ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ-ಬಾಂಗ್ಲಾ ಟೆಸ್ಟ್ ಡ್ರಾ, ಪಂದ್ಯ ಗೆದ್ದ ಮಳೆರಾಯ

By Mahesh

ಫಾತುಲ್ಲಾ (ಬಾಂಗ್ಲಾದೇಶ), ಜೂ.14: ಬಾಂಗ್ಲಾದೇಶ ಹಾಗೂ ಭಾರತ ನಡುವಿನ ಏಕೈಕ ಟೆಸ್ಟ್ ಪಂದ್ಯ ನೀರಸ ಡ್ರಾ ನಲ್ಲಿ ಅಂತ್ಯ ಕಂಡಿದೆ. ಅಂತಿಮ ದಿನವಾದ ಭಾನುವಾರ ಕೂಡಾ ಮಳೆಯ ಕಾಟದ ನಡುವೆ ಬಾಂಗ್ಲಾದೇಶ ಮೊದಲ ಇನ್ನಿಂಗ್ಸ್ ನಲ್ಲಿ ಪೂರೈಸಿತು. ಅದರೆ, ಸಮಯದ ಅಭಾವದಿಂದ ಪಂದ್ಯ ಡ್ರಾನಲ್ಲಿ ಅಂತ್ಯ ಕಾಣಬೇಕಾಯಿತು.

ಭಾರತದ ಪರ ಆರ್ ಅಶ್ವಿನ್ 5 ವಿಕೆಟ್ ಹಾಗೂ ಹರ್ಭಜನ್ ಸಿಂಗ್ 3 ವಿಕೆಟ್ ಕಿತ್ತು ಬಾಂಗ್ಲಾದೇಶವನ್ನು 65.5 ಓವರ್ ಗಳಲ್ಲಿ 256 ಸ್ಕೋರಿಗೆ ನಿಯಂತ್ರಿಸಿದರು. [ವಾಸೀಂ ಅಕ್ರಂ ಹಿಂದಿಕ್ಕಿದ ಹಭರ್ಜನ್ ಸಿಂಗ್]

ಫಾಲೋ ಆನ್ ಪಡೆದ ಬಾಂಗ್ಲಾ ಎರಡನೇ ಇನ್ನಿಂಗ್ಸ್ ನಲ್ಲಿ 23 ರನ್ ಗಳಿಸಿದ್ದಾಗ ಪಂದ್ಯವನ್ನು ಅಂತ್ಯಗೊಳಿಸಲಾಯಿತು. ಜೂ.18 ರಿಂದ 3 ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿ ಆರಂಭವಾಗಲಿದೆ.[ವೇಳಾಪಟ್ಟಿ ನೋಡಿ]

ನಾಲ್ಕನೇ ದಿನದ ಅಂತ್ಯಕ್ಕೆ 110/3 ಸ್ಕೋರ್ ಮಾಡಿದ್ದ ಬಾಂಗ್ಲಾದೇಶ ಕೊನೆ ದಿನ 11 ರನ್ ಗಳಿಸುವಷ್ಟರಲ್ಲೇ ಶಕೀಬ್ ಅಲ್ ಹಸನ್ ವಿಕೆಟ್ ಕಳೆದುಕೊಂಡಿತು. [ಫಾತುಲ್ಲಾ ಟೆಸ್ಟ್ : ದಾಖಲೆಗಳ ಸುರಿಮಳೆ]

ನಂತರ ಆರ್ ಆಶ್ವಿನ್ ಸ್ಪಿನ್ ಕೈಚಳಕಕ್ಕೆ ಸಿಲುಕಿ ಸತತವಾಗಿ ವಿಕೆಟ್ ಕಳೆದುಕೊಳ್ಳಲಾರಂಭಿಸಿತು. 25 ಓವರ್ ಗಳಲ್ಲಿ 87 ರನ್ನಿತ್ತು ಅಶ್ವಿನ್ 5 ವಿಕೆಟ್ ಕಿತ್ತರು. ಬಾಂಗ್ಲಾ ಪರ ವಿಕೆಟ್ ಕೀಪರ್ ಲಿಟ್ಟನ್ ದಾಸ್ 44ರನ್ ಗಳಿಸಿದರೆ, ಸೌಮ್ಯ ಸರ್ಕಾರ್ 37 ರನ್ ಗಳಿಸಿದರು.

R Ashwin

ಈ ಟೆಸ್ಟ್ ಪಂದ್ಯ ಗೆದ್ದರೆ ಮಾತ್ರ ಟೀಂ ಇಂಡಿಯಾ ಐಸಿಸಿ ಶ್ರೇಯಾಂಕದಲ್ಲಿ 3ನೇ ಸ್ಥಾನ ಕಾಯ್ದುಕೊಳ್ಳಲು ಸಾಧ್ಯವಿತ್ತು. ಅದರೆ, ಪಂದ್ಯ ಡ್ರಾ ಅಗಿರುವುದರಿಂದ ಶ್ರೇಯಾಂಕದಲ್ಲಿ ಕುಸಿದಿದೆ.

| ಚಿತ್ರಗಳು | 3ನೇ ದಿನದ ವರದಿ

ಭಾರತ ತನ್ನ ಮೊದಲ ಇನ್ನಿಂಗ್ಸ್ 462/6 (103.3 ಓವರ್ಸ್) ಆಗಿದ್ದಾಗ ಡಿಕ್ಲೇರ್ ಮಾಡಿಕೊಂಡಿತು. ಇದಕ್ಕೆ ಉತ್ತರವಾಗಿ 30.1 ಓವರ್ ಗಳಲ್ಲಿ ಬಾಂಗ್ಲಾದೇಶ 11/3 ಸ್ಕೋರ್ ಮಾಡಿದೆ.

Rain delays start of play on Day 5

ಮೊದಲ ದಿನದಲ್ಲಿ ಟೀಂ ಇಂಡಿಯಾ ಭರ್ಜರಿ ಆಟ ಪ್ರದರ್ಶನ ನೀಡಿತ್ತು. ಅದರೆ, ಎರಡನೇ ದಿನದ ಆಟ ಆರಂಭಕ್ಕೆ ಭಾರಿ ಮಳೆ ಅಡ್ಡಿಪಡಿಸಿತ್ತು. [ಬಾಂಗ್ಲಾ ಟೆಸ್ಟ್ ಡ್ರಾ, ಭಾರತದ ಐಸಿಸಿ ಶ್ರೇಯಾಂಕ ಕುಸಿತ]

ಟೆಸ್ಟ್ ಪಂದ್ಯದ ಮೊದಲದಿನ ವಿರಾಟ್ ಕೊಹ್ಲಿ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಲಾಭ ಪಡೆದ ಶಿಖರ್ ಧವನ್ ಆಕರ್ಷಕ ಶತಕ ಹಾಗೂ ಮುರಳಿ ವಿಜಯ್ ಅವರ ಅರ್ಧಶತಕದ ನೆರವಿನಿಂದ ಹಲವು ದಾಖಲೆಗಳು ಧೂಳಿಪಟವಾಗಿತ್ತು.

ಖಾನ್ ಶಾಹೆಬ್ ಒಸ್ಮನ್ ಅಲಿ ಸ್ಟೇಡಿಯಂನಲ್ಲಿ ಮೊದಲು ಬ್ಯಾಟಿಂಗ್ ಮಾಡಿ ಮೊದಲ ದಿನದ ಅಂತ್ಯಕ್ಕೆ ಭಾರತ 56 ಓವರ್ ಗಳಲ್ಲಿ 239/0 ಸ್ಕೋರ್ ಮಾಡಿತ್ತು. ಕೊನೆಗೆ ಮುರಳಿ ವಿಜಯ್ 150 ರನ್ ಹಾಗೂ ಶಿಖರ್ ಧವನ್ 173 ರನ್ ಜೊತೆಗೆ ಅಜಿಂಕ್ಯ ರಹಾನೆ 98 ರನ್ ಗಳ ಉಪಯುಕ್ತ ಆಟದಿಂದಾಗಿ 462 ರನ್ ಸ್ಕೋರ್ ಮಾಡಿತ್ತು.

ಮಳೆಗಾಲದಲ್ಲಿ ಬಾಂಗ್ಲಾದೇಶ ಸರಣಿ ಇಟ್ಟುಕೊಳ್ಳುವ ಔಚಿತ್ಯ ಏನಿತ್ತೋ ಬಿಸಿಸಿಐ ಬಿಗ್ ಬಾಸ್ ಗಳಿಗೆ ಗೊತ್ತು. ಇನ್ನೂ ಎರಡು ದಿನಗಳ ಕಾಲ ಮಳೆ ಬೀಳುವ ಸಾಧ್ಯತೆಗಳು ನಿಚ್ಚಳವಾಗಿದೆ ಎಂದು ಸ್ಥಳೀಯ ಹವಾಮಾನ ಇಲಾಖೆ ಎಚ್ಚರಿಸಿದೆ. (ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X