ಸ್ಕಾಟ್ಲೆಂಡ್ ಬಗ್ಗು ಬಡಿದ ಶ್ರೀಲಂಕಾಕ್ಕೆ ಭರ್ಜರಿ ಜಯ
ಹೋಬಾರ್ಟ್, ಮಾ.11:ಕ್ರಿಕೆಟ್ ಶಿಶು ಸ್ಕಾಟ್ಲೆಂಡ್ ವಿರುದ್ಧ ಬಲಿಷ್ಠ ಶ್ರೀಲಂಕಾ ತಂಡ 148 ರನ್ ಗಳ ಅಂತರಗಳ ಸುಲಭ ಜಯ ದಾಖಲಿಸಿದೆ. ಶ್ರೀಲಂಕಾ ನೀಡಿದ್ದ 364 ಬೃಹತ್ ಗುರಿಯನ್ನು ಚೇಸ್ ಮಾಡಿದ ಸ್ಕಾಟ್ಲೆಂಡ್ ತಂಡ 43.1 ಓವರ್ಸ್ ಗಳಲ್ಲಿ 215ರನ್ನಿಗೆ ಆಲೌಟ್ ಆಗಿ ಸೊಲೊಪ್ಪಿಕೊಂಡಿದೆ.
ಸ್ಕಾಟ್ಲೆಂಡ್ ಪರ ನಾಯಕ ಮೊಮ್ಮೆಸೆನ್ 60ರನ್, ಕೋಲ್ಮನ್ 70 ಹಾಗೂ ಬೆರಿಂಗ್ಟನ್ 29ರನ್ ಗಳಿಸಿ ಶ್ರೀಲಂಕಾ ತಂಡದ ಗೆಲುವನ್ನು ಕೊಂಚ ಕಾಲ ಮುಂದಕ್ಕೆ ದೂಡಿದ್ದರು. ಅದರೆ, ಕರಾರ್ ವಾಕ್ ಬೌಲಿಂಗ್ ದಾಳಿ ನಡೆಸಿದ ಶ್ರೀಲಂಕಾ ಸುಲಭ ಜಯ ದಾಖಲಿಸಿತು. ಲಂಕಾ ಪರ ಮೊದಲ ಪಂದ್ಯವಾಡಿದ ಚಮೀರ 51ಕ್ಕೆ3, ಕುಲಶೇಖರ 20ಕ್ಕೆ 3 ವಿಕೆಟ್ ಗಳಿಸಿದರು. [ಐತಿಹಾಸಿಕ ದಾಖಲೆ ಸೃಷ್ಟಿಸಿದ ಕುಮಾರ್ ಸಂಗಕ್ಕಾರ]
ಕ್ರಿಕೆಟ್ ಶಿಶು ಸ್ಕಾಟ್ಲೆಂಡ್ ವಿರುದ್ಧ ಟಾಸ್ ಗೆದ್ದ ಶ್ರೀಲಂಕಾ ನಾಯಕ ಏಂಜೆಲೋ ಮ್ಯಾಥ್ಯೂಸ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ವಿಶ್ವಕಪ್ ಎ ಗುಂಪಿನಿಂದ ಶ್ರೀಲಂಕಾ ಈಗಾಗಲೇ ಕ್ವಾರ್ಟರ್ ಫೈನಲ್ ಹಂತ ತಲುಪಿದೆ. ಸತತ ನಾಲ್ಕನೇ ಶತಕ ಸಿಡಿಸಿ ಕುಮಾರ್ ಸಂಗಕ್ಕಾರ ದಾಖಲೆ ಬರೆದರೆ, ದಿಲ್ಶನ್ ವೈಯಕ್ತಿಕ 22ನೇ ಶತಕ ಗಳಿಸಿ ಶ್ರೀಲಂಕಾಕ್ಕೆ ಉತ್ತಮ ಮೊತ್ತ ಕಲೆ ಹಾಕಿದರು.

ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಸಿಕ್ಕರೂ ಶ್ರೀಲಂಕಾ ಆರಂಭ ಉತ್ತಮವಾಗಿರಲಿಲ್ಲ. 21 ಎಸೆತ ಎದುರಿಸಿದ ಆರಂಭಿಕ ಆಟಗಾರ ತಿರಿಮನ್ನೆ 4 ರನ್ ಗಳಿಸಿ ಔಟ್ ಆದರು. ಆದರೆ, ಇನ್ನೊಂದು ತುದಿಯಲ್ಲಿ ತಿಲಕರತ್ನೆ ದಿಲ್ಶನ್ ಆಕರ್ಷಕ ಅರ್ಧಶತಕ ಸಿಡಿಸಿ ಇನ್ನಿಂಗ್ಸ್ ಕಟ್ಟಿದರು. ಸಂಗಕ್ಕಾರ ಜೊತೆಗೂಡಿ ಎರಡನೇ ವಿಕೆಟ್ ಗೆ 100 ರನ್ ಕಲೆ ಹಾಕಿದರು.
ಬಹುಶಃ ಕೊನೆ ವಿಶ್ವಕಪ್ ಆಡುತ್ತಿರುವ ಕುಮಾರ್ ಸಂಗಕ್ಕಾರ ದಾಖಲೆಯ ಹಿಂದೆ ಬಿದ್ದಿದ್ದು 2015ರಲ್ಲಿ ಸತತ ಮೂರು ಶತಕ ಸಿಡಿಸಿ ದಾಖಲೆ ಬರೆದಿದ್ದಾರೆ. 92 ಅರ್ಧಶತಕ ಬಾರಿಸಿರುವ ಸಂಗಕ್ಕಾರ ಇನ್ನೆರಡು ಅರ್ಧಶತಕ ಗಳಿಸಿದರೆ ಸಚಿನ್ ತೆಂಡೂಲ್ಕರ್ ದಾಖಲೆ ಸಮಗಟ್ಟಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications