Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮಹಿಳಾ ವಿಶ್ವ ಟಿ20: ಪಾಕಿಸ್ತಾನವನ್ನು 7 ವಿಕೆಟ್ ನಿಂದ ಮಣಿಸಿದ ಭಾರತ

ICC Womens World T20, India vs Pakistan Live Score

ಗಯಾನಾ, ನವೆಂಬರ್ 11: ಗಯಾನಾದ ಪ್ರಾವಿಡೆನ್ಸ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಐಸಿಸಿ ಮಹಿಳಾ ವಿಶ್ವ ಟಿ20 ಟೂರ್ನಿಯ ಭಾನುವಾರದ (ನವೆಂಬರ್ 11) ಭಾರತ ಮತ್ತು ಪಾಕಿಸ್ತಾನ ತಂಡಗಳ ಮುಖಾಮುಖಿಯಲ್ಲಿ ಭಾರತ 7 ವಿಕೆಟ್ ಗೆಲುವನ್ನಾಚರಿಸಿದೆ. ಮಿಥಾಲಿ ರಾಜ್ ಅರ್ಧಶತಕ ನೆರವಿನಿಂದ ಭಾರತದ ಮಹಿಳೆಯರು ಟೂರ್ನಿಯಲ್ಲಿ ಎರಡನೇ ಜಯ ದಾಖಲಿಸಿದರು.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸ್ಪಟ್ಟ ಪಾಕಿಸ್ತಾನ ತಂಡ, ಬಿಶ್ಮ ಮರೂಫ್ ಅರ್ಧಶತಕ (53 ರನ್) ಮತ್ತು ನಿದಾ ದಾರ್ ಅರ್ಧ ಶತಕ (52 ರನ್) ಕೊಡುಗೆಯೊಂದಿಗೆ 20 ಓವರ್ ಗಳಲ್ಲಿ 7 ವಿಕೆಟ್ ಕಳೆದು 133 ರನ್ ಪೇರಿಸಿ ಎದುರಾಳಿಗೆ 134 ರನ್ ಗುರಿ ನೀಡಿತ್ತು.

ಗುರಿ ಬೆನ್ನತ್ತಿದ ಭಾರತ ಪರ ಆರಂಭಿಕ ಆಟಗಾರ್ತಿ ಮಿಥಾಲಿ 56, ಸ್ಮೃತಿ ಮಂಧಾನ 26 ರನ್ ಕಲೆ ಹಾಕಿದರು. ಜೊತೆಗೆ ಜಮಿಮಾ ರೋಡ್ರಿಗಸ್ 16, ನಾಯಕಿ ಹರ್‌ಮನ್‌ಪ್ರೀತ್ ಕೌರ್ ಅಜೇಯ 14 ರನ್, ವೇದಾ ಕೃಷ್ಣಮೂರ್ತಿ ಅಜೇಯ 8 ರನ್ ಸೇರಿಸಿದ್ದು ತಂಡಕ್ಕೆ ರನ್ ಬಲ ತುಂಬಿತು.

19 ಓವರ್ ನಲ್ಲಿ ಭಾರತ 3 ವಿಕೆಟ್ ನಷ್ಟಕ್ಕೆ 137 ರನ್ ಪೇರಿಸಿ ಗೆಲುವನ್ನು ಸಂಭ್ರಮಿಸಿತು. ಪಾಕಿಸ್ತಾನ ಇನ್ನಿಂಗ್ಸ್ ವೇಳೆ ಭಾರತದ ದಯಾಲನ್ ಹೇಮಲತಾ ಮತ್ತು ಪೂನಂ ಯಾದವ್ ತಲಾ 2 ವಿಕೆಟ್ ಕೆಡವಿ ಕಾಡಿದರು. ಅರುಂಧತಿ ರೆಡ್ಡಿಗೂ 1 ವಿಕೆಟ್ ಲಭಿಸಿತು.

ಭಾರತ ಹಾಗೂ ಪಾಕಿಸ್ತಾನ ಸ್ಕೋರ್ ಕಾರ್ಡ್

ಬಿ ಗ್ರೂಪ್ ನಲ್ಲಿರುವ ಭಾರತ ತಂಡ ನ್ಯೂಜಿಲ್ಯಾಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ ಜಯಿಸಿದ್ದರೆ, ಪಾಕಿಸ್ತಾನದ ಮಹಿಳೆಯರು ಆಸ್ಟ್ರೇಲಿಯಾ ವಿರುದ್ಧದ ಮೊದಲ ಪಂದ್ಯವನ್ನು 52 ರನ್ ಗಳಿಂದ ಸೋತಿದ್ದರು. ಮತ್ತೆ ಸಾಂಪ್ರದಾಯಿಕ ಎದುರಾಳಿ ಭಾರತದ ಎದುರು ಟೂರ್ನಿಯ 5ನೇ ಪಂದ್ಯದಲ್ಲಿ ಪಾಕ್‌ಗೆ ಸೋಲಾಗಿದೆ.

Story first published: Monday, November 12, 2018, 19:22 [IST]
Other articles published on Nov 12, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+