Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ICC Womens WC 2022: ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 155ರನ್‌ಗಳ ಗೆಲುವು

India women

ಐಸಿಸಿ ಮಹಿಳಾ ವಿಶ್ವಕಪ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರು 155 ರನ್‌ಗಳ ಬೃಹತ್ ಗೆಲುವಿನೊಂದಿಗೆ ಮತ್ತೆ ಜಯದ ಹಾದಿಗೆ ಮರಳಿದೆ. ಭಾರತ ನೀಡಿದ 318 ರನ್‌ಗಳ ದೊಡ್ಡ ಮೊತ್ತವನ್ನ ಬೆನ್ನತ್ತಿದ ವೆಸ್ಟ್ ಇಂಡೀಸ್ ವನಿತೆಯರು 160 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಹೀನಾಯ ಸೋಲು ಕಂಡಿದ್ದಾರೆ.

ಮೊದಲ ವಿಕೆಟ್‌ಗೆ ಶತಕದ ಜೊತೆಯಾಟದ ಮೂಲಕ ಭರ್ಜರಿ ಆರಂಭ ಪಡೆದ ವೆಸ್ಟ್ ಇಂಡೀಸ್ ವನಿತೆಯರ ತಂಡ ನಾಟಕೀಯ ಕುಸಿತ ಕಂಡಿದೆ. ಆರಂಭಿಕರಾದ ದೇಂದ್ರಾ ಡಾಟಿನ್ 62, ಹೈಲೈ ಮ್ಯಾಥ್ಯೂಸ್ 43 ರನ್‌ಗಳಿಸಿ, ನೂರು ರನ್‌ಗಳ ಜೊತೆಯಾಟ ನೀಡಿದ್ರು. ಆದ್ರೆ ಈ ಇಬ್ಬರು ಆರಂಭಿಕರನ್ನ ಸ್ನೇಹ ರಾನಾ ಪೆವಿಲಿಯನ್‌ಗೆ ಅಟ್ಟಿದ ಬಳಿಕ ಒಬ್ಬೊಬ್ಬರಾಗಿ ವಿಂಡೀಸ್ ಆಟಗಾರ್ತಿಯರು ವಿಕೆಟ್ ಒಪ್ಪಿಸಿದ್ರು.

ಭಾರತದ ಬಿಗು ಬೌಲಿಂಗ್ ದಾಳಿಗೆ ತತ್ತರಿಸಿದ ವಿಂಡೀಸ್ ಮಹಿಳೆಯರು 40.3 ಓವರ್‌ಗಳಲ್ಲೇ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 162ರನ್‌ಗಳಿಗೆ ಆಲೌಟ್ ಆಗುವ ಮೂಲಕ ಸೋಲಿಗೆ ಶರಣಾಗಿದೆ. ಭಾರತ ಪರ ಸ್ನೆಹ ರಾನಾ 3, ಮೇಘ್ನಾ ಸಿಂಗ್ 2, ಜೂಲನ್ ಗೋಸ್ವಾಮಿ ಮತ್ತು ರಾಜೇಶ್ವರಿ ಗಾಯಕ್ವಾಡ್ ತಲಾ ಒಂದು ವಿಕೆಟ್ ಪಡೆದು ಮಿಂಚಿದ್ದಾರೆ.

ಜೂಲನ್ ಗೋಸ್ವಾಮಿ ಈ ಪಂದ್ಯದಲ್ಲಿ ಒಂದು ವಿಕೆಟ್ ಪಡೆಯುವ ಮೂಲಕ ವಿಶ್ವಕಪ್‌ನಲ್ಲಿ 40ನೇ ವಿಕೆಟ್ ಪಡೆದ ಸಾಧನೆ ಮಾಡಿದ್ದು, ಗರಿಷ್ಠ ವಿಕೆಟ್ ಟೇಕರ್ ಎಂಬ ಸಾಧನೆ ಮಾಡಿದ್ದಾರೆ.

ಇದಕ್ಕೂ ಮೊದಲು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಮಿಥಾಲಿ ರಾಜ್ ಟೀಂ ಉತ್ತಮ ಆರಂಭ ಪಡೆಯುವಲ್ಲಿ ವಿಫಲಗೊಂಡಿತಾದ್ರೂ, ಮಂದಾನ ಮತ್ತು ಹರ್ಮನ್‌ಪ್ರೀತ್ ಕೌರ್ ಶತಕ ದಾಖಲಿಸಿ ಅಬ್ಬರಿಸಿ ತಂಡದ ಮೊತ್ತವನ್ನ 300ರ ಗಡಿದಾಟಿಸಿದ್ರು.

ಡಗೈ ಬ್ಯಾಟರ್ ಸ್ಮೃತಿ ಮಂದಾನ ಏಕದಿನ ಕ್ರಿಕೆಟ್‌ ಮಾದರಿಯಲ್ಲಿ ಐದನೇ ಶತಕ ದಾಖಲಿಸುವ ಮೂಲಕ ಮಿಂಚಿದ್ದಾರೆ. 119 ಎಸೆತಗಳಲ್ಲಿ 123 ರನ್‌ಗಳಿಸಿ ಔಟಾದ ಮಂದಾನ ಇನ್ನಿಂಗ್ಸ್‌ನಲ್ಲಿ 13 ಸೊಗಸಾದ ಬೌಂಡರಿ ಜೊತೆಗೆ 2 ಭರ್ಜರಿ ಸಿಕ್ಸರ್‌ಗಳಿದ್ದವು.

ಸ್ಮೃತಿ ಮಂದಾನ ಒಂದು ಕಡೆ ಅಬ್ಬರದ ಶತಕ ಸಿಡಿಸಿದ್ರೆ, ಹರ್ಮನ್‌ಪ್ರೀತ್ ಕೌರ್ ಕೂಡ ಉತ್ತಮ ಸಾಥ್ ನೀಡಿದ್ರು. ಸ್ಮೃತಿ ಮಂದಾನಗೆ ಉತ್ತಮ ಸಾಥ್ ನೀಡಿದ ಹರ್ಮನ್‌ಪ್ರೀತ್ ಕೌರ್ ಕೂಡ ಶತಕದ ಆಟವಾಡುವ ಮೂಲಕ ಮಿಂಚಿದ್ದಾರೆ. ಮಂದಾನ ಅಂತಿಮವಾಗಿ 107 ಎಸೆತಗಳಲ್ಲಿ 109 ರನ್‌ ಸಿಡಿಸಿ ವಿಕೆಟ್ ಒಪ್ಪಿಸಿದ ಬಳಿಕ ಹರ್ಮನ್ ಪ್ರೀತ್ ಕೌರ್ ವಿಂಡೀಸ್ ಬೌಲರ್‌ಗಳನ್ನ ಬೆಂಡೆತ್ತಿದ್ರು.

ವಿಶ್ವಕಪ್‌ನಲ್ಲಿ ಮೂರನೇ ಏಕದಿನ ಶತಕ ದಾಖಲಿಸಿದ ಹರ್ಮನ್ ಪ್ರೀತ್ ಕೌರ್‌ ಮಿಥಾಲಿ ರಾಜ್ ಹೆಸರಲ್ಲಿದ್ದ (2) ಶತಕದ ದಾಖಲೆಯನ್ನ ಹಿಂದಿಕ್ಕಿದ್ದು, ಭಾರತ ಪರ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ಆಟಗಾರ್ತಿಯಾಗಿ ಹೊರಹೊಮ್ಮಿದ್ದಾರೆ. ಈ ಇಬ್ಬರು ಆಟಗಾರ್ತಿಯರ ಶತಕದ ನೆರವಿನಿಂದ ಭಾರತ, ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 317 ರನ್ ಕಲೆಹಾಕಿತು.

ಕ್ರಿಕೆಟ್ನಲ್ಲಿ ಬದಲಾದ 3 ನಿಯಮ:ಆಟಕ್ಕೆ ಇದು ಪ್ಲಸ್ or ಮೈನಸ್?? | Oneindia Kannada

Story first published: Saturday, March 12, 2022, 15:09 [IST]
Other articles published on Mar 12, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+