For Quick Alerts
ALLOW NOTIFICATIONS  
For Daily Alerts
 

ಆವಿಷ್ಕಾ ಗುಣವರ್ದನೆ ದೋಷಮುಕ್ತಗೊಳಿಸಿದ ಐಸಿಸಿ ನ್ಯಾಯಮಂಡಳಿ

ICC tribunal clears Sri Lankas Avishka Gunawardene of corruption charges

ಅಬುಧಾಬಿ: ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ಆಟಗಾರ ಆವಿಷ್ಕಾ ಗುಣವರ್ದನೆ ಅವರನ್ನು ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ)ನ ಸ್ವತಂತ್ರ ಭ್ರಷ್ಟಾಚಾರ ವಿರೋಧಿ ನ್ಯಾಯಮಂಡಳಿ ದೋಷಮುಕ್ತಗೊಳಿಸಿ ಸೋಮವಾರ (ಮೇ 10) ತೀರ್ಪು ನೀಡಿದೆ (ಚಿತ್ರಕೃಪೆ: ಇಂಡಿಯನ್ ಪ್ರೀಮಿಯರ್ ಲೀಗ್‌ ಟ್ವಿಟರ್ ಪೇಜ್).

ಆವಿಷ್ಕಾ ಗುಣವರ್ದನೆ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿಬಂದಿತ್ತು. ಈಗ ನ್ಯಾಯಮಂಡಳಿ ಗುಣವರ್ದನೆ ಅವರನ್ನು ದೋಷಮುಕ್ತಗೊಳಿಸಿರುವುದರಿಂದ ಅವರಿನ್ನು ಈ ಕೂಡಲೇ ಕ್ರಿಕೆಟ್‌ ಸಂಬಂಧಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬಹುದಾಗಿದೆ.

ಎಮಿರೇಟ್ಸ್‌ ಕ್ರಿಕೆಟ್ ಬೋರ್ಡ್‌ನ ಭ್ರಷ್ಟಾಚಾರ ವಿರೋಧಿ ಮಂಡಳಿಯಿಂದ ಗುಣವರ್ದನೆ ವಿರುದ್ಧ ಎರಡು ಆರೋಪಗಳು ಕೇಳಿ ಬಂದಿದ್ದವು. ನ್ಯಾಯ ಮಂಡಳಿ ಕೈಗೆತ್ತಿಕೊಂಡ ಮೂರು ದೂರುಗಳಲ್ಲಿ ಶ್ರೀಲಂಕಾದ ನುವಾನ್ ಝೋಯಸ್ ವಿರುದ್ಧದ ಆರೋಪ ಎತ್ತಿ ಹಿಡಿದಿದೆ. ಆದರೆ ಇನ್ನೆರಡು ಆರೋಪಗಳನ್ನು ವಜಾಗೊಳಿಸಿದೆ.

ಗುಣವರ್ದನೆ ವಿರುದ್ಧ ನೇರವಾಗಿ ಅಥವಾ ಪರೋಕ್ಷವಾಗಿ ಭ್ರಷ್ಟಾಚಾರದಲ್ಲಿ ಪಾಲ್ಗೊಂಡ ಆರೋಪ ಕೇಳಿಬಂದಿತ್ತು. ಬ್ಯಾಟ್ಸ್‌ಮನ್ ಆಗಿದ್ದ 43ರ ಹರೆಯದ ಆವಿಷ್ಕಾ, 6 ಟೆಸ್ಟ್‌ ಪಂದ್ಯಗಳಲ್ಲಿ 181 ರನ್, 61 ಏಕದಿನ ಪಂದ್ಯಗಳಲ್ಲಿ 1708 ರನ್ ಬಾರಿಸಿದ್ದಾರೆ.

Story first published: Tuesday, May 11, 2021, 9:35 [IST]
Other articles published on May 11, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+