Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Couple Goals: ಐಸಿಸಿ ವಿಶ್ವಕಪ್ ಎತ್ತಿಹಿಡಿದ ದಂಪತಿಗೆ ಶುಭಾಶಯಗಳ ಸುರಿಮಳೆ

Australia

ಐಸಿಸಿ ಮಹಿಳಾ ವಿಶ್ವಕಪ್ ಫೈನಲ್‌ನಲ್ಲಿ ಇಂಗ್ಲೆಂಡ್‌ ಮಹಿಳೆಯರ ವಿರುದ್ಧ 71ರನ್‌ಗಳ ಅಮೋಘ ಗೆಲುವಿನೊಂದಿಗೆ ಏಳನೇ ಬಾರಿಗೆ ವಿಶ್ವಕಪ್ ಗೆದ್ದು ಬೀಗಿದ ಆಸ್ಟ್ರೇಲಿಯಾ ವನಿತೆಯರ ಸಂಭ್ರಮ ಮುಗಿಲು ಮುಟ್ಟಿದೆ.

ಫೈನಲ್‌ನಲ್ಲಿ ಅಬ್ಬರದ ಬ್ಯಾಟಿಂಗ್ ಜೊತೆಗೆ ಹೊಸ ದಾಖಲೆಯನ್ನೇ ಬರೆದ ಓಪನಿಂಗ್ ಬ್ಯಾಟರ್ ಅಲಿಸ್ಸಾ ಹೀಲಿ 138 ಎಸೆತಗಳಲ್ಲಿ 170 ರನ್‌ ಸಿಡಿಸುವ ಮೂಲಕ ಅದ್ಭುತ ಆಟವಾಡಿದ್ರು. ಐಸಿಸಿ ವಿಶ್ವಕಪ್ ಫೈನಲ್‌ನಲ್ಲಿ ಪುರುಷರು ಅಥವಾ ಮಹಿಳಾ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಕಲೆಹಾಕಿದ ಆಟಗಾರ್ತಿಯಾಗಿ ಹೊರಹೊಮ್ಮಿದ್ರು.

ಆಸ್ಟ್ರೇಲಿಯಾ ವನಿತೆಯರು ಆಡಿದ ಒಂಭತ್ತು ಪಂದ್ಯಗಳಲ್ಲಿ ಎಲ್ಲಿಯೂ ಸೋಲನ್ನ ಕಾಣದೆ ಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಜಯಸಾಧಿಸಿ ಟ್ರೋಫಿಯನ್ನ ತಮ್ಮದಾಗಿಸಿಕೊಂಡ್ರು. ಆಸ್ಟ್ರೇಲಿಯಾ ಕಳೆದ ಎರಡು ಐಸಿಸಿ ಟೂರ್ನಮೆಂಟ್‌ಗಳನ್ನ (ಟಿ20, ಏಕದಿನ) ವಿಶ್ವಕಪ್ ಗೆದ್ದ ಸಾಧನೆ ಮಾಡಿದೆ.

ಈ ಗೆಲುವಿನ ಬಳಿಕ ಪಂದ್ಯ ಹಾಗೂ ಟೂರ್ನಮೆಂಟ್ ಶ್ರೇಷ್ಠ ಪ್ರಶಸ್ತಿ ಪಡೆದ ಅಲಿಸ್ಸಾ ಹೀಲಿ ಟ್ರೋಪಿಯೊಂದಿಗೆ ಪೋಸ್ ನೀಡಿದ್ದಾರೆ. 9 ಪಂದ್ಯಗಳಿಂದ 56.56 ರ ಸರಾಸರಿಯಲ್ಲಿ ಬರೋಬ್ಬರಿ 509 ರನ್ ಕಲೆಹಾಕಿದ ಈಕೆ ಎರಡು ಅರ್ಧಶತಕ ಮತ್ತು ಎರಡು ಶತಕ ದಾಖಲಿಸಿದ್ರು.

Australia won WC

ಕೇವಲ ಫೈನಲ್‌ನಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಅಷ್ಟೇ ಅಲ್ಲದೆ ಸರಣಿ ಶ್ರೇಷ್ಠ ಪ್ರಶಸ್ತಿಯನ್ನ ತನ್ನದಾಗಿಸಿಕೊಂಡ್ರು. ಆದ್ರೆ ವಿಶೇಷ ಅಂದ್ರೆ 2015ರ ಐಸಿಸಿ ಪುರುಷರ ವಿಶ್ವಕಪ್‌ ಫೈನನಲ್ಲಿ ಅಲಿಸ್ಸಾ ಹೀಲಿ ಪತಿರಾಯ ವೇಗಿ ಮಿಚೆಲ್ ಸ್ಟಾರ್ಕ್ ಕೂಡ ಪಂದ್ಯ ಶ್ರೇಷ್ಠ ಹಾಗೂ ಸರಣಿ ಶ್ರೇಷ್ಟ ಪ್ರಶಸ್ತಿಯನ್ನ ಪಡೆದಿದ್ರು. ಟೂರ್ನಿಯಲ್ಲಿ 27 ವಿಕೆಟ್ ಕಬಳಿಸುವ ಮೂಲಕ ಆಸ್ಟ್ರೇಲಿಯಾ ಗೆಲುವಿನಲ್ಲಿ ಮಿಂಚಿದ್ರು.

2015ರಲ್ಲಿ ಐಸಿಸಿ ವಿಶ್ವಕಪ್ ಎತ್ತಿಹಿಡಿದಿದ್ದ ಮಿಚೆಲ್ ಸ್ಟಾರ್ಕ್ ಫೋಟೋದಲ್ಲಿ ಅಲಿಸ್ಸಾ ಹೀಲಿಯನ್ನ ಕಾಣಬಹುದು. ಅದೇ ರೀತಿಯಲ್ಲಿ 2022ರ ಮಹಿಳಾ ವಿಶ್ವಕಪ್‌ ಜೊತೆಗ ಅಲಿಸ್ಸಾ ಹೀಲಿ ಜೊತೆಗೆ ಮಿಚೆಲ್ ಸ್ಟಾರ್ಕ್ ಅನ್ನು ಕಾಣಬಹುದಾಗಿದೆ. ಇವರಿಬ್ಬರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದ್ದು, ಕಪಲ್ ಗೋಲ್ಸ್ ಎಂಬ ಟ್ಯಾಗ್‌ಲೈನ್ ನೀಡಲಾಗಿದೆ. ಅಲ್ಲದೆ ವಿಶ್ವಕಪ್ ಹೀರೋ ಜೋಡಿಗೆ ಅಭಿಮಾನಿಗಳು ಶುಭಾಶಯ ತಿಳಿಸಿದ್ದಾರೆ.

IPL ಇತಿಹಾಸದಲ್ಲೇ CSK ಗೆ ಭಾರಿ ಮುಖಭಂಗ: ಕನ್ನಡಿಗನ ಮುಂದೆ ಮಂಡಿಯೂರಿದ ಚೆನ್ನೈ | Oneindia Kannada

Story first published: Monday, April 4, 2022, 9:37 [IST]
Other articles published on Apr 4, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+