For Quick Alerts
ALLOW NOTIFICATIONS  
For Daily Alerts
 

ICC Women's T20 World Cup: ಮಹಿಳಾ ಟಿ20 ವಿಶ್ವಕಪ್ ವೇಳಾಪಟ್ಟಿ ಪ್ರಕಟ, ಒಂದೇ ಗುಂಪಿನಲ್ಲಿ ಭಾರತ-ಪಾಕಿಸ್ತಾನ

ಸದ್ಯ ಭಾರತ ಹಾಗೂ ಶ್ರೀಲಂಕಾದಲ್ಲಿ ಪುರುಷರ ಟಿ20 ವಿಶ್ವಕಪ್ ನಡೆಯುತ್ತಿದೆ. ಈ ಟೂರ್ನಿಯಲ್ಲಿ ಬಲಿಷ್ಠ ತಂಡಗಳು ಕಾದಾಟ ನಡೆಸುತ್ತಿವೆ. ಈ ಟೂರ್ನಿ ಮುಗಿದ ಬಳಿಕ ಐಸಿಸಿ ಮತ್ತೊಂದು ಮೆಗಾ ಟೂರ್ನಿಗೆ ಸಿದ್ಧತೆ ನಡೆಸಿದೆ. ಇಂಗ್ಲೆಂಡ್‌ನಲ್ಲಿ ಜೂನ್‌ನಲ್ಲಿ ನಡೆಯಲಿರುವ ಮಹಿಳಾ ಟಿ20 ವಿಶ್ವಕಪ್‌ಗೆ ಭರದ ತಯಾರಿ ನಡೆದಿದೆ. ಐಸಿಸಿ ಮಹಿಳಾ ಟಿ20 ವಿಶ್ವಕಪ್ ಈ ವರ್ಷ ಜೂನ್ 12 ರಿಂದ ಜುಲೈ 5 ರವರೆಗೆ ಇಂಗ್ಲೆಂಡ್ ಮತ್ತು ವೇಲ್ಸ್‌ನಲ್ಲಿ ನಡೆಯಲಿದ್ದು, ಈ ಬಾರಿ 12 ತಂಡಗಳು ಭಾಗವಹಿಸಲಿವೆ.

ಐಸಿಸಿ ಈವೆಂಟ್‌ಗಳು ನಡೆದಾಗ ಎಲ್ಲರ ಕಣ್ಣುಗಳು ಭಾರತ ಹಾಗೂ ಪಾಕಿಸ್ತಾನದ ಮೇಲೆ ನೆಟ್ಟಿರಲಿವೆ. ಈ ಎರಡೂ ತಂಡಗಳು ಸಹ ಒಂದೇ ಗುಂಪಿನಲ್ಲಿ ಇರಿಸಲಾಗಿದೆ. ಲೀಗ್ ಹಂತದಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಣ ಹೈವೋಲ್ಟೇಜ್ ಪಂದ್ಯವನ್ನು ಕಣ್ಣು ತುಂಬಿಕೊಳ್ಳಬಹುದಾಗಿದೆ. ಸಾಂಪ್ರದಾಯಿಕ ಎದುರಾಳಿಗಳ ಕಾದಾಟಕ್ಕೆ ಎಡ್ಜ್‌ಬಾಸ್ಟನ್‌ನ ಮೈದಾನ ವೇದಿಕೆ ಕಲ್ಪಿಸಲಿದೆ. ಮಹಿಳಾ ಕ್ರಿಕೆಟ್‌ನಲ್ಲಿಯೂ ಸಹ ಈ ಪೈಪೋಟಿ ಯಾವಾಗಲೂ ರೋಮಾಂಚಕಾರಿಯಾಗಿದೆ, ಮತ್ತು ಈ ಬಾರಿಯೂ ಕ್ರೀಡಾಂಗಣಗಳು ತುಂಬಿ ತುಳುಕುವ ನಿರೀಕ್ಷೆಯಿದೆ.

ICC Women s T20 World Cup

ಎ ಗುಂಪಿನಲ್ಲಿ ಯಾವೆಲ್ಲಾ ತಂಡಗಳಿಗೆ ಸ್ಥಾನ ಲಭಿಸಿದೆ?

ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ನೆದರ್ಲ್ಯಾಂಡ್ಸ್

ಬಿ ಗುಂಪಿನಲ್ಲಿ ಈ ತಂಡಗಳು ಸ್ಥಾನ ಪಡೆದಿವೆ

ವೆಸ್ಟ್ ಇಂಡೀಸ್, ಇಂಗ್ಲೆಂಡ್, ನ್ಯೂಜಿಲೆಂಡ್, ಶ್ರೀಲಂಕಾ, ಐರ್ಲೆಂಡ್, ಸ್ಕಾಟ್ಲೆಂಡ್

ಭಾರತ ಹಾಗೂ ಪಾಕಿಸ್ತಾನ ನಡುವಣ ಪಂದ್ಯ ಯಾವಾಗ ನಡೆಯಲಿದೆ?

ಭಾರತ ಹಾಗೂ ಪಾಕಿಸ್ತಾನ ನಡುವಣ ಪಂದ್ಯ ಜೂನ್ 14 ರಂದು ಎಡ್ಜ್‌ಬಾಸ್ಟನ್ ನಲ್ಲಿ ನಡೆಯಲಿದೆ.

ಸೆಮಿಫೈನಲ್‌ ಪಂದ್ಯಗಳು ನಡೆಯುವುದು ಎಲ್ಲಿ? ಯಾವಾಗ?

ಮಹಿಳಾ ಟಿ20 ವಿಶ್ವಕಪ್‌ನ ಜೂನ್‌ 30 ರಂದು ಮೊದಲ ಹಾಗೂ ಜುಲೈ 2 ರಂದು ಎರಡನೇ ಸೆಮಿಫೈನಲ್‌ ಪಂದ್ಯ ನಡೆಯಲಿದೆ.

ಫೈನಲ್‌ ಪಂದ್ಯ ನಡೆಯುವುದು ಯಾವಾಗ?

ಜುಲೈ 5 ರಂದು ಫೈನಲ್‌ ಪಂದ್ಯ ನಡೆಯಲಿದ್ದು, ಈ ಪಂದ್ಯಕ್ಕೆ ಐಕಾನಿಕ್ ಲಾರ್ಡ್ಸ್‌ ಮೈದಾನ ವೇದಿಕೆ ಕಲ್ಪಿಸಲಿದೆ.

ಲೀಗ್‌ ಹಂತದ ಸಂಪೂರ್ಣ ವೇಳಾ ಪಟ್ಟಿ

ದಿನಾಂಕ ವಿರುದ್ಧ ಸ್ಥಳ ಸಮಯ
ಜೂನ್ 13 ಇಂಗ್ಲೆಂಡ್ vs ಶ್ರೀಲಂಕಾ ಎಡ್ಜ್‌ಬಾಸ್ಟನ್ ರಾತ್ರಿ 11ಕ್ಕೆ
ಜೂನ್ 13 ಸ್ಕಾಟ್ಲೆಂಡ್ vs ಐರ್ಲೆಂಡ್ ಓಲ್ಡ್ ಟ್ರಾಫರ್ಡ್ ಕ್ರಿಕೆಟ್ ಮೈದಾನ ಮಧ್ಯಾಹ್ನ 3ಕ್ಕೆ
ಜೂನ್ 13 ಆಸ್ಟ್ರೇಲಿಯಾ vs ದಕ್ಷಿಣ ಆಫ್ರಿಕಾ ಓಲ್ಡ್ ಟ್ರಾಫರ್ಡ್ ಕ್ರಿಕೆಟ್ ಮೈದಾನ ಸಂಜೆ 7ಕ್ಕೆ
ಜೂನ್ 13 ವೆಸ್ಟ್ ಇಂಡೀಸ್ vs ನ್ಯೂಜಿಲೆಂಡ್ ಹ್ಯಾಂಪ್‌ಶೈರ್ ಬೌಲ್ ರಾತ್ರಿ 11ಕ್ಕೆ
ಜೂನ್ 14 ಬಾಂಗ್ಲಾದೇಶ vs ನೆದರ್‌ಲ್ಯಾಂಡ್ಸ್ ಎಡ್ಜ್‌ಬಾಸ್ಟನ್ ಮಧ್ಯಾಹ್ನ 3ಕ್ಕೆ
ಜೂನ್ 14 ಭಾರತ vs ಪಾಕಿಸ್ತಾನ ಎಡ್ಜ್‌ಬಾಸ್ಟನ್ ಸಂಜೆ 7ಕ್ಕೆ
ಜೂನ್ 16 ನ್ಯೂಜಿಲೆಂಡ್ vs ಶ್ರೀಲಂಕಾ ಹ್ಯಾಂಪ್‌ಶೈರ್ ಬೌಲ್ ಸಂಜೆ 7ಕ್ಕೆ
ಜೂನ್ 16 ಇಂಗ್ಲೆಂಡ್ vs ಐರ್ಲೆಂಡ್ ಹ್ಯಾಂಪ್‌ಶೈರ್ ಬೌಲ್ ರಾತ್ರಿ 11ಕ್ಕೆ
ಜೂನ್ 17 ಆಸ್ಟ್ರೇಲಿಯಾ vs ಬಾಂಗ್ಲಾದೇಶ ಹೆಡಿಂಗ್ಲಿ ಮಧ್ಯಾಹ್ನ 3ಕ್ಕೆ
ಜೂನ್ 17 ಭಾರತ vs ನೆದರ್ಲ್ಯಾಂಡ್ಸ್ ಹೆಡಿಂಗ್ಲಿ ಸಂಜೆ 7ಕ್ಕೆ
ಜೂನ್ 17 ದಕ್ಷಿಣ ಆಫ್ರಿಕಾ vs ಪಾಕಿಸ್ತಾನ ಎಡ್ಜ್‌ಬಾಸ್ಟನ್ ರಾತ್ರಿ 11ಕ್ಕೆ
ಜೂನ್ 18 ವೆಸ್ಟ್ ಇಂಡೀಸ್ vs ಸ್ಕಾಟ್ಲೆಂಡ್ ಹೆಡಿಂಗ್ಲಿ ರಾತ್ರಿ 11ಕ್ಕೆ
ಜೂನ್ 19 ನ್ಯೂಜಿಲೆಂಡ್ vs ಐರ್ಲೆಂಡ್ ಹ್ಯಾಂಪ್‌ಶೈರ್ ಬೌಲ್ ರಾತ್ರಿ 11ಕ್ಕೆ
ಜೂನ್ 20 ಆಸ್ಟ್ರೇಲಿಯಾ vs ನೆದರ್ಲ್ಯಾಂಡ್ಸ್ ಹ್ಯಾಂಪ್‌ಶೈರ್ ಬೌಲ್ ಮಧ್ಯಾಹ್ನ 3ಕ್ಕೆ
ಜೂನ್ 20 ಪಾಕಿಸ್ತಾನ vs ಬಾಂಗ್ಲಾದೇಶ ಹ್ಯಾಂಪ್‌ಶೈರ್ ಬೌಲ್ ಸಂಜೆ 7ಕ್ಕೆ
ಜೂನ್ 20 ಇಂಗ್ಲೆಂಡ್ vs ಸ್ಕಾಟ್ಲೆಂಡ್ ಹೆಡಿಂಗ್ಲಿ ರಾತ್ರಿ 11ಕ್ಕೆ
ಜೂನ್ 21 ವೆಸ್ಟ್ ಇಂಡೀಸ್ vs ಶ್ರೀಲಂಕಾ ಬ್ರಿಸ್ಟಲ್ ಕೌಂಟಿ ಮೈದಾನ ಮಧ್ಯಾಹ್ನ 3ಕ್ಕೆ
ಜೂನ್ 21 ದಕ್ಷಿಣ ಆಫ್ರಿಕಾ vs ಭಾರತ ಓಲ್ಡ್ ಟ್ರಾಫರ್ಡ್ ಕ್ರಿಕೆಟ್ ಮೈದಾನ ಸಂಜೆ 7ಕ್ಕೆ
ಜೂನ್ 23 ನ್ಯೂಜಿಲೆಂಡ್ vs ಸ್ಕಾಟ್ಲೆಂಡ್ ಬ್ರಿಸ್ಟಲ್ ಕೌಂಟಿ ಮೈದಾನ ಮಧ್ಯಾಹ್ನ 3ಕ್ಕೆ
ಜೂನ್ 23 ಶ್ರೀಲಂಕಾ vs ಐರ್ಲೆಂಡ್ ಬ್ರಿಸ್ಟಲ್ ಕೌಂಟಿ ಮೈದಾನ ಸಂಜೆ 7ಕ್ಕೆ
ಜೂನ್ 23 ಆಸ್ಟ್ರೇಲಿಯಾ vs ಪಾಕಿಸ್ತಾನ ಹೆಡಿಂಗ್ಲೆ ರಾತ್ರಿ 11ಕ್ಕೆ
ಜೂನ್ 24 ಇಂಗ್ಲೆಂಡ್ vs ವೆಸ್ಟ್ ಇಂಡೀಸ್ ಲಾರ್ಡ್ಸ್ ಕ್ರಿಕೆಟ್ ಮೈದಾನ ರಾತ್ರಿ 11ಕ್ಕೆ
ಜೂನ್ 25 ಭಾರತ vs ಬಾಂಗ್ಲಾದೇಶ ಓಲ್ಡ್ ಟ್ರಾಫರ್ಡ್ ಕ್ರಿಕೆಟ್ ಮೈದಾನ ಸಂಜೆ 7ಕ್ಕೆ
ಜೂನ್ 25 ದಕ್ಷಿಣ ಆಫ್ರಿಕಾ vs ನೆದರ್ಲ್ಯಾಂಡ್ಸ್ ಬ್ರಿಸ್ಟಲ್ ಕೌಂಟಿ ಮೈದಾನ ರಾತ್ರಿ 11ಕ್ಕೆ
ಜೂನ್ 26 ಶ್ರೀಲಂಕಾ vs ಸ್ಕಾಟ್ಲೆಂಡ್ ಓಲ್ಡ್ ಟ್ರಾಫರ್ಡ್ ಕ್ರಿಕೆಟ್ ಮೈದಾನ ರಾತ್ರಿ 11ಕ್ಕೆ
ಜೂನ್ 27 ಪಾಕಿಸ್ತಾನ vs ನೆದರ್ಲ್ಯಾಂಡ್ಸ್ ಬ್ರಿಸ್ಟಲ್ ಕೌಂಟಿ ಮೈದಾನ ಮಧ್ಯಾಹ್ನ 3ಕ್ಕೆ
ಜೂನ್ 27 ವೆಸ್ಟ್ ಇಂಡೀಸ್ vs ಐರ್ಲೆಂಡ್ ಬ್ರಿಸ್ಟಲ್ ಕೌಂಟಿ ಮೈದಾನ ಸಂಜೆ 7ಕ್ಕೆ
ಜೂನ್ 27 ಭಾರತ vs ನ್ಯೂಜಿಲೆಂಡ್ ದಿ ಓವಲ್ ರಾತ್ರಿ 11ಕ್ಕೆ
ಜೂನ್ 28 ದಕ್ಷಿಣ ಆಫ್ರಿಕಾ vs ಬಾಂಗ್ಲಾದೇಶ ಲಾರ್ಡ್ಸ್ ಕ್ರಿಕೆಟ್ ಮೈದಾನ ಮಧ್ಯಾಹ್ನ 3ಕ್ಕೆ
ಜೂನ್ 28 ಆಸ್ಟ್ರೇಲಿಯಾ vs ಭಾರತ ಲಾರ್ಡ್ಸ್ ಕ್ರಿಕೆಟ್ ಮೈದಾನ ಸಂಜೆ 7ಕ್ಕೆ

Story first published: Tuesday, February 24, 2026, 16:04 [IST]
Other articles published on Feb 24, 2026
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+