ಸಿಡಿದ ಸುರೇಶ್ ರೈನಾ, ಭಾರತಕ್ಕೆ ಭರ್ಜರಿ ಜಯ
ಆಕ್ಲೆಂಡ್, ಮಾ.14: ಈಡೆನ್ ಪಾರ್ಕ್ ಮೈದಾನದಲ್ಲಿ ಟೀಂ ಇಂಡಿಯಾ ವಿರುದ್ಧ ಜಿಂಬಾಬ್ವೆ ಉತ್ತಮ ಮೊತ್ತ ಕಲೆ ಹಾಕಿ ರೋಚಕ ಸೆಣಸಾಟ ನಡೆಸಿದರೂ ರನ್ ಚೇಸಿಂಗ್ ನಲ್ಲಿ ಭಾರತ ಮೊದಲ ಬಾರಿಗೆ ಭರ್ಜರಿ ಗೆಲುವು ಸಾಧಿಸಿದೆ. 288ರನ್ ಗುರಿ ಬೆನ್ನು ಹತ್ತಿದ್ದ ಟೀಂ ಇಂಡಿಯಾ ಆರಂಭಿಕ ಆಘಾತ ಅನುಭವಿಸಿದರೂ ಸುರೇಶ್ ರೈನಾ ಶತಕ ಹಾಗೂ ಧೋನಿ ಅರ್ಧಶತಕ ನೆರವಿನಿಂದ 48.4ಓವರ್ಸ್ ನಲ್ಲಿ ಗುರಿ ಮುಟ್ಟಿ ವಿಜಯೋತ್ಸವ ಆಚರಿಸಿದೆ.
ಇಂಡಿಯಾ ಚೇಸಿಂಗ್: ಅಮೋಘ ಶತಕ ಸಿಡಿಸಿದ ಸುರೇಶ್ ರೈನಾ (ವೈಯಕ್ತಿಕ 5ನೇ ಶತಕ) ಹಾಗೂ ಎಂಎಸ್ ಧೋನಿ 57ನೇ ಏಕದಿನ ಅರ್ಧಶತಕದ ಮೂಲಕ ಜಿಂಬಾಬ್ವೆ ವಿರುದ್ಧ ಟೀಂ ಇಂಡಿಯಾ 6 ವಿಕೆಟ್ ಗಳ ರೋಚಕ ಜಯ ಸಾಧಿಸಿದೆ.
ವಿಶ್ವಕಪ್ ಲೀಗ್ ಹಂತದಲ್ಲಿ ಅಜೇಯವಾಗಿ ಉಳಿದಿರುವ ಭಾರತ ಸತತ 6 ಪಂದ್ಯಗಳನ್ನು ಜಯಸಿದ ದಾಖಲೆಯೊಂದಿಗೆ ಮಾ.19ರಂದು ಕ್ವಾರ್ಟರ್ ಫೈನಲ್ ನಲ್ಲಿ ಬಾಂಗ್ಲಾದೇಶ ತಂಡವನ್ನು ಎದುರಿಸಲಿದೆ.

120 ಎಸೆತಗಳಲ್ಲಿ 161 ರನ್ ಗುರಿ ಪಡೆದ ಟೀಂ ಇಂಡಿಯಾ ಈಗ ಟ್ವೆಂಟಿ 20 ಪಂದ್ಯದ ಮೂಡ್ ಜಾರಿತು. ನಾಯಕ ಧೋನಿ ಮತ್ತೊಮ್ಮೆ ರನ್ ಚೇಸಿಂಗ್ ನಲ್ಲಿ ನಾನೇ ಉತ್ತಮ ಬ್ಯಾಟ್ಸ್ ಮನ್ ಎಂಬುದನ್ನು ನಿರೂಪಿಸಿದರು.
ಧೋನಿ ಜೊತೆಗೆ ಸುರೇಶ್ ರೈನಾ ಭರ್ಜರಿ ಆಟ ಪ್ರದರ್ಶಿಸಿ ಜಿಂಬಾಬ್ವೆ ತಂಡದ ಕನಸಿಗೆ ಬೆಂಕಿ ಹಚ್ಚಿದರು. 31 ಓವರ್ ಗಳಲ್ಲಿ 131/4 ಗಳಿಸಿರುವ ಭಾರತಕ್ಕೆ 7 ಪ್ಲಸ್ ರನ್ ಸರಾಸರಿಯಂತೆ ರನ್ ಚೇಸ್ ಮಾಡುವ ಗುರಿ ಪಡೆಯಿತು. ಇಲ್ಲಿಂದ ಮುಂದೆ ಪಂದ್ಯ ರೋಚಕವಾಯಿತು.
ನಾಯಕ ಬ್ರೆಂಡನ್ ಟೇಲರ್ ಅವರ ಅಮೋಘ ಶತಕ 138(110ಎ, 15X4, 5X6) ನೆರವಿನಿಂದ ಜಿಂಬಾಬ್ವೆ ತನ್ನ ಕೊನೆ ಲೀಗ್ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದೆ. ಟೇಲರ್ ಗೆ ಸೀನ್ ವಿಲಿಯಮ್ಸ್ 50 ರನ್ ಗಳಿಸಿ ಉತ್ತಮ ನೆರವು ನೀಡಿದರು. ಕೊನೆ ಹಂತದಲ್ಲಿ ಸಿಕಂದರ್ ರಾಜ 15 ಎಸೆತಗಳಲ್ಲಿ 28ರನ್(1X4, 3x6) ಗಳಿಸಿ ತಂಡದ ಮೊತ್ತ ಹೆಚ್ಚಿಸಿದರು. [ಹೊಸ ದಾಖಲೆ ಬರೆದ ಇಂಡಿಯನ್ ಬೌಲರ್ಸ್]

ಭಾರತದ ಪರ ಶಮಿ 9-2-49-3 ಯಶಸ್ವಿ ಬೌಲರ್ ಎನಿಸಿದರು. ಮೋಹಿತ್ ಶರ್ಮ48ಕ್ಕೆ3 ಗಳಿಸಿದರು.ಆರಂಭದಲ್ಲಿ ಉತ್ತಮ ಬೌಲಿಂಗ್ ಮಾಡಿದ ಆರ್ ಅಶ್ವಿನ್ ಹಾಗೂ ರವೀಂದ್ರ ಜಡೇಜ ಸ್ಲಾಗ್ ಓವರ್ಸ್ ನಲ್ಲಿ ಸಿಕ್ಕಾಪಟ್ಟೆ ರನ್ ಹೊಡೆಸಿಕೊಂಡರು.
ಆದರೆ, ವಿಶ್ವಕಪ್ ಟೂರ್ನಿಯಲ್ಲಿ ಸತತ 6ನೇ ಬಾರಿಗೆ ಎದುರಾಳಿ ತಂಡವನ್ನು ಆಲೌಟ್ ಮಾಡುವ ಮೂಲಕ ಟೀಂ ಇಂಡಿಯಾ ಬೌಲರ್ ಗಳು ಹೊಸ ಸಾಧನೆ ಮಾಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications
