For Quick Alerts
ALLOW NOTIFICATIONS  
For Daily Alerts
 

ಐಸಿಸಿ ಮಹಿಳಾ ವಿಶ್ವಕಪ್ 2022: ಟೀಂ ಇಂಡಿಯಾ ಘೋಷಣೆ, ಮಿಥಾಲಿ ರಾಜ್ ನಾಯಕತ್ವ

Team india womens

ಐಸಿಸಿ ಮಹಿಳಾ ವಿಶ್ವಕಪ್ 2022ರ ಟೂರ್ನಮೆಂಟ್‌ ಕುರಿತಾಗಿ ಬಿಸಿಸಿಐ, ಭಾರತೀಯ ಮಹಿಳಾ ತಂಡವನ್ನ ಪ್ರಕಟಿಸಿದೆ. ಮುಂದಿನ ವರ್ಷ ನಡೆಯಲಿರುವ ವಿಶ್ವಕಪ್ ಸೇರಿದಂತೆ ಮುಂಬರುವ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೆ ಸೇರಿದಂತೆ ಆಟಗಾರ್ತಿಯರ ಹೆಸರನ್ನ ಗುರುವಾರ ಪ್ರಕಟಿಸಿದೆ.

ಹಿರಿಯ ಅನುಭವಿ ಆಟಗಾರ್ತಿ ಮಿಥಾಲಿ ರಾಜ್‌ ನೇತೃತ್ವದಲ್ಲಿ ಮುನ್ನಡೆಯಲಿರುವ ಭಾರತ ಮಹಿಳಾ ತಂಡದಲ್ಲಿ, ಆಸ್ಟ್ರೇಲಿಯಾದಲ್ಲಿ ಭಾರತದ ಕೊನೆಯ ಸೀಮಿತ-ಓವರ್‌ಗಳ ಟೂರ್ನಿಯಲ್ಲಿ ತಂಡದ ಅವಿಭಾಜ್ಯ ಅಂಗವಾಗಿದ್ದ ಯುವ ಆಟಗಾರ್ತಿ ಜೆಮಿಮಾ ರಾಡ್ರಿಗಸ್ ಅವರನ್ನು ಕೈಬಿಟ್ಟಿರುವುದು ಅತಿದೊಡ್ಡ ಆಶ್ಚರ್ಯಕರವಾಗಿದೆ.

ಮಿಥಾಲಿ ರಾಜ್ ಅವರು 15 ಸದಸ್ಯರ ತಂಡವನ್ನು ಮುನ್ನಡೆಸಲಿದ್ದು, ಹರ್ಮನ್‌ಪ್ರೀತ್ ಕೌರ್ ಅವರ ಉಪನಾಯಕಿಯಾಗಿದ್ದಾರೆ. ಶಿಖಾ ಪಾಂಡೆ ಕೂಡ ಭಾರತೀಯ ತಂಡದಲ್ಲಿ ಸ್ಥಾನ ಪಡೆದಿಲ್ಲ, ಆದರೆ ಸ್ನೇಹ ರಾಣಾ 2021 ರಲ್ಲಿ ಎಲ್ಲಾ ಸ್ವರೂಪಗಳಲ್ಲಿ ತನ್ನ ಆಲ್‌ರೌಂಡ್ ಕೌಶಲ್ಯದಿಂದ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಟೀಮ್ ಇಂಡಿಯಾ ತನ್ನ ಮೊದಲ ವಿಶ್ವಕಪ್ ಪಂದ್ಯವನ್ನು ಪಾಕಿಸ್ತಾನದ ವಿರುದ್ಧ ಮಾರ್ಚ್ 6, 2022 ರಂದು ಟೌರಂಗದ ಬೇ ಓವಲ್‌ನಲ್ಲಿ ಆಡಲಿದೆ. 2022 ರ ಫೆಬ್ರವರಿ 11 ರಿಂದ ಪ್ರಾರಂಭವಾಗುವ ನ್ಯೂಜಿಲೆಂಡ್ ವಿರುದ್ಧದ 5 ಪಂದ್ಯಗಳ ODI ಸರಣಿಯಲ್ಲೂ ಇದೇ ತಂಡವು ಕಾಣಿಸಿಕೊಳ್ಳಲಿದೆ.

ಮಹಿಳಾ ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದ ನಂತರ, ಭಾರತವು ನ್ಯೂಜಿಲೆಂಡ್ (ಮಾರ್ಚ್ 10), ವೆಸ್ಟ್ ಇಂಡೀಸ್ (ಮಾರ್ಚ್ 12), ಇಂಗ್ಲೆಂಡ್ (ಮಾರ್ಚ್ 16), ಆಸ್ಟ್ರೇಲಿಯಾ (ಮಾರ್ಚ್ 19), ಬಾಂಗ್ಲಾದೇಶ (ಮಾರ್ಚ್ 22) ಮತ್ತು ದಕ್ಷಿಣ ವಿರುದ್ಧ ಸೆಣಸಲಿದೆ.

2022ರ ಮಹಿಳಾ ವಿಶ್ವಕಪ್‌ಗೆ ಭಾರತ ತಂಡ ಈ ಕೆಳಗಿನಂತಿದೆ:
ಮಿಥಾಲಿ ರಾಜ್ (ನಾಯಕಿ), ಹರ್ಮನ್‌ಪ್ರೀತ್ ಕೌರ್ (ಉಪನಾಯಕಿ), ಸ್ಮೃತಿ, ಶಫಾಲಿ, ಯಾಸ್ತಿಕಾ, ದೀಪ್ತಿ, ರಿಚಾ ಘೋಷ್ (ವಿಕೆಟ್ ಕೀಪರ್), ಸ್ನೇಹ ರಾಣಾ, ಜೂಲನ್ ಗೂಸ್ವಾಮಿ, ಪೂಜಾ, ಮೇಘನಾ ಸಿಂಗ್, ರೇಣುಕಾ ಸಿಂಗ್ ಠಾಕೂರ್, ತಾನಿಯಾ ಭಾಟಿಯಾ (ವಿಕೆಟ್ ಕೀಪರ್), ರಾಜೇಶ್ವರಿ ಗಾಯಕ್ವಾಡ್, ಪೂನಂ ಯಾದವ್

ಸ್ಟ್ಯಾಂಡ್‌ಬೈ ಆಟಗಾರರು: ಸಬ್ಬಿನೇನಿ ಮೇಘನಾ, ಏಕ್ತಾ ಬಿಷ್ತ್, ಸಿಮ್ರಾನ್ ದಿಲ್ ಬಹದ್ದೂರ್

ಫೆಬ್ರವರಿ 9 ರಂದು ನಡೆಯಲಿರುವ ನ್ಯೂಜಿಲೆಂಡ್ ವಿರುದ್ಧದ T20 ಪಂದ್ಯಕ್ಕೂ ಬಿಸಿಸಿಐ 16 ಸದಸ್ಯರ ತಂಡವನ್ನು ಪ್ರಕಟಿಸಿದೆ.

ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ಶಫಾಲಿ ವರ್ಮಾ, ಯಾಸ್ತಿಕಾ ಭಾಟಿಯಾ, ದೀಪ್ತಿ ಶರ್ಮಾ, ರಿಚಾ ಘೋಷ್ (ವಿಕೆಟ್-ಕೀಪರ್), ಸ್ನೇಹ ರಾಣಾ, ಪೂಜಾ ವಸ್ತ್ರಾಕರ್, ಮೇಘನಾ ಸಿಂಗ್, ರೇಣುಕಾ ಸಿಂಗ್ ಠಾಕೂರ್, ತಾನಿಯಾ ಭಾಟಿಯಾ (ವಿಕೆಟ್-ಕೀಪರ್), ರಾಜೇಶ್ವರಿ ಗಾಯಕ್ವಾಡ್, ಪೂನಮ್ ಯಾದವ್, ಏಕ್ತಾ ಬಿಶ್ತ್, ಎಸ್. ಮೇಘನಾ, ಸಿಮ್ರಾನ್ ದಿಲ್ ಬಹದ್ದೂರ್.

Story first published: Thursday, January 6, 2022, 12:38 [IST]
Other articles published on Jan 6, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+