ICC ಮಹಿಳಾ ವಿಶ್ವಕಪ್ 2022: ಇಂಗ್ಲೆಂಡ್ ವಿರುದ್ಧ ದಕ್ಷಿಣ ಆಫ್ರಿಕಾಗೆ ಗೆಲುವು

ಮೌಂಟ್ ಮೌಂಗನುಯಿನ ಬೇ ಓವಲ್ ಮೈದಾನದಲ್ಲಿ ನಡೆದ ಮಹಿಳಾ ವಿಶ್ವಕಪ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ದಕ್ಷಿಣ ಆಫ್ರಿಕಾ ಮೂರು ವಿಕೆಟ್‌ಗಳ ರೋಚಕ ಜಯ ಸಾಧಿಸಿದೆ. ಇಂಗ್ಲೆಂಡ್ ನೀಡಿದ 236 ರನ್‌ಗಳ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ವನಿತೆಯರು ನಾಲ್ಕು ಎಸೆತಗಳು ಬಾಕಿ ಇರುವಂತೆ ಗುರಿ ತಲುಪಿದೆ.
ಟಾಸ್ ಸೋತರು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಇಂಗ್ಲೆಂಡ್ ವನಿತೆಯರು ಉತ್ತಮ ಆರಂಭ ಪಡೆಯುವಲ್ಲಿ ವಿಫಲಗೊಂಡಿತು. ಆರಂಭಿಕ ಬ್ಯಾಟರ್ ಡೇನಿಯಲ್ ವ್ಯಾಟ್ 3ರನ್‌ಗೆ ವಿಕೆಟ್ ಒಪ್ಪಿಸಿದ್ರೆ, ನಾಯಕಿ ಹೇದರ್ ನೈಟ್ 9 ರನ್‌ಗೆ ಔಟಾಗಿದ್ದು, ಇಂಗ್ಲೆಂಡ್‌ಗೆ ನುಂಗಲಾರದ ತುತ್ತಾಯಿತು. ಇದ್ರ ಬೆನ್ನಲ್ಲೇ ನತಾಲಿ ಸ್ಕೀವರ್ ಕೂಡ 16ರನ್‌ಗೆ ಇನ್ನಿಂಗ್ಸ್ ಮುಗಿಸಿದ್ರು.
ಹೀಗೆ ಬಹುಬೇಗನೆ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಇಂಗ್ಲೆಂಡ್ ತಂಡಕ್ಕೆ ಓಪನರ್ ಬೇನಮೌಂಟ್ 62 ಮತ್ತು ಆ್ಯಮಿ ಜೋನ್ಸ್ 53 ರನ್‌ಗೆ ಔಟಾಗುವ ಮೂಲಕ ನಾಲ್ಕನೇ ವಿಕೆಟ್‌ಗೆ ಶತಕ ಜೊತೆಯಾಟದಿಂದ ತಂಡವನ್ನ ಹೀನಾಯ ಕುಸಿತದಿಂದ ಪಾರು ಮಾಡಿದ್ರು.
ಆದ್ರೆ ಈ ಇಬ್ಬರ ವಿಕೆಟ್ ಪತನದ ಬಳಿಕ ಮಧ್ಯಮ ಹಾಗೂ ಕೆಳಕ್ರಮಾಂಕದ ಬ್ಯಾಟಿಂಗ್ ವೈಫಲ್ಯದಿಂದ ಇಂಗ್ಲೆಂಡ್ ವನಿತೆಯರು 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 235 ರನ್ ಕಲೆಹಾಕಿತು.
236 ರನ್‌ಗಳ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ಕೂಡ ಆರಂಭಿಕ ಆಘಾತವನ್ನ ಕಂಡಿತು. ಓಪನರ್ ಲಿಜೆಲ್ ಲೀ ಕೇವಲ 9 ರನ್‌ಗೆ ವಿಕೆಟ್ ಒಪ್ಪಿಸಿದ್ರು. ಆದ್ರೆ ಲೌರ 77 ರನ್ ಕಲೆಹಾಕುವ ಮೂಲಕ ತಂಡವನ್ನ ದೊಡ್ಡ ಕುಸಿತದಿಂದ ಪಾರು ಮಾಡಿದ್ರು. ತಜ್ಮಿನ್ ಬ್ರಿಟ್ಸ್ 23, ಸುನೆ ಲುಸ್ 36, ಮರಿಜೆನ್ ಕಪ್ 32 ರನ್‌ಗಳ ಕೊಡುಗೆಯ ಮೂಲಕ ತಂಡವನ್ನ ಗೆಲುವಿನ ದಡದತ್ತ ಕೊಂಡೊಯ್ದರು. ಈ ಮೂಲಕ ದಕ್ಷಿಣ ಆಫ್ರಿಕಾ ಇನ್ನೂ ನಾಲ್ಕು ಎಸೆತ ಬಾಕಿ ಇರುವಂತೆ 3 ವಿಕೆಟ್‌ಗಳ ಜಯ ಸಾಧಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications