Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಉಪಾಂತ್ಯದಲ್ಲಿ ಭಾರತಕ್ಕೆ ನ್ಯೂಜಿಲೆಂಡ್ ಎದುರಾಳಿ?

ಆಕ್ಲೆಂಡ್, ಮಾ.12: ವಿಶ್ವಕಪ್ 2015 ಟೂರ್ನಿ ಲೀಗ್ ಹಂತ ತಲುಪಿದ್ದು, ಕ್ವಾರ್ಟರ್ ಫೈನಲ್ ಗೆ ಯಾವ ತಂಡ ಅರ್ಹತೆ ಪಡೆಯಲಿದೆ ಎಂಬ ಕುತೂಹಲಕ್ಕೆ ಬಹುತೇಕ ತೆರೆ ಬಿದ್ದಿದೆ. ಎ ಗುಂಪು ಹಾಗೂ ಬಿ ಗುಂಪಿನ ಅಗ್ರಸ್ಥಾನದಲ್ಲಿರುವ ಅತಿಥೇಯ ನ್ಯೂಜಿಲೆಂಡ್ ಹಾಗೂ ಹಾಲಿ ಚಾಂಪಿಯನ್ ಟೀಂ ಇಂಡಿಯಾ ಸೆಮಿಫೈನಲ್ ನಲ್ಲಿ ಮುಖಾಮುಖಿಯಾಗುವ ಸಾಧ್ಯತೆಗಳಿವೆ.

ಎ ಗುಂಪಿನಿಂದ ಕ್ವಾರ್ಟರ್ ಫೈನಲ್ ತಲುಪುವ ನಾಲ್ಕು ತಂಡಗಳು ಪಕ್ಕಾ ಆಗಿದೆ. ಬಿ ಗುಂಪಿನಲ್ಲಿ ಮೂರು ತಂಡಗಳು ಇನ್ನು ಪೈಪೋಟಿಯಲ್ಲಿವೆ.

'ಬಿ' ಗುಂಪಿನಲ್ಲಿ ಅಜೇಯವಾಗಿ ಉಳಿದಿರುವ ಟೀಂ ಇಂಡಿಯಾ ಕ್ವಾರ್ಟರ್ ಫೈನಲಿಗೆ ಅರ್ಹತೆ ಪಡೆದ ಮೊದಲ ತಂಡವಾಗಿದೆ. ಉಳಿದಂತೆ ನ್ಯೂಜಿಲೆಂಡ್, ಆಸ್ಟ್ರೇಲಿಯಾ, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಶ್ರೀಲಂಕಾ ಹಾಗೂ ಬಾಂಗ್ಲಾದೇಶ ನಾಕೌಟ್ ಹಂತ ತಲುಪಿವೆ. ಪಾಕಿಸ್ತಾನ, ವೆಸ್ಟ್ ಇಂಡೀಸ್ ಹಾಗೂ ಐರ್ಲೆಂಡ್ ನಡುವೆ ಪೈಪೋಟಿ ಮುಂದುವರೆದಿದೆ.

World Cup 2015: India Vs New Zealand semi-final likely

ಜಿಂಬಾಬ್ವೆ ಹಾಗೂ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ತಂಡಗಳು ಟೂರ್ನಿಯಿಂದ ಔಟ್ ಆಗಿವೆ. ಕ್ವಾರ್ಟರ್ ಫೈನಲಿಗೂ ಮುಂಚಿತವಾಗಿ ಇಂಗ್ಲೆಂಡ್, ಸ್ಕಾಟ್ಲೆಂಡ್ ಹಾಗೂ ಅಫ್ಘಾನಿಸ್ತಾನ ತಂಡಗಳು ಕೂಡಾ ಪ್ಯಾಕ್ ಅಪ್ ಮಾಡಿವೆ.

ಭಾರತ ಹಾಗೂ ನ್ಯೂಜಿಲೆಂಡ್ ಉತ್ತಮ ಲಯದಲ್ಲಿದ್ದು, ಸುಲಭವಾಗಿ ಕ್ವಾರ್ಟರ್ ಫೈನಲ್ ದಾಟಿ ಸೆಮಿಫೈನಲ್ ತಲುಪುವ ನಿರೀಕ್ಷೆಯಿದೆ. ಐಸಿಸಿ ನಿಯಮದ ಪ್ರಕಾರ ನ್ಯೂಜಿಲೆಂಡ್ ತಂಡ ಕ್ವಾರ್ಟರ್ ಫೈನಲ್ ನಲ್ಲಿ ಬಿ ಗುಂಪಿನ ನಾಲ್ಕನೇ ತಂಡವನ್ನು ಎದುರಿಸಿದರೆ. ಬಿ ಗುಂಪಿನ ಟಾಪ್ ತಂಡ ಭಾರತವನ್ನು ಬಾಂಗ್ಲಾದೇಶ ಎದುರಿಸಲಿದೆ.

ಆದರೆ, ಒಂದು ವೇಳೆ ಬಾಂಗ್ಲಾದೇಶ ಏನಾದರೂ ಅತಿಥೇಯ ನ್ಯೂಜಿಲೆಂಡ್ ತಂಡವನ್ನು ಮಾ.13ರ ಲೀಗ್ ಪಂದ್ಯದಲ್ಲಿ ಸೋಲಿಸಿದರೆ ಎಲ್ಲಾ ಲೆಕ್ಕಾಚಾರ ಉಲ್ಪಾ ಆಗಲಿದೆ. ಅಗ ಧೋನಿ ಹುಡುಗರು ಶ್ರೀಲಂಕಾವನ್ನು ಎದುರಿಸಬೇಕಾಗುತ್ತದೆ.

ಎ ಗುಂಪಿನ ಕ್ವಾರ್ಟರ್ ಫೈನಲಿಸ್ಟ್ : ನ್ಯೂಜಿಲೆಂಡ್, ಆಸ್ಟ್ರೇಲಿಯಾ, ಬಾಂಗ್ಲಾದೇಶ, ಶ್ರೀಲಂಕಾ
ಬಿ ಗುಂಪಿನ ಕ್ವಾರ್ಟರ್ ಫೈನಲಿಸ್ಟ್: ಭಾರತ ಹಾಗೂ ದಕ್ಷಿಣ ಆಫ್ರಿಕಾ

ಕ್ವಾರ್ಟರ್ ಫೈನಲ್
A1 vs B4
A2 vs B3
A3 vs B2
A4 vs B1

ಕ್ವಾರ್ಟರ್ ಫೈನಲ್ ದಿನಾಂಕ/ದಿನ ತಂಡಗಳು ಕ್ರೀಡಾಂಗಣ ಸಮಯ
1 ಮಾ.18, ಬುಧವಾರ ಶ್ರೀಲಂಕಾ vs ದಕ್ಷಿಣ ಆಫ್ರಿಕಾ (ಬಹುತೇಕ) ಸಿಡ್ನಿ 9AM IST
2 ಮಾ.19 ಗುರುವಾರ ಬಾಂಗ್ಲಾದೇಶ vs ಭಾರತ (ಬಹುತೇಕ)
ಮೆಲ್ಬೋರ್ನ್ 9AM IST
3 ಮಾ.20 ಶುಕ್ರವಾರ ಆಸ್ಟ್ರೇಲಿಯಾ vs ಪಾಕಿಸ್ತಾನ/ವೆಸ್ಟ್ ಇಂಡೀಸ್/ಐರ್ಲೆಂಡ್ ಅಡಿಲೇಡ್ 9AM IST
4 ಮಾ.21 ಶನಿವಾರ ನ್ಯೂಜಿಲೆಂಡ್ vs ಪಾಕಿಸ್ತಾನ/ವೆಸ್ಟ್ ಇಂಡೀಸ್/ಐರ್ಲೆಂಡ್ ವೆಲ್ಲಿಂಗ್ಟನ್ 6.30 AM IST
ಸೆಮಿಫೈನಲ್ ಮಾ.24 (ಆಕ್ಲೆಂಡ್) QF 2 vs QF4
ಹಾಗೂ ಮಾ.26 (ಸಿಡ್ನಿ) QF 1 vs QF3
ಫೈನಲ್ ಮಾ.29 (ಮೆಲ್ಬೋರ್ನ್) 9.00 AM IST

Story first published: Wednesday, January 3, 2018, 10:02 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+