Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಯು 19 ವಿಶ್ವಕಪ್, ಸೆ.ಫೈನಲ್‌: ಭಾರತ vs ಪಾಕಿಸ್ತಾನ, ಪ್ರಮುಖ ಮಾಹಿತಿ

ICC U-19 World Cup: India vs Pakistan, Super League Semi-Final Preview

ಪೊಚೆಫ್‌ಸ್ಟ್ರೂಮ್, ಫೆಬ್ರವರಿ 3: ಐಸಿಸಿ ಅಂಡರ್ 19 ವಿಶ್ವಕಪ್ ಮೊದಲ ಸೆಮಿಫೈನಲ್ ಪಂದ್ಯ ಅತ್ಯಂತ ಕುತೂಹಲಕಾರಿ ಎನಿಸಿದೆ. ಯಾಕೆಂದರೆ ಮಂಗಳವಾರ (ಫೆಬ್ರವರಿ 2) ಕ್ರಿಕೆಟ್‌ ಜಗತ್ತಿನ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ಅಂಡರ್ 19 ತಂಡಗಳು ಕಾದಾಡಲಿವೆ.

ಪೊಚೆಫ್‌ಸ್ಟ್ರೂಮ್‌ನ ಸೆನ್ವೆಸ್ ಪಾರ್ಕ್ ಸ್ಟೇಡಿಯಂನಲ್ಲಿ ನಡೆಯಲಿರುವ ಇತ್ತಂಡಗಳ ರೋಚಕ ಪಂದ್ಯ, ಮಂಗಳವಾರ 1.30 pmಗೆ ಆರಂಭಗೊಳ್ಳಲಿದೆ. ಪ್ರಿಯಾಮ್ ಗರ್ಗ್ ನಾಯಕತ್ವದಲ್ಲಿರುವ ಭಾರತ ಯುವ ತಂಡ ಸದ್ಯ ಆಡಿರುವ ಮೂರೂ ಪಂದ್ಯಗಳಲ್ಲೂ ಗೆದ್ದು ಗ್ರೂಪ್‌ 'ಎ' ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

ಒಟ್ಟು ನಾಲ್ಕು ಬಾರಿ ವಿಶ್ವಚಾಂಪಿಯನ್ ಅನ್ನಿಸಿರುವ ಹಾಲಿ ಚಾಂಪಿಯನ್ಸ್ ಭಾರತ ಅಂಡರ್ 19 ತಂಡ, ಈ ಹಿಂದೆ ಒಟ್ಟು 6 ಬಾರಿಸಿ ಫೈನಲ್ ಪ್ರವೇಶಿಸಿತ್ತು. ಈ ಬಾರಿ ಕ್ವಾರ್ಟರ್ ಫೈನಲ್‌ನಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಿ ಭಾರತ ಸೆಮಿಫೈನಲ್ ಪ್ರವೇಶಿಸಿದ್ದರೆ, ಪಾಕ್ ತಂಡ ಅಫ್ಘಾನಿಸ್ತಾನ ಮಣಿಸಿ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದೆ.

ಸೆನ್ವೆಸ್ ಪಾರ್ಕ್ ಸ್ಟೇಡಿಯಂ ಬ್ಯಾಟಿಂಗ್ ಪಿಚ್ ಅನ್ನಿಸಿದರೂ ಇಲ್ಲಿ ಮೊದಲು ಬ್ಯಾಟಿಂಗ್‌ ಮಾಡುವ ತಂಡಕ್ಕೆ ಹೆಚ್ಚು ಅನುಕೂಲವಾಗಲಿದೆ ಎನ್ನುತ್ತಿದೆ ಪಿಚ್ ರಿಪೋರ್ಟ್. ಅಂದರೆ ಈ ಪಿಚ್‌ನಲ್ಲಿ ಚೇಸಿಂಗ್ ಕೊಂಚ ಕಷ್ಟ. ಕುತೂಹಲಕಾರಿ ಪಂದ್ಯ ಸ್ಟಾರ್ ಸ್ಪೋರ್ಟ್ಸ್‌, ಹಾಟ್ ಸ್ಟಾರ್‌ನಲ್ಲಿ ನೇರಪ್ರಸಾರಗೊಳ್ಳಲಿದೆ. ಮೈಖೇಲ್ ಕನ್ನಡದಲ್ಲೂ ಲೈವ್ ಸ್ಕೋರ್‌ಕಾರ್ಡ್ ಲಭ್ಯವಿರಲಿದೆ.

ಭಾರತ ಯು 19 ತಂಡ: ಯಶಸ್ವಿ ಜೈಸ್ವಾಲ್, ದಿವ್ಯಾನ್ಶ್ ಸಕ್ಸೇನಾ, ತಿಲಕ್ ವರ್ಮಾ, ಪ್ರಿಯಾಮ್ ಗರ್ಗ್ (ಸಿ), ಧ್ರುವ್ ಜುರೇಲ್ (ವಿಕೆ), ಸಿದ್ಧೇಶ್ ವೀರ್, ಅಥರ್ವ ಅಂಕೋಲೆಕರ್, ರವಿ ಬಿಷ್ಣೋಯ್, ಸುಶಾಂತ್ ಮಿಶ್ರಾ, ಕಾರ್ತಿಕ್ ತ್ಯಾಗಿ, ಆಕಾಶ್ ಸಿಂಗ್, ವಿದ್ಯಾಧರ್ ಪಾಟಿಲ್, ಶುಭಾಂಗ್ ಹೆಗ್ಡೆ, ಶಾಶ್ವತ್ ರಾವತ್, ಕುಮಾರ್ ಕುಶಾಗ್ರ.

ಪಾಕಿಸ್ತಾನ ಯು 19 ತಂಡ: ಹೈದರ್ ಅಲಿ, ಮೊಹಮ್ಮದ್ ಹುರೈರಾ, ರೋಹೈಲ್ ನಜೀರ್ (ವಿಕೆ/ಸಿ), ಫಹಾದ್ ಮುನೀರ್, ಖಾಸಿಮ್ ಅಕ್ರಮ್, ಮೊಹಮ್ಮದ್ ಹ್ಯಾರಿಸ್, ಇರ್ಫಾನ್ ಖಾನ್, ಅಬ್ಬಾಸ್ ಅಫ್ರಿದಿ, ತಾಹಿರ್ ಹುಸೇನ್, ಅಮೀರ್ ಅಲಿ, ಮೊಹಮ್ಮದ್ ಅಮೀರ್ ಖಾನ್, ಮೊಹಮ್ಮದ್ ವಾಸಿಮ್ ಜೂನಿಯರ್, ಅಬ್ದುಲ್ ಬಂಗಲ್ಜೈ, ಮೊಹಮ್ಮದ್ ಶಹಝಾದ್, ಆರಿಶ್ ಅಲಿ ಖಾನ್.

Story first published: Monday, February 3, 2020, 19:15 [IST]
Other articles published on Feb 3, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+