
ನ್ಯೂಜಿಲೆಂಡ್‌ನಲ್ಲಿ ನಡೆಯುತ್ತಿರುವ ಐಸಿಸಿ ಮಹಿಳಾ ವಿಶ್ವಕಪ್‌ನ ಲೀಗ್ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಇಂಗ್ಲೆಂಡ್ ವನಿತೆಯರು 100 ರನ್‌ಗಳ ಭರ್ಜರಿ ಗೆಲುವಿನೊಂದಿಗೆ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶ ಕಂಡ ಮೂರನೇ ತಂಡವಾಗಿ ಇಂಗ್ಲೆಂಡ್ ಹೊರಹೊಮ್ಮಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಪರ ಬ್ಯಾಟರ್ ಬೇಮೌಂಟ್ 33, ಸೋಫಿಯಾ ಡಂಕ್ಲೆ 67 ರನ್ ಮತ್ತು ನಥಾಲಿ ಸ್ಕೀವರ್ 40 ರನ್, ಕೆ. ಬ್ರುಂಟ್ 24, ರನ್‌ಗಳ ಬ್ಯಾಟಿಂಗ್ ನೆರವಿನಿಂದ ನಿಗದಿತ 50 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 234 ರನ್ ಸಿಡಿಸಿತು. ಬಾಂಗ್ಲಾದೇಶ ಪರ ಸಲ್ಮಾ ಖತೂನ್ 1 ವಿಕೆಟ್ ಪಡೆದು ಮಿಂಚಿದರು.
ಇದಕ್ಕುತ್ತರವಾಗಿ ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ವನಿತೆಯರು ನೀರಸ ಬ್ಯಾಟಿಂಗ್ ಪ್ರದರ್ಶನದ ಮೂಲಕ 48 ಓವರ್‌ಗಳಿಗೆ 134ರನ್‌ಗೆ ಆಲೌಟ್ ಆಗಿದೆ. ಮಧ್ಯಮ ಕ್ರಮಾಂಕದ ಲತಾ ಮೊಂಡಲ್ 30 ರನ್ ಗಳಿಸಿದ್ದೇ ಬಾಂಗ್ಲಾ ಪರ ಗರಿಷ್ಠ ರನ್ ಆಗಿದೆ.
ಇಂಗ್ಲೆಂಡ್ ಪರ ಸೋಫಿ ಎಕ್ಲೆಸ್ಟೋನ್ 10 ಓವರ್‌ಗಳಲ್ಲಿ ಕೇವಲ 15 ರನ್ ನೀಡಿ ಮೂರು ವಿಕೆಟ್ ಕಬಳಿಸಿದರು. ಅವರಿಗೆ ಉತ್ತಮ ನೆರವು ನೀಡಿದ ಚಾರ್ಲೊಟ್ ಡೀನ್ ಸಹ ಮೂರು ವಿಕೆಟ್ ಉರುಳಿಸಿದರು. ಮಧ್ಯಮ ವೇಗಿ ಫ್ರೆಯಾ ಡೆವೀಸ್ ಎರಡು ಮತ್ತು ಹೀದರ್ ನೈಟ್ ಒಂದು ವಿಕೆಟ್ ಪಡೆದರು.
ಇನ್ನು ಇಂದು ನಡೆದ ಎರಡನೇ ಪಂದ್ಯದಲ್ಲಿ ಭಾರತದ ವಿರುದ್ಧ ದಕ್ಷಿಣ ಆಫ್ರಿಕಾ ಕೊನೆಯ ಎಸೆತದಲ್ಲಿ ಗೆಲುವು ಸಾಧಿಸುವ ಮೂಲಕ ಭಾರತದ ಸೆಮೀಸ್ ಕನಸಿಗೆ ತಣ್ಣಿರೆರಚಿದ್ರು. ಭಾರತ 7 ವಿಕೆಟ್ ನಷ್ಟಕ್ಕೆ 274 ರನ್ ಕಲೆಹಾಕಿದ್ರೆ, ಇದಕ್ಕುತ್ತರವಾಗಿ ದಕ್ಷಿಣ ಆಫ್ರಿಕಾ ವನಿತೆಯರು ನಿಗದಿತ 50 ಓವರ್‌ಗಳಲ್ಲಿ ಕೊನೆಯ ಎಸೆತದಲ್ಲಿ ಮೂರು ವಿಕೆಟ್‌ಗಳ ಗೆಲುವು ಸಾಧಿಸಿದರು.