For Quick Alerts
ALLOW NOTIFICATIONS  
For Daily Alerts
 

ಐತಿಹಾಸಿಕ ದಾಖಲೆ ಸೃಷ್ಟಿಸಿದ ಕುಮಾರ್ ಸಂಗಕ್ಕಾರ

By Mahesh

ಹೋಬರ್ಟ್, ಮಾ.11: ಶ್ರೀಲಂಕಾದ ಕ್ರಿಕೆಟ್ ದಿಗ್ಗಜ ಕುಮಾರ್ ಸಂಗಕ್ಕಾರ ಏಕದಿನ ಕ್ರಿಕೆಟ್ ನಲ್ಲಿ ಮತ್ತೊಮ್ಮೆ ದಾಖಲೆಯ ಪುಟ ಸೇರಿದ್ದಾರೆ. ಐಸಿಸಿ ವಿಶ್ವಕಪ್ 2015 ಟೂರ್ನಿಯ ಎ ಗುಂಪಿನಲ್ಲಿ ಸ್ಕಾಟ್ಲೆಂಡ್ ವಿರುದ್ಧ ಸಂಗಕ್ಕಾರ ಶತಕ ಸಿಡಿಸುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ. ವಿಶ್ವಕಪ್ ನಲ್ಲಿ ಸತತ ನಾಲ್ಕು ಶತಕ ಬಾರಿಸುವ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದಾರೆ.

ಸುಮಾರು 3,631 ಏಕದಿನ ಕ್ರಿಕೆಟ್ ಪಂದ್ಯಗಳಲ್ಲಿ ಯಾರೊಬ್ಬ ಬ್ಯಾಟ್ಸ್ ಮನ್ ಸಾಧಿಸದ ಗುರಿಯನ್ನು ಕುಮಾರ್ ಸಂಗಕ್ಕಾರ ಮುಟ್ಟಿದ್ದಾರೆ. ಬುಧವಾರ ಹೋಬರ್ಟ್ ನ ಓವಲ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಸತತ ನಾಲ್ಕು ಶತಕ ಸಿಡಿಸಿದ ಪ್ರಪ್ರಥಮ ಆಟಗಾರ ಎನಿಸಿಕೊಂಡರು. [ಶ್ರೀಲಂಕಾ vs ಸ್ಕಾಟ್ಲೆಂಡ್ ವಿರುದ್ಧದ ಪಂದ್ಯದ ವರದಿ]

World Cup: Kumar Sangakkara creates history with 4th successive century

ಸತತ ಮೂರು ಶತಕ ಸಿಡಿಸಿ ದಾಖಲೆ ನಿರ್ಮಿಸಿದ ಸಂಗಕ್ಕಾರ ಈ ಪಂದ್ಯದಲ್ಲಿ ಸ್ಕಾಟ್ಲೆಂಡ್ ವಿರುದ್ಧ 95 ಎಸೆತಗಳಲ್ಲಿ 124 ರನ್ (13x4, 4x6) ಬಾರಿಸಿದ್ದಾರೆ. ಇದಕ್ಕೂ ಮುನ್ನ ಸತತ ನಾಲ್ಕು ಶತಕ ಯಾವ ಬ್ಯಾಟ್ಸ್ ಮನ್ ಬಾರಿಸಿರಲಿಲ್ಲ.

ಆದರೆ, ಮೂರು ಶತಕಗಳು ರಾಸ್ ಟೇಲರ್ (ನ್ಯೂಜಿಲೆಂಡ್), ಕ್ವಿಂಟನ್ ಡಿ ಕಾಕ್ (ದಕ್ಷಿಣ ಆಫ್ರಿಕಾ), ಜಹೀರ್ ಅಬ್ಬಾಸ್ (ಪಾಕಿಸ್ತಾನ), ಹರ್ಷಲ್ ಗಿಬ್ಸ್ (ದಕ್ಷಿಣ ಆಫ್ರಿಕಾ), ಸಯೀದ್ ಅನ್ವರ್ (ಪಾಕಿಸ್ತಾನ) ಹಾಗೂ ಎಬಿ ಡಿ ವಿಲಿಯರ್ಸ್ (ದಕ್ಷಿಣ ಆಫ್ರಿಕಾ) ಹಾಗೂ ಸಂಗಕ್ಕಾರ (ಶ್ರೀಲಂಕಾ).

37 ವರ್ಷ ವಯಸ್ಸಿನ ಸಂಗಕ್ಕಾರ ತಮ್ಮ ಕೊನೆಯೆ ವಿಶ್ವಕಪ್ ಟೂರ್ನಿಯಲ್ಲಿ ಆಡುತ್ತಿದ್ದು, 2015ರ ಟೂರ್ನಿಯಲ್ಲಿ ವೈಯಕ್ತಿಕ ಹೆಚ್ಚು ಸ್ಕೋರ್ ಗಳಿಸಿರುವ ಆಟಗಾರ ಎನಿಸಿಕೊಂಡಿದ್ದಾರೆ.

ಒನ್ ಇಂಡಿಯಾ ಸುದ್ದಿ

Story first published: Wednesday, January 3, 2018, 10:02 [IST]
Other articles published on Jan 3, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+