For Quick Alerts
ALLOW NOTIFICATIONS  
For Daily Alerts
 

ಭಾವನಾತ್ಮಕ ಪಂದ್ಯ ಗೆಲ್ಲಲು ಶಾಂತಿಯುತ ಭಾರತ, ತೀವ್ರವಾದಿ ಪಾಕ್ ಚಿತ್ತ

By R Kaushik, London
ICC WC 2019: Tranquil India, intense Pakistan seek victory from emotional cauldron

ಲಂಡನ್, ಜೂನ್ 15: ಭಾನುವಾರ (ಜೂನ್ 16) ಭಾರತ vs ಪಾಕಿಸ್ತಾನ ತಂಡಗಳ ನಡುವಿನ ಪಂದ್ಯಕ್ಕೂ ಮುನ್ನ ಶನಿವಾರದ ಭಾರತ ತಂಡದ ಅಭ್ಯಾಸವನ್ನು ನೋಡಲು ನಾವೊಂದಿಷ್ಟು ಮಂದಿ ಓಲ್ಡ್ ಟ್ರಾಫರ್ಡ್ ಮೈದಾನದತ್ತ ಸಾಗುತ್ತಿದ್ದೆವು. ರಸ್ತೆಯಲ್ಲಿ ಸಾಗುತ್ತಿದ್ದಾಗ ಅಲ್ಲಿನ ಟ್ರಾಫಿಕ್ ಸಿಗ್ನಲ್ ಬಳಿ ಅಪರಿಚಿತರಲ್ಲೂ ಇದ್ದ ಇತ್ತಂಡಗಳ ನಡುವಿನ ಕದನ ಕುತೂಹಲ ನಮ್ಮನ್ನು ಸೆಳೆಯಿತು.

ಹಿಂದಿಯಲ್ಲಿ ಮಾತನಾಡುತ್ತಿದ್ದ ಅವರ ಸಂಭಾಷಣೆ ಆಲಿಸಿದಾಗ ಏನಾದರಾಗಲಿ ನಾಳಿನ ಪಂದ್ಯವನ್ನು ನಾವು (ಭಾರತ) ಗೆಲ್ಲಲೇ ಬೇಕೆಂಬ ಹಪಹಪಿ ಇದ್ದಿದ್ದು ಸ್ಪಷ್ಟವಾಗಿ ಕಾಣಿಸುತ್ತಿತ್ತು. ಅಂತೂ ಭಾರತ ಮತ್ತು ಪಾಕಿಸ್ತಾನ ಪಂದ್ಯಗಳ ಕದನ ಯಾವ ರೀತಿಯಲ್ಲಿ ಕುತೂಹಲಕಾರಿ ಎಂಬುದನ್ನು ಅರ್ಥ ಮಾಡಿಕೊಳ್ಳಲು ಈ ದೃಶ್ಯ ಸಾಕಾಗುವಂತಿತ್ತು.

ಅಭ್ಯಾಸ ನಡೆಸುತ್ತಿದ್ದ ಜಾಗದಲ್ಲಿ ಭಾರತದ ತಂಡದ ನಾಯಕ ವಿರಾಟ್ ಕೊಹ್ಲಿ ಮಾತಿಗೆ ಸಿಕ್ಕರು. ಇನ್ನು 24 ಗಂಟೆಗಳೊಳಗೆ ಭಾವನಾತ್ಮಕ ಪಂದ್ಯ ನಡೆಯುವುದರಲ್ಲಿದ್ದರೂ ಕೊಹ್ಲಿ ಬಹಳಷ್ಟು ಶಾಂತ ಸ್ಥಿತಿಯಲ್ಲಿದ್ದರು. ಬಹಳ ಶಾಂತ ರೀತಿಯಲ್ಲೇ ಕೊಹ್ಲಿ ನಮ್ಮೊಂದಿಗೆ ಒಂದಿಷ್ಟು ಮಾತನಾಡಿದರು.

'ನಾವು ಇಂಗ್ಲೆಂಡಿಗೆ ಬಂದ ಸಮಯಕ್ಕಿಂತ ಭಿನ್ನವಾಗಿ ಏನನ್ನೂ ಚರ್ಚಿಸಿಲ್ಲ' ಎಂದು ಕೊಹ್ಲಿ ತುಂಬಾ ಪ್ರಾಮಾಣಿಕತೆಯಿಂದ ಹೇಳಿದರು. 'ನಿಮ್ಮ ದೇಶಕ್ಕಾಗಿ ನೀವು ಆಡುವ ಯಾವುದೇ ಆಟವು ಭಾವನಾತ್ಮಕ, ಅಂಶಗಳಿಂದ ಕೂಡಿರಬಹುದು ಎಂದು ನಾವು ಅರ್ಥಮಾಡಿಕೊಂಡಿದ್ದೇವೆ, ಆದ್ದರಿಂದ ಯಾವುದೇ ಆಟವು ಇತರರಿಗಿಂತ ನಮಗೆ ಹೆಚ್ಚು ಮುಖ್ಯ ಅಥವಾ ಹೆಚ್ಚು ವಿಶೇಷವಲ್ಲ' ಎಂದು ಕೊಹ್ಲಿ ಹೇಳಿದರು.

{headtohead_cricket_3_5}

'ತಮ್ಮ ದೇಶಕ್ಕಾಗಿ ಆಡಲು ಆಯ್ಕೆಯಾದ ಕ್ರಿಕೆಟಿಗರಾಗಿ, ಪ್ರತಿ ಪಂದ್ಯವನ್ನು ಸಮಾನವಾಗಿ ಪರಿಗಣಿಸುವುದು ನಮ್ಮ ಜವಾಬ್ದಾರಿಯಾಗಿದೆ. ಏಕೆಂದರೆ ವಿರೋಧವನ್ನು ಲೆಕ್ಕಿಸದೆ ನೀವು ಆಡುವ ಪ್ರತಿಯೊಂದು ಆಟವನ್ನು ನಿಮ್ಮ ದೇಶಕ್ಕಾಗಿ ಆಡಲು ನೀವು ಬದ್ಧರಾಗಿರಬೇಕು' ಎಂದು ಅವರು ಹೇಳಿದರು.

ಮಾತು ಮುಂದುವರೆಸಿದ ಕೊಹ್ಲಿ, 'ನಮಗೆ ಡ್ರೆಸ್ಸಿಂಗ್ ರೂಮ್‌ನಲ್ಲಿ ಏನೂ ಭಿನ್ನವಾಗಿಲ್ಲ. ನಮ್ಮ ಮನಸ್ಥಿತಿಯಲ್ಲಿ ಏನೂ ಬದಲಾಗುವುದಿಲ್ಲ. ನಾವು ಆಡಿದ ಕ್ರಿಕೆಟ್‌ನಿಂದಾಗಿ ನಾವು ವಿಶ್ವದ ಅಗ್ರಸ್ಥಾನದಲ್ಲಿದ್ದೇವೆ ಮತ್ತು ಅದನ್ನು ನಾವು ಯಾವಾಗಲೂ ನೆನಪಿಟ್ಟುಕೊಳ್ಳಬೇಕು. ನಮ್ಮ ಗಮನವು ಸಂಪೂರ್ಣವಾಗಿ ಗೆಲ್ಲುವತ್ತ ಇದೆ' ಎಂದರು.

ದಕ್ಷಿಣ ಆಫ್ರಿಕಾ ಮೂಲದ ಪಾಕಿಸ್ತಾನ ಕ್ರಿಕೆಟ್ ತಂಡದ ತರಬೇತುದಾರರಾದ ಮಿಕಿ ಆರ್ಥರ್ ಕೂಡ ತಮ್ಮ ಸುದ್ದಿಗೋಷ್ಠಿಯ ಆರಂಭದಲ್ಲಿ ಕೊಹ್ಲಿ ಆಡಿದಂತ ಇದೇ ಮಾತುಗಳನ್ನು ಆಡಿದ್ದರು. ಆದರೆ ಅವರ ಮುಖದಲ್ಲೂ ಸಣ್ಣಗಿನ ಒತ್ತಡದ ಛಾಯೆ ಇದ್ದಂತೆ ನಮಗನ್ನಿಸಿತು.

ಅಂತೂ ಭಾರತ ಮತ್ತು ಪಾಕಿಸ್ಥಾನ ತಂಡಗಳ ಕುತೂಹಲಕಾರಿ ಕದನವನ್ನು ಕಣ್ತುಂಬಿಕೊಳ್ಳಲು ವಿಶ್ವದ ಕ್ರಿಕೆಟ್ ಪ್ರಿಯರು ತುದಿಗಾಲಲ್ಲಿ ನಿಂತಿದ್ದಾರೆ. ಭಾನುವಾರದ ಈ ಪ್ರತಿಷ್ಠಯ ಕಾಳಗದಲ್ಲಿ ಯಾರು ಸೋತರೂ ಯಾರು ಗೆದ್ದರೂ ಇತಿಹಾಸವಾಗುವುದಂತೂ ನಿಜ. ಭಾರತ ತಂಡ ವಿಶ್ವಕಪ್‌ನಲ್ಲಿ ಈವರೆಗೂ ಪಾಕ್ ಎದುರು ಸೋತ ನಿದರ್ಶನವಿಲ್ಲ ಅನ್ನೋದು ಭಾರತೀಯರಿಗೆ ಹೆಮ್ಮೆಯ ಸಂಗತಿ.

(ಸುಮಾರು 20 ವರ್ಷಗಳಿಂದಲೂ ಕ್ರಿಕೆಟ್ ಬರವಣಿಗಾಗಿ ಗುರುತಿಸಿಕೊಂಡಿರುವ ಆರ್ ಕೌಶಿಕ್ ಅವರು ಲಂಡನ್‌ನಲ್ಲಿದ್ದು, ಇದು 7ನೇ ಬಾರಿಗೆ ವಿಶ್ವಕಪ್ ಟೂರ್ನಿ ಕವರ್ ಮಾಡುತ್ತಿದ್ದಾರೆ, ಮೈಖೇಲ್‌ಗಾಗಿ ವಿಶೇಷ ಲೇಖನಗಳನ್ನು ಬರೆಯುತ್ತಿದ್ದಾರೆ)

Story first published: Sunday, June 16, 2019, 0:17 [IST]
Other articles published on Jun 16, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+