೆ.

ಜೂ.17ರಿಂದ ಪಾಕಿಸ್ತಾನ ಹಾಗೂ ಶ್ರೀಲಂಕಾ ಸರಣಿ ಆರಂಭಗೊಳ್ಳಲಿದ್ದು, ಅಂಕ ಪಟ್ಟಿಯಲ್ಲಿ ವ್ಯತ್ಯಾಸವಾಗಲಿದೆ. ಭಾರತ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಲ್ಲಿ ಡ್ರಾ ಪಡೆದುಕೊಂಡ ಬಾಂಗ್ಲಾದೇಶ 41 ಅಂಕಗಳೊಂದಿಗೆ 9ನೇ ಸ್ಥಾನದಲ್ಲಿದೆ. (ಪಿಟಿಐ)

Story first published: Wednesday, January 3, 2018, 10:03 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+