ಬಾಂಗ್ಲಾ ಮಣಿಸಿ, ಸೆಮಿಫೈನಲ್ ಪ್ರವೇಶಿಸಿದ ಭಾರತ

ಕ್ವೀನ್ ಟೌನ್, ಜನವರಿ 26: ಮೂರು ಬಾರಿ ಚಾಂಪಿಯನ್ ಭಾರತ ತಂಡವು ಐಸಿಸಿ ಅಂಡರ್ 19 ವಿಶ್ವಕಪ್ ಸೆಮಿಫೈನಲ್ ಪ್ರವೇಶಿಸಿದೆ. ಇಂದು ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ 131ರನ್ ಗಳ ಭರ್ಜರಿ ಜಯ ದಾಖಲಿಸಿತು.
ಮೂರು ಬಾರಿ ವಿಶ್ವ ಚಾಂಪಿಯನ್ ಭಾರತ ತಂಡ ಹಾಗೂ ಪಾಕಿಸ್ತಾನ ವಿರುದ್ಧ ಜನವರಿ 30ರಂದು ಸೆಮಿಫೈನಲ್ ಪಂದ್ಯ ನಡೆಯಲಿದೆ. ಮತ್ತೊಂದು ಸೆಮಿಫೈನಲ್ ನಲ್ಲಿ ಆಸ್ಟ್ರೇಲಿಯಾ ಹಾಗೂ ಅಫ್ಘಾನಿಸ್ತಾನ ಸೆಣೆಸಲಿವೆ.
ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ 49.2 ಓವರ್ ಗಳಲ್ಲಿ 265 ಸ್ಕೋರ್ ಮಾಡಿತು. ಶುಭಂ ಗಿಲ್ ಮತ್ತೊಮ್ಮೆ ಮಿಂಚಿ 86ರನ್ ಚೆಚ್ಚಿದರು. ಅಭಿಷೇಕ್ ಶರ್ಮ 50ರನ್ ಗಳಿಸಿದರು. ನಾಯಕ ಪೃಥ್ವಿ ಶಾ(40), ಹಾರ್ವಿಕ್ ದೇಸಾಯಿ (34) ಉತ್ತಮ ಕೊಡುಗೆ ನೀಡಿದರು.
ಇದಕ್ಕೆ ಉತ್ತರವಾಗಿ ಬಾಂಗ್ಲಾದೇಶ ತಂಡವು 42.1 ಓವರ್ ಗಳಲ್ಲಿ 134 ಸ್ಕೋರಿಗೆ ಆಲೌಟ್ ಆಯಿತು. ಕಮಲೇಶ್ ನಾಗರ್ ಕೋಟಿ 7.1 ಓವರ್ ಗಳಲ್ಲಿ 18 ರನ್ನಿತ್ತು 3 ವಿಕೆಟ್ ಕಬಳಿಸಿದರು. ಬಾಂಗ್ಲಾ ಪರ ಪಿನಾಕ್ ಘೋಶ್ 43ರನ್ ಗಳಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications