
ಮೌಂಟ್ ಮೌಂಗನುಯಿಯ ಬೇ ಓವಲ್ ಮೈದಾನದಲ್ಲಿ ನಡೆದ ಐಸಿಸಿ ಮಹಿಳಾ ವಿಶ್ವಕಪ್ 2022ರ 15ನೇ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತದ ವನಿತೆಯರು ಸೋಲನ್ನಪ್ಪಿದ್ದಾರೆ. ಇಂಗ್ಲೆಂಡ್ ಬೌಲಿಂಗ್ ದಾಳಿಗೆ ನಲುಗಿದ್ದ ಮಿಥಾಲಿ ರಾಜ್ ಪಡೆ ಸುಲಭ ಗುರಿಯನ್ನ ನೀಡಿ ಪರಾಜಯಗೊಂಡಿದೆ.
ಭಾರತದ ವನಿತೆಯರು ನೀಡಿದ 135ರನ್‌ಗಳ ಗುರಿ ಬೆನ್ನತ್ತಿದ ಇಂಗ್ಲೆಂಡ್ ವನಿತೆಯರು 31.2 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ ಗುರಿ ತಲುಪಿದರು. ಕೇವಲ ನಾಲ್ಕು ರನ್‌ಗಳಿಗೆ ಮೊದಲೆರಡು ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿದ್ದ ಇಂಗ್ಲೆಂಡ್‌ಗೆ ನಾಯಕಿ ಹೀದರ್ ನೈಟ್ ಅಜೇಯ 53 ರನ್ ಹಾಗೂ ನಟಾಲಿ ಸ್ಕಿವರ್ 45 ರನ್‌ಗಳ ಕೊಡುಗೆಯಿಂದಾಗಿ ಗೆಲುವಿನ ದಡ ತಲುಪಲು ಸಾಧ್ಯವಾಯಿತು.
ಇಂಗ್ಲೆಂಡ್ ಪರ ಡೇನಿಯಲ್ ವ್ಯಾಟ್ 1, ಟಮ್ಮಿ ಬ್ಯೂಮಾಂಟ್ 1, ಹೀದರ್ ನೈಟ್ ಅಜೇಯ 53, ನಟಾಲಿ ಸ್ಕಿವರ್ 45, ಆಮಿ ಎಲ್ಲೆನ್ ಜೋನ್ಸ್ 10, ಸೋಫಿಯಾ ಡಂಕ್ಲೆ 17, ಕ್ಯಾಥರೀನ್ 0
ಸೋಫಿ ಎಕ್ಲೆಸ್ಟೋನ್ ಅಜೇಯ 5ರನ್‌ಗಳಿಸಿದ್ರು. ಭಾರತ ಪರ ಮೇಘ್ನಾ ಸಿಂಗ್ 3 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿಕೊಂಡ್ರು.
ಇದಕ್ಕೂ ಮೊದಲು ಟಾಸ್ ಸೋತು ಮೊದಲು ಬ್ಯಾಟಿಂಗ್ ಅವಕಾಶ ಪಡೆದ ಭಾರತವು 100 ರನ್‌ಗಳೊಳಗೆ 7 ವಿಕೆಟ್ ಕಳೆದುಕೊಂಡಿತು. ಆರಂಭಿಕ ಬ್ಯಾಟರ್ ಸ್ಮೃತಿ ಮಂದಾನ (35) ಹೊರತುಪಡಿಸಿ ಬೇರೆ ಎಲ್ಲಾ ಟಾಪ್ ಆರ್ಡರ್ ಬ್ಯಾಟರ್‌ಗಳು ಪೆವಿಲಿಯನ್ ಸೇರಿಕೊಂಡರು. ಯಾಸ್ತಿಕ ಭಾಟಿಯಾ 8, ನಾಯಕಿ ಮಿಥಾಲಿ ರಾಜ್ 1, ದೀಪ್ತಿ ಶರ್ಮಾ 0, ಹರ್ಮನ್ ಪ್ರೀತ್ ಕೌರ್ 14, ಸ್ನೇಹ ರಾನಾ 0, ಪೂಜಾ ವಸ್ತ್ರಾಕರ್ 6 ರನ್‌ಗೆ ವಿಕೆಟ್ ಒಪ್ಪಿಸಿದ್ರು. ವಿಕೆಟ್ ಕೀಪರ್ ಬ್ಯಾಟರ್ ರಿಚಾ ಘೋಶ್ 32 ರನ್ ಹಾಗೂ ಜೂಲನ್ ಗೋಸ್ವಾಮಿ 20 ರನ್ ಕಲೆಹಾಕಿ ತಂಡದ ಹೀನಾಯ ಕುಸಿತವನ್ನ ತಪ್ಪಿಸಿದ್ರು. ಅಂತಿಮವಾಗಿ ಭಾರತ 36.2 ಓವರ್‌ಗಳಲ್ಲಿ 134 ರನ್‌ಗಳಿಗೆ ಆಲೌಟ್ ಆಯಿತು.
ಈ ಪಂದ್ಯ ಸೋಲಿನೊಂದಿಗೆ ಭಾರತದ ವನಿತೆಯರು ಪಾಯಿಂಟ್ಸ್ ಟೇಬಲ್‌ನಲ್ಲಿ ಮೂರನೇ ಸ್ಥಾನಕ್ಕೆ ಕುಸಿದಿದೆ. ಭಾರತ 4 ಪಂದ್ಯಗಳಲ್ಲಿ 2 ಗೆಲುವು, 2 ಸೋಲು ಮೂಲಕ 4 ಪಾಯಿಂಟ್ಸ್ ಕಲೆಹಾಕಿದೆ.
ಭಾರತ ವನಿತೆಯರ ಪ್ಲೇಯಿಂಗ್ 11
ಸ್ಮೃತಿ ಮಂಧಾನ, ಯಾಸ್ತಿಕಾ ಭಾಟಿಯಾ, ಮಿಥಾಲಿ ರಾಜ್ (ನಾಯಕಿ), ದೀಪ್ತಿ ಶರ್ಮಾ, ಹರ್ಮನ್‌ಪ್ರೀತ್ ಕೌರ್, ರಿಚಾ ಘೋಷ್ (ವಿಕೆಟ್ ಕೀಪರ್), ಸ್ನೇಹ ರಾಣಾ, ಪೂಜಾ ವಸ್ತ್ರಾಕರ್, ಜೂಲನ್ ಗೋಸ್ವಾಮಿ, ಮೇಘನಾ ಸಿಂಗ್, ರಾಜೇಶ್ವರಿ ಗಾಯಕ್ವಾಡ್
ಇಂಗ್ಲೆಂಡ್ ವನಿತೆಯರ ಪ್ಲೇಯಿಂಗ್ 11
ಡೇನಿಯಲ್ ವ್ಯಾಟ್, ಟಮ್ಮಿ ಬ್ಯೂಮಾಂಟ್, ಹೀದರ್ ನೈಟ್ (ನಾಯಕಿ), ನಟಾಲಿ ಸ್ಕಿವರ್, ಆಮಿ ಎಲ್ಲೆನ್ ಜೋನ್ಸ್ (ವಿಕೆಟ್ ಕೀಪರ್), ಸೋಫಿಯಾ ಡಂಕ್ಲೆ, ಕ್ಯಾಥರೀನ್ ಬ್ರಂಟ್, ಸೋಫಿ ಎಕ್ಲೆಸ್ಟೋನ್, ಕೇಟ್ ಕ್ರಾಸ್, ಷಾರ್ಲೆಟ್ ಡೀನ್, ಅನ್ಯಾ ಶ್ರಬ್ಸೋಲ್