ICC Under-19 World Cup 2026: ಸೂಪರ್ ಸಿಕ್ಸ್‌ನಲ್ಲಿ ಭಾರತ, ಪಾಕ್ ಬಿಗ್ ಫೈಟ್
ಬುಲವಾಯೊ: ಭಾರತ ಹಾಗೂ ಪಾಕಿಸ್ತಾನ ತಂಡಗಳು 2026ರಲ್ಲಿ ಚೊಚ್ಚಲ ಬಾರಿಗೆ ಐಸಿಸಿ ಅಂಡರ್ 19 ವಿಶ್ವಕಪ್‌ನಲ್ಲಿ ಭಾನುವಾರ ಕಾದಾಟ ನಡೆಸಲಿವೆ. ಉಭಯ ತಂಡಗಳು ಸೂಪರ್ ಸಿಕ್ಸ್ ಹಂತದಲ್ಲಿ ಮುಖಾಮುಖಿ ಆಗುತ್ತಿದ್ದರಿಂದ ಎಲ್ಲರ ಚಿತ್ತ ಕದ್ದಿದೆ. ಸೂಪರ್ ಸಿಕ್ಸ್ ಹಂತದಲ್ಲಿ ಭರ್ಜರಿ ಪ್ರದರ್ಶನ ನೀಡುವ ತಂಡಗಳು ಸೆಮಿಫೈನಲ್ ಹಂತವನ್ನು ಪ್ರವೇಶಿಸಲಿವೆ. ಹೀಗಾಗಿ ಈ ಪಂದ್ಯ ಉಭಯ ತಂಡಗಳಿಗೂ ಮಹತ್ವದಾಗಿದೆ.
ಎರಡನೇ ಗುಂಪಿನ ಸೂಪರ್ ಸಿಕ್ಸ್ ಹಂತದ ಪಂದ್ಯದಲ್ಲಿ ಭಾರತ (ಆರು ಅಂಕ), ಪಾಕ್ (ಮೂರು ಅಂಕ) ಮುಂದಿನ ಹಂತ ಪ್ರವೇಶಿಸುವ ಕನಸು ಕಾಣುತ್ತಿದೆ. ಟೀಮ್ ಇಂಡಿಯಾ ಈ ಪಂದ್ಯದಲ್ಲಿ ಸುಲಭ ಗೆಲುವು ದಾಖಲಿಸಿ ನೇರವಾಗಿ ಸೆಮಿಫೈನಲ್ ಪ್ರವೇಶಿಸುವ ಕನಸು ಕಾಣುತ್ತಿದೆ. ಭಾರತದ ನೆಟ್ ರನ್ ರೇಟ್ ಸಹ ಪಾಕಿಸ್ತಾನಕ್ಕಿಂತ ಉತ್ತಮವಾಗಿದೆ. ಪಾಕಿಸ್ತಾನ ಈ ಪಂದ್ಯದಲ್ಲಿ ದೊಡ್ಡ ಅಂತರದ ಗೆಲುವು ಸಾಧಿಸುವ ಕನಸು ಕಾಣುತ್ತಿದೆ. ಪಾಕಿಸ್ತಾನ ಮೊದಲು ಬ್ಯಾಟ್ ಮಾಡಿದರೆ 85 ರನ್‌ಗಳಿಗಿಂತಲೂ ದೊಡ್ಡ ಅಂತರದ ಗೆಲುವು ಬೇಕಾಗುತ್ತದೆ. ಇನ್ನು ಗುರಿಯನ್ನು ಬೆನ್ನಟ್ಟಿದಾಗ ಪಾಕ್ 33.2 ಓವರ್‌ಗಳಲ್ಲಿ ಜಯ ಸಾಧಿಸಬೇಕು. ಅಂದಾಗ ಮುಂದಿನ ಹಾದಿ ಸುಗಮವಾಗುತ್ತದೆ.

ಉಭಯ ತಂಡಗಳು ಅಂಡರ್ 19 ಏಷ್ಯಾ ಕಪ್ ಫೈನಲ್‌ನಲ್ಲಿ ಒಂದು ತಿಂಗಳ ಹಿಂದೆ ಮುಖಾಮುಖಿಯಾಗಿದ್ದವು. ದುಬೈನಲ್ಲಿ ನಡೆದ ಪಂದ್ಯದಲ್ಲಿ ಪಾಕ್ 191 ರನ್‌ಗಳ ಜಯ ಸಾಧಿಸಿತ್ತು. ಇದೇ ಟೂರ್ನಿಯಲ್ಲಿ ಭಾರತ ಪಾಕ್ ತಂಡವನ್ನು 90 ರನ್‌ಗಳಿಂದ ಗುಂಪು ಹಂತದಲ್ಲಿ ಸೋಲಿಸಿತ್ತು.
ಭಾರತ, ಪಾಕ್ ಪಂದ್ಯವನ್ನು ನೋಡುವುದು ಹೇಗೆ?
ಐಸಿಸಿ ಅಂಡರ್ 19 ವಿಶ್ವಕಪ್‌ನ ಸೂಪರ್ ಸಿಕ್ಸ್ ಹಂತದ ಪಂದ್ಯದಲ್ಲಿ ಭಾರತ ಹಾಗೂ ಪಾಕ್ ತಂಡಗಳು ಮುಖಾಮುಖಿ ಆಗಲಿದ್ದು, ಈ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ವೀಕ್ಷಿಸಬಹುದು. ಅಲ್ಲದೆ ಆನ್‌ಲೈನ್‌ನಲ್ಲಿ ಜಿಯೋಹಾಟ್‌ಸ್ಟಾರ್‌ನಲ್ಲಿ ನೋಡಬಹುದಾಗಿದೆ.
ಪಂದ್ಯ ನಡೆಯುವ ಸಮಯ ಯಾವಾಗ?
ಭಾರತ ಹಾಗೂ ಪಾಕ್ ನಡುವಣ ಪಂದ್ಯ ಮಧ್ಯಾಹ್ನ 1 ಗಂಟೆಗೆ ಆರಂಭವಾಗಲಿದೆ. ಪಂದ್ಯಕ್ಕೂ ಅರ್ಧಗಂಟೆ ಮುನ್ನ ಟಾಸ್ ನಡೆಯಲಿದೆ.
ಭಾರತ ತಂಡದಲ್ಲಿರುವ ಆಟಗಾರರು ಯಾರು?
ಏರಾನ್ ಜಾರ್ಜ್, ವೈಭವ್ ಸೂರ್ಯವಂಶಿ, ಆಯುಷ್ ಮ್ಹಾತ್ರೆ (ನಾಯಕ), ವೇದಾಂತ್ ತ್ರಿವೇದಿ, ವಿಹಾನ್ ಮಲ್ಹೋತ್ರಾ, ಅಭಿಜ್ಞಾನ್ ಕುಂಡು (ವಿಕೆಟ್ ಕೀಪರ್), ಕನಿಷ್ಕ್ ಚೌಹಾಣ್, ಆರ್ ಎಸ್ ಅಂಬರೀಶ್, ಖಿಲಾನ್ ಪಟೇಲ್, ಹೇನಿಲ್ ಪಟೇಲ್, ಉದ್ಧವ್ ಮೋಹನ್, ಹರ್ವಂಶ್ ಸಿಂಗ್, ಮೊಹಮ್ಮದ್ ಎನಾನ್, ದೀಪೇಶ್ ದೇವೇಂದ್ರನ್, ಕಿಶನ್ ಕುಮಾರ್ ಸಿಂಗ್.
ಪಾಕಿಸ್ತಾನ ತಂಡದಲ್ಲಿರುವ ಪ್ಲೇಯರ್ಸ್ ಯಾರು?
ಹಮ್ಜಾ ಜಹೂರ್ (ವಿಕೆಟ್ ಕೀಪರ್), ಸಮೀರ್ ಮಿನ್ಹಾಸ್, ಉಸ್ಮಾನ್ ಖಾನ್, ಫರ್ಹಾನ್ ಯೂಸುಫ್ (ನಾಯಕ), ಅಹ್ಮದ್ ಹುಸೇನ್, ಹುಜೈಫಾ ಅಹ್ಸಾನ್, ಅಬ್ದುಲ್ ಖಾದಿರ್ (ವಿಕೆಟ್ ಕೀಪರ್), ಅಬ್ದುಲ್ ಸುಭಾನ್, ಮೊಮಿನ್ ಕಮರ್, ಮೊಹಮ್ಮದ್ ಸೈಯಾಮ್, ಅಲಿ ರಜಾ, ಉಮರ್ ಜೈಬ್, ಅಲಿ ಹಸನ್ ಬಲೋಚ್, ದಾನಿಯಾಲ್ ಅಲಿ ಖಾನ್, ನಕಾಬ್ ಶಫೀಕ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications