ವಿಶ್ವಕಪ್ ನಲ್ಲಿ ಹೊಸ ದಾಖಲೆ ಬರೆದ ಇಂಡಿಯನ್ ಬೌಲರ್ಸ್
ಆಕ್ಲೆಂಡ್, ಮಾ.14: ಬ್ಯಾಟ್ಸ್ ಮನ್ ಗಳ ಸ್ವರ್ಗ ಎನಿಸಿರುವ ವಿಶ್ವಕಪ್ 2015 ಟೂರ್ನಿಯಲ್ಲಿ ಟೀಂ ಇಂಡಿಯಾ ಬೌಲರ್ಸ್ ಅಮೋಘ ಪ್ರದರ್ಶನದಲ್ಲಿ ವಿಶಿಷ್ಟ ದಾಖಲೆ ಬರೆದಿದ್ದಾರೆ. ವಿಶ್ವಕಪ್ ಟೂರ್ನಿಯಲ್ಲಿ ಸತತ ಆರನೇ ಬಾರಿ ಎದುರಾಳಿ ತಂಡವನ್ನು ಆಲೌಟ್ ಮಾಡುವ ಮೂಲಕ ಟೀಂ ಬೌಲರ್ ಗಳು ಹೊಸ ಇತಿಹಾಸ ನಿರ್ಮಿಸಿದ್ದಾರೆ.
ಟೀಂ ಇಂಡಿಯಾ ಬೌಲರ್ ಗಳು ಆಕ್ಲೆಂಡ್ ನ ಈಡೆನ್ ಪಾರ್ಕಿನ ಪಂದ್ಯದಲ್ಲೂ ಜಿಂಬಾಬ್ವೆ ತಂಡವನ್ನು ಆಲೌಟ್ ಮಾಡಿದ್ದಾರೆ. ಈ ಮುಂಚೆ ಇದೇ ದಾಖಲೆಯನ್ನು ವಿಶ್ವಕಪ್ 2011 ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ಬೌಲರ್ ಗಳು ಸಾಧಿಸಿದ್ದರು. ಭಾರತ ತನ್ನ ಲೀಗ್ ಪಂದ್ಯದಲ್ಲೇ ಈ ದಾಖಲೆಯನ್ನು ಸಮಗಟ್ಟಿದೆ. [ದಿಗ್ಗಜರ ಕ್ಲಬ್ ಸೇರಿದ ಎಂಎಸ್ ಧೋನಿ]
ಫೆ.15ರಂದು ಅಡಿಲೇಡ್ ನಲ್ಲಿ ಬದ್ಧವೈರಿ ಪಾಕಿಸ್ತಾನ ವಿರುದ್ಧ ಆಡುವ ಮೂಲಕ ವಿಶ್ವಕಪ್ ಅಭಿಯಾನ ಆರಂಭಿಸಿದ ಧೋನಿ ತಂಡದ ಬೌಲರ್ ಗಳು ವಿಶ್ವಕಪ್ ನಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿ ಎಲ್ಲರ ಹುಬ್ಬೇರಿಸಿದ್ದಾರೆ. ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ ಅವರು ಭಾರತೀಯ ಬೌಲರ್ ಗಳನ್ನು ಹಾಡಿ ಹೊಗಳಿದ್ದಾರೆ.

ಟೀಂ ಇಂಡಿಯಾ ಬೌಲರ್ ಪಡೆ ನೇತೃತ್ವವನ್ನು ಯುವ ವೇಗಿ ಮಹಮ್ಮದ್ ಶಮಿ(15 ವಿಕೆಟ್) ವಹಿಸಿಕೊಂಡಿದ್ದಾರೆ. ವಿಶ್ವಕಪ್ ಟೂರ್ನಿಯಲ್ಲಿ ಅತ್ಯಧಿಕ ವಿಕೆಟ್ ಕಿತ್ತ ಬೌಲರ್ ಗಳ ಪಟ್ಟಿಯಲ್ಲಿ ನ್ಯೂಜಿಲೆಂಡ್ ನ ಟ್ರೆಂಟ್ ಬೌಲ್ಟ್ ಅವರ ಜೊತೆಗೆ ಪೈಪೋಟಿ ನಡೆಸಿರುವ ಶಮಿ ಅವರ ಹಿಂದೆ 12 ವಿಕೆಟ್ ಪಡೆದಿರುವ ಆರ್ ಅಶ್ವಿನ್ ಹಾಗೂ ತಲಾ 10 ವಿಕೆಟ್ ಪಡೆದಿರುವ ಉಮೇಶ್ ಯಾದವ್ ಹಾಗೂ ಮೋಹಿತ್ ಶರ್ಮ ಇದ್ದಾರೆ. ರವೀಂದ್ರ ಜಡೇಜ ಕೂಡಾ 7 ವಿಕೆಟ್ ಕಿತ್ತಿದ್ದಾರೆ.
ಜಿಂಬಾಬ್ವೆ ತಂಡವನ್ನು 48.5 ಓವರ್ ಗಳಲ್ಲಿ 287 ಸ್ಕೋರಿಗೆ ಆಲೌಟ್ ಮಾಡಿರುವ ಟೀಂ ಇಂಡಿಯಾ ಮಾ.19ರಂದು ಕ್ವಾರ್ಟರ್ ಫೈನಲ್ ನಲ್ಲಿ ಬಾಂಗ್ಲಾದೇಶ ತಂಡವನ್ನು ಎದುರಿಸಲಿದೆ. ಅದರೆ, ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಇಲ್ಲಿ ತನಕದ ಅತಿ ಹೆಚ್ಚು ರನ್ (287) ನೀಡಿದ್ದು ಗಮನಿಸಬೇಕಿದೆ.
ಫೆಬ್ರವರಿ 15ರಿಂದ ಮಾ.14ರ ತನಕ 6 ಪಂದ್ಯಗಳಲ್ಲಿ 60 ವಿಕೆಟ್ ಉರುಳಿಸಲಾಗಿದೆ
1. ಪಾಕಿಸ್ತಾನ 224 ಸ್ಕೋರಿಗೆ ಆಲೌಟ್, 47 ಓವರ್ಸ್ ()
2. ದಕ್ಷಿಣ ಆಫ್ರಿಕಾ 177 ಸ್ಕೋರಿಗೆ ಅಲೌಟ್, 40.2 ಓವರ್ಸ್()
3. ಯುಎಇ 102 ಸ್ಕೋರಿಗೆ ಆಲೌಟ್ 31.3 ಓವರ್ಸ್ ()
4. ವೆಸ್ಟ್ ಇಂಡೀಸ್ 182 ಸ್ಕೋರಿಗೆ ಆಲೌಟ್, 44.2ಓವರ್ಸ್ ()
5. ಐರ್ಲೆಂಡ್ 259 ಆಲೌಟ್, 49ಓವರ್ಸ್ ()
6. ಜಿಂಬಾಬ್ವೆ 287 ಆಲೌಟ್ 48.5 ಓವರ್ಸ್ ()
ಒನ್ ಇಂಡಿಯಾ ಸುದ್ದಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications