ICC Women's World Cup 2025: ಭಾರತ ವಿರುದ್ಧ ಟಾಸ್ ಗೆದ್ದ ಪಾಕ್ ಬೌಲಿಂಗ್ ಆಯ್ಕೆ
ಭಾರತ ಹಾಗೂ ಪಾಕಿಸ್ತಾನ ತಂಡಗಳು ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಮುಖಾಮುಖಿ ಆಗುತ್ತಿವೆ. ಸತತ ನಾಲ್ಕನೇ ಭಾನುವಾರ ಭಾರತ ಹಾಗೂ ಪಾಕ್ ನಡುವಣ ಹೈ ವೋಲ್ಟೇಜ್ ಪಂದ್ಯವನ್ನು ವೀಕ್ಷಿಸುವ ಮಜೆಯನ್ನು ಅಭಿಮಾನಿಗಳು ಪಡೆಯಲಿದ್ದಾರೆ. ಈ ಪಂದ್ಯಕ್ಕೆ ಕೊಲಂಬೊ ಮೈದಾನ ಸಿದ್ಧವಾಗಿದೆ. ಈ ಪಂದ್ಯದಲ್ಲಿ ಜಯ ಸಾಧಿಸಿ ಅಂಕ ಪಟ್ಟಿಯಲ್ಲಿ ಬಡ್ತಿ ಪಡೆಯುವ ಕನಸು ಭಾರತ ತಂಡದ್ದಾಗಿದೆ. ಮಹತ್ವದ ಹೈವೋಲ್ಟೇಜ್ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ತಂಡ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದೆ.
ಈಗಾಗಲೇ ಪುರುಷರ ತಂಡೇಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿಯಿಂದ ಕಳೆದ ಮೂರು ಭಾನುವಾರ ಮುಖಾಮುಖಿ ಆಗಿದ್ದವು. ಈಗ ಒಂದೇ ತಿಂಗಳಿನಲ್ಲು ನಾಲ್ಕನೇ ಬಾರಿಗೆ ಭಾರತ ಹಾಗೂ ಪಾಕ್ ತಂಡಗಳು ಕಾದಾಟ ನಡೆಸಲಿವೆ. ಅಂಕಿ ಅಂಶಗಳ ಲೆಕ್ಕಾಚಾರದಲ್ಲಿ ಹರ್ಮನ್ ಪಡೆ ಭರ್ಜರಿಯಾಗಿದೆ. ಅಲ್ಲದೆ ಕಳೆದ ಪಂದ್ಯದಲ್ಲಿ ದಾಖಲಿಸಿದ ಗೆಲುವು ಕೌರ್ ಪಡೆಯ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಇತ್ತ ಪಾಕಿಸ್ತಾನ ಪ್ರಸಕ್ತ ಏಕದಿನ ವಿಶ್ವಕಪ್‌ನಲ್ಲಿ ತಾನಾಡಿದ ಮೊದಲ ಪಂದ್ಯದಲ್ಲಿ ಸೋಲು ಕಂಡಿದೆ. ಹೀಗಾಗಿ ಭಾರತ ವಿರುದ್ಧದ ಪಂದ್ಯದಲ್ಲಿ ಗೆಲುವು ದಾಖಲಿಸುವ ಅನಿವಾರ್ಯತೆ ಪಾಕ್ ತಂಡದ್ದಾಗಿದೆ.

ಒಂದು ಬದಲಾವಣೆ
ಭಾರತ ಹಾಗೂ ಪಾಕ್ ತಂಡಗಳು ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ ಒಟ್ಟು 11 ಬಾರಿ ಮುಖಾಮುಖಿ ಆಗಿದ್ದು, ಭಾರತ ಅಷ್ಟೂ ಪಂದ್ಯಗಳನ್ನು ಗೆದ್ದಿದೆ. ಭಾನುವಾರ ನಡೆಯಲಿರುವ ಇನ್ನೊಂದು ಪಂದ್ಯದಲ್ಲಿ ಜಯ ದಾಖಲಿಸುವ ಇರಾದೆ ಭಾರತ ತಂಡದ್ದಾಗಿದೆ. ಭಾರತ ಈ ಪಂದ್ಯಕ್ಕಾಗಿ ಒಂದು ಬದಲಾವಣೆಯಿಂದ ಅಖಾಡಕ್ಕೆ ಇಳಿದಿದೆ. ಕಳೆದ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಅಮನ್‌ಜೋತ್ ಕೌರ್ ಬದಲಿಗೆ ರೇಣುಕಾ ಸಿಂಗ್ ಅವರಿಗೆ ಅವಕಾಶ ನೀಡಲಾಗಿದೆ.
ಭಾರತ ತಂಡ: ಸ್ಮೃತಿ ಮಂಧಾನ, ಪ್ರತೀಕಾ ರಾವಲ್, ಹರ್ಲೀನ್ ಡಿಯೋಲ್, ಹರ್ಮನ್‌ಪ್ರೀತ್ ಕೌರ್ (ನಾಯಕ), ಜೆಮಿಮಾ ರಾಡ್ರಿಗಸ್, ದೀಪ್ತಿ ಶರ್ಮಾ, ರಿಚಾ ಘೋಷ್ (ವಿಕೆಟ್ ಕೀಪರ್), ಸ್ನೇಹ ರಾಣಾ, ಕ್ರಾಂತಿ ಗೌಡ್, ಶ್ರೀ ಚರಣಿ, ರೇಣುಕಾ ಸಿಂಗ್
ಪಾಕ್ ತಂಡ: ಮುನೀಬಾ ಅಲಿ, ಸದಾಫ್ ಶಮಾಸ್, ಸಿದ್ರಾ ಅಮೀನ್, ಅಲಿಯಾ ರಿಯಾಜ್, ನತಾಲಿಯಾ ಪರ್ವೈಜ್, ಫಾತಿಮಾ ಸನಾ (ನಾಯಕ), ರಮೀನ್ ಶಮೀಮ್, ಡಯಾನಾ ಬೇಗ್, ಸಿದ್ರಾ ನವಾಜ್ (ವಿಕೆಟ್ ಕೀಪರ್), ನಶ್ರಾ ಸಂಧು, ಸಾದಿಯಾ ಇಕ್ಬಾಲ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications