Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ICC Women's World Cup 2022: ದಕ್ಷಿಣ ಆಫ್ರಿಕಾ ವಿರುದ್ಧ ಗೆದ್ದು ಬೀಗಿದ ಆಸ್ಟ್ರೇಲಿಯಾ ವನಿತೆಯರು

Australia women

ವೆಲ್ಲಿಂಗ್ಟ್‌ನ್ ಬೇಸಿನ್ ರಿಸರ್ವ್‌ನಲ್ಲಿ ನಡೆದ ಐಸಿಸಿ ಮಹಿಳಾ ವಿಶ್ವಕಪ್ 2022ರ 21ನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವನಿತೆಯರ ವಿರುದ್ಧ ಆಸ್ಟ್ರೇಲಿಯಾ ಮಹಿಳೆಯರು ಐದು ವಿಕೆಟ್‌ಗಳ ಗೆಲುವು ದಾಖಲಿಸಿದ್ದಾರೆ. ಈ ಮೂಲಕ ದಕ್ಷಿಣ ಆಫ್ರಿಕಾದ ಗೆಲುವಿನ ಓಟಕ್ಕೆ ಬ್ರೇಕ್ ಬಿದ್ದಿದ್ದು, ಆಸ್ಟ್ರೇಲಿಯಾದ ಅಜೇಯ ಗೆಲುವಿನ ಓಟ ಮುಂದುವರಿದಿದೆ.

ದಕ್ಷಿಣ ಆಫ್ರಿಕಾ ನೀಡಿದ 272 ರನ್‌ಗಳ ಟಾರ್ಗೆಟ್‌ ಬೆನ್ನತ್ತಿದ ಆಸ್ಟ್ರೇಲಿಯಾ ಪರ ನಾಯಕಿ ಮೆಗ್ ಲ್ಯಾನಿಂಗ್ ಅಜೇಯ 135 ರನ್‌ಗಳ ನೆರವಿನಿಂದ ಆಸೀಸ್ ಪಡೆ ಗೆಲುವಿನ ದಡ ತಲುಪಿತು. ಏಕದಿನ ಕ್ರಿಕೆಟ್‌ನಲ್ಲಿ 15ನೇ ಶತಕ ದಾಖಲಿಸಿದ ಮೆಗ್ ಲ್ಯಾನಿಂಗ್ ಉಳಿದ ಬ್ಯಾಟರ್‌ಗಳು ಬೇಗನೆ ಔಟಾದ್ರೂ ಸಹ ಒಂದೆಡೆ ಕ್ರೀಸ್‌ನಲ್ಲಿ ಉಳಿದು ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ.

ಆಸ್ಟ್ರೇಲಿಯಾ ಪರ ಓಪನರ್‌ಗಳಾದ ರೇಚಲ್ ಹೇನ್ಸ್‌(17) ಮತ್ತು ಅಲಿಸ್ಸಾ ಹೀಲಿ(5) ಬೇಗನೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿಕೊಂಡರು. ಬೆತ್ ಮೂನಿ 21, ತಹಿಲಾ ಮೆಗ್ರಾತ್ 32, ಆ್ಯಶ್ಲೆ ಗಾರ್ಡ್‌ನರ್‌ 22, ಅನ್ನಾಬೆಲ್ ಸದರ್ಲೆಂಡ್ ಅಜೇಯ 22 ರನ್‌ಗಳಿಸಿದ್ರು. ಈ ಗೆಲುವಿನ ಮೂಲಕ ಆಸ್ಟ್ರೇಲಿಯಾ ಸೋಲನ್ನೇ ಕಾಣದೆ ಆರಕ್ಕೆ ಆರು ಪಂದ್ಯಕ್ಕೆ ಪಾಯಿಂಟ್ಸ್‌ ಟೇಬಲ್‌ನಲ್ಲಿ ಅಗ್ರಸ್ಥಾನಕ್ಕೇರಿದೆ.

ಇದಕ್ಕೂ ಮೊದಲು ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ದಕ್ಷಿಣ ಆಫ್ರಿಕಾ ಉತ್ತಮ ಆರಂಭವನ್ನ ದಾಖಲಿಸಿತು. ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿದ್ದ ಆಸ್ಟ್ರೇಲಿಯಾ ವನಿತೆಯರು ಎದುರಾಳಿ ಬ್ಯಾಟರ್‌ಗಳನ್ನ ಸುಲಭವಾಗಿ ಕಟ್ಟಿಹಾಕಲು ವಿಫಲಗೊಂಡರು. ಆಫ್ರಿಕಾದ ಓಪನರ್ಸ್ ಲಿಜ್ಜೆಲ್ಲೆ ಲೀ(36), ಲೋರಾ ವೋಲ್ಡಾರ್ಡ್ (90), ಲಾರಾ ಗುಡಾಲ್ (15), ಸುನೆ ಲಸ್‌ (52), ಎಂ. ಡು ಪ್ರೆಜ್ (14) ಮರಿಜನ್ನೆ ಕಪ್ ಅಜೇಯ 30, ಕ್ಲೋಯ್ ಟ್ರೈಯಾನ್ 17 ರನ್‌ಗಳಿಸಿ ವಿಕೆಟ್ ಒಪ್ಪಿಸಿದ್ರು.

ದಕ್ಷಿಣ ಆಫ್ರಿಕಾ 5 ವಿಕೆಟ್ ಕಳೆದುಕೊಂಡ 271 ರನ್ ಕಲೆಹಾಕಿದ್ದರೂ ಸಹ, ತನ್ನ ರನ್ ಡಿಫೆಂಡ್ ಮಾಡಿಕೊಳ್ಳುವಲ್ಲಿ ವಿಫಲಗೊಂಡಿತು. ಈ ಮೂಲಕ ದ. ಆಫ್ರಿಕಾ ಗೆಲುವಿನ ಓಟಕ್ಕೆ ಬ್ರೇಕ್ ಬಿದ್ದಿದ್ದು, 8 ಪಾಯಿಂಟ್ಸ್‌ನೊಂದಿಗೆ ಪಾಯಿಂಟ್ಸ್ ಟೇಬಲ್‌ನಲ್ಲಿ ಎರಡನೇ ಸ್ಥಾನ ಕಾಯ್ದುಕೊಂಡಿದೆ.

Story first published: Tuesday, March 22, 2022, 13:34 [IST]
Other articles published on Mar 22, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+