ICC Women's World Cup 2025: ಟೀಮ್ ಇಂಡಿಯಾಕ್ಕೆ ಭರ್ಜರಿ ಜಯ: 88 ರನ್ ಗೆಲುವು
ಕೊಲಂಬೊ: ಭರವಸೆಯ ಆಟಗಾರ್ತಿ ಕ್ರಾಂತಿ ಗೌಡ ಹಾಗೂ ದೀಪ್ತಿ ಶರ್ಮಾ ಅವರು ಜವಾಬ್ದಾರಿಯುತ ಆಟದ ನೆರವಿನಿಂದ ಭಾರತ 88 ರನ್‌ಗಳಿಂದ ಪಾಕಿಸ್ತಾನ ತಂಡವನ್ನು ಮಣಿಸಿ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಎರಡನೇ ಗೆಲುವು ದಾಖಲಿಸಿದೆ.
ಮಹಿಳಾ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ವಿರುದ್ಧ ಪಾಕ್ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಮಾಡಲು ನಿರ್ಧರಿಸಿತು. ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾದ ಆರಂಭ ಸಾಧರಣವಾಗಿತ್ತು. ತಂಡದ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧನಾ ಹಾಗೂ ಪ್ರತಿಕಾ ರಾವಲ್ ಜೋಡಿ ಉತ್ತಮ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ 54 ಎಸೆತಗಳಲ್ಲಿ 48 ರನ್ ಸೇರಿಸಿತು. ಸ್ಮೃತಿ ಮಂಧಾನ 4 ಬೌಂಡರಿ ನೆರವಿನಿಂದ 23 ರನ್ ಸಿಡಿಸಿದರು. ಇನ್ನೋರ್ವ ಆರಂಭಿಕ ಆಟಗಾರ್ತಿ ಪ್ರತಿಕಾ ರಾವಲ್ 5 ಬೌಂಡರಿ ಸಹಾಯದಿಂದ 31 ರನ್ ಬಾರಿಸಿದರು.

ಮಧ್ಯಮ ಕ್ರಮಾಂಕದಲ್ಲಿ ಹರ್ಲಿನ್ ಡಿಯೋಲ್ ಸೊಗಸಾದ ಆಟದ ಪ್ರದರ್ಶನವನ್ನು ನೀಡಿದರು. ಆದರೆ ಇವರಿಗೆ ಹರ್ಮನ್ ಪ್ರೀತ್ ಕೌರ್ ಉತ್ತಮ ಸಾಥ್ ನೀಡಲಿಲ್ಲ. ಐದನೇ ವಿಕೆಟ್‌ಗೆ ಹರ್ಲಿನ್ ಜೊತೆಗೂಡಿದ ಜೆಮಿಮಾ ರೋಡ್ರಿಗಸ್ ತಂಡ ತಮ್ಮ ಮೇಲೆ ಇಟ್ಟ ಭರವಸೆಗೆ ಪೂರಕವಾಗಿ ಬ್ಯಾಟ್ ಮಾಡಿದರು. ಈ ಜೋಡಿ 52 ಎಸೆತಗಳಲ್ಲಿ 45 ರನ್ ಸೇರಿಸಿತು. ಈ ವೇಳೆ ಜೇಮಿಮಾ 32 ರನ್ ಬಾರಿಸಿದ್ದಾಗ ಪೆವಿಲಿಯನ್ ಸೇರಿದರು. ಸ್ನೇಹಾ ರಾಣಾ 20 ರನ್ ಸಿಡಿಸಿದರು. ಮೊದಲ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಬಾರಿಸಿದ್ದ ದೀಪ್ತಿ ಶರ್ಮಾ, ಪಾಕ್ ವಿರುದ್ಧದ ಪಂದ್ಯದಲ್ಲಿ 25 ರನ್ ಸಿಡಿಸಿದರು.
ಮಧ್ಯಮ ಕ್ರಮಾಂಕದಲ್ಲಿ ಹರ್ಲಿನ್ ಡಿಯೋಲ್ 4 ಬೌಂಡರಿ, 1 ಸಿಕ್ಸರ್ ನೆರವಿನಿಂದ 46 ರನ್ ಬಾರಿಸಿ ಔಟ್ ಆದರು. ವಿಕೆಟ್ ಕೀಪರ್ ರಿಚಾ ಘೋಷ್ 3 ಬೌಂಡರಿ, 2 ಸಿಕ್ಸರ್ ಸಹಾಯದಿಂದ ಅಜೇಯ 35 ರನ್ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಅಂತಿಮವಾಗಿ ಭಾರತ 50 ಓವರ್‌ಗಳಲ್ಲಿ 247 ರನ್‌ಗಳಿಗೆ ಆಲೌಟ್ ಆಯಿತು.
ರನ್ ಕಲೆ ಹಾಕಲು ಪರದಾಟ
ಪಾಕಿಸ್ತಾನ ತಂಡದ ಪರ ಸಿದ್ರಾ ಅಮೀನ್ ಅಮೋಘ ಆಟದ ಪ್ರದರ್ಶನ ನೀಡಿ ಸೋಲಿನಲ್ಲಿ ಮಿಂಚಿದರು. ಇವರು 9 ಬೌಂಡರಿ, 1 ಸಿಕ್ಸರ್ ನೆರವಿನಿಂದ 81 ರನ್ ಸಿಡಿಸಿದರು. ಉಳಿದಂತೆ ನಟಾಲಿಯಾ ಪೆರ್ವೈಜ್ 33 ರನ್ ಸಿಡಿಸಿದರು. ಅಂತಿಮವಾಗಿ ಪಾಕ್ 159 ರನ್‌ಗಳಿಗೆ ಆಲೌಟ್ ಆಯಿತು. ಭಾರತದ ಪರ ಕ್ರಾಂತಿ ಗೌಡ ಹಾಗೂ ದೀಪ್ತಿ ಶರ್ಮಾ ತಲಾ 3 ವಿಕೆಟ್ ಕಬಳಿಸಿದರು. ಈ ಗೆಲುವಿನ ಮೂಲಕ ಆಡಿದ 2 ಪಂದ್ಯಗಳನ್ನು ಗೆದ್ದ ಭಾರತ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಬಡ್ತಿ ಪಡೆದಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications