ಹರಿಣಗಳ ಮೇಲೆ ಕಿವೀಸ್ ರೋಚಕ ಜಯ, ಫೈನಲಿಗೆ ಲಗ್ಗೆ
ಆಕ್ಲೆಂಡ್, ಮಾ.24: ಅತಿಥೇಯ ನ್ಯೂಜಿಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ನಡುವೆ ಮಂಗಳವಾರ ನಡೆದ ಉಪಾಂತ್ಯ ಪಂದ್ಯ ರೋಚಕ ಅಂತ್ಯ ಕಂಡಿದೆ.
ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ತಂಡದ ನಾಯಕ ಎಬಿ ಡಿ ವಿಲೆಯರ್ಸ್ ಅವರು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ಭರ್ಜರಿ ಮೊತ್ತ ಕಲೆ ಹಾಕಿದರೂ ಕಿವೀಸ್ ಬ್ಯಾಟ್ಸ್ ಮನ್ ಗಳನ್ನು ನಿಯಂತ್ರಿಸಲಾರದೆ ಸೋತು ಸುಣ್ಣವಾದರು. ದಕ್ಷಿಣ ಆಫ್ರಿಕಾ ಒಡ್ಡಿದ್ದ 43 ಓವರ್ ಗಳಲ್ಲಿ 298 ರನ್ ಟಾರ್ಗೆಟ್ ಅನ್ನು ನ್ಯೂಜಿಲೆಂಡ್ ಬ್ಯಾಟ್ಸ್ ಮನ್ ಗಳು 1 ಎಸೆತ ಬಾಕಿ ಇರುವಂತೆ ಚೇಸ್ ಮಾಡಿ ಮೊಟ್ಟ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದ್ದಾರೆ.

ದಕ್ಷಿಣ ಆಫ್ರಿಕಾ ಇನ್ನಿಂಗ್ಸ್ ಅಪ್ಡೇಟ್ಸ್: ಗ್ಯಾಲರಿ: ಆಕ್ಲೆಂಡ್ ನಿಂದ ಕ್ರಿಕೆಟ್ ಚಿತ್ರಗಳು
ಕಿವೀಸ್ ರನ್ ಚೇಸ್:
* ಗ್ರ್ಯಾಂಟ್ ಎಲಿಯಟ್ ಕಿವೀಸ್ ಪಾಲಿನ ಹೀರೋ 84 ರನ್ ಅಜೇಯ (73 ಎ, 7x4, 3x6)
* ಕೊನೆ ಓವರ್ : ಸ್ಟೇನ್ ಮೊದಲ ಎಸೆತ ವೆಟ್ಟೋರಿ 1
* ಎರಡನೇ ಎಸೆತ ಎಲಿಯಟ್ 1 (10 ರನ್ 4 ಎಸೆತ)
* ಮೂರನೇ ಎಸೆತ ವೆಟ್ಟೋರಿ ಬೌಂಡರಿ.
* (5 ರನ್ 2 ಎಸೆತ) ಎಲಿಯಟ್ ಸಿಕ್ಸರ್
* ನ್ಯೂಜಿಲೆಂಡ್ ಗೆ ಅಮೋಘ ಜಯ. ದಕ್ಷಿಣ ಆಫ್ರಿಕಾ ವಿರುದ್ಧ 4 ವಿಕೆಟ್ ಗಳ ಜಯ ದಾಖಲೆ.
* ಕಿವೀಸ್ ಗೆಲ್ಲಲು 6 ಎಸೆತಗಳಲ್ಲಿ 12ರನ್ ಬೇಕು.
* ಕಿವೀಸ್ ಗೆಲ್ಲಲು 30 ಎಸೆತಗಳಲ್ಲಿ 46ರನ್ ಬೇಕು.
* 38 ಓವರ್ಸ್ ನಲ್ಲಿ 252/4. ಕೋರಿ ಆಂಡರ್ಸನ್ ಔಟ್.
* ಗ್ರಾಂಟ್ ಇಲಿಯಟ್ ಅರ್ಧಶತಕ, ಕೋರೆ ಆಂಡರ್ಸನ್ 58 (57ಎ,6x4,2x6)
* 32 ಓವರ್ಸ್ ನಂತರ ಕಿವೀಸ್ ಸ್ಕೋರ್ 209/4.
* 30.2 ಓವರ್ ಗಳಲ್ಲಿ 200/4. ಕಿವೀಸ್ ಗೆ ಗೆಲ್ಲಲು 76 ಎಸೆತಗಳಲ್ಲಿ 98 ರನ್ ಬೇಕು.
* ದ್ವಿಶತಕ ವೀರ ಗುಪ್ಟಿಲ್ ನಿಧಾನಗತಿ ಆಟ. 10 ಓವರ್ ಗಳಲ್ಲಿ ಕಿವೀಸ್ 89/2.
* ಕೇನ್ ವಿಲಿಯಂಸನ್ ಕೂಡಾ ಮಾರ್ಕೆಲ್ ಎಸೆತಕ್ಕೆ ಬೋಲ್ಡ್ 6 ರನ್ ಗಳಿಸಿ ಪೆವಿಲಿಯನ್ ಗೆ
* ಮೆಕಲಮ್ ಔಟ್ 59 ರನ್ (26 ಎಸೆತ, 8x4, 4x6)
* 298 ರನ್ ಟಾರ್ಗೆಟ್ ಪಡೆದ ಕಿವೀಸ್ ತಂಡಕ್ಕೆ ಮತ್ತೊಮ್ಮೆ ಉತ್ತಮ ಆರಂಭ ಒದಗಿಸಿದ ನಾಯಕ ಬ್ರೆಂಡನ್ ಮೆಕಲಮ್.

* ಡಕ್ ವರ್ತ್ ಲೂಯಿಸ್ ನಿಯಮದ ಪ್ರಕಾರ ನ್ಯೂಜಿಲೆಂಡ್ ತಂಡಕ್ಕೆ ಪರಿಷ್ಕೃತ ಟಾರ್ಗೆಟ್ 298, 43 ಓವರ್ಸ್.
* ಫೈನಲ್ ತಲುಪಲು ಕಿವೀಸ್ ತಂಡಕ್ಕೆ 43 ಓವರ್ ಗಳಲ್ಲಿ 298 ರನ್ ಟಾರ್ಗೆಟ್.
* 43 ಓವರ್ ಗಳ ನಂತರ ದಕ್ಷಿಣ ಆಫ್ರಿಕಾದ ಮೊತ್ತ 281/5.
* 18 ಎಸೆತಗಳಲ್ಲಿ 47ರನ್ ಗಳಿಸಿ ಡೇವಿಡ್ ಮಿಲ್ಲರ್ ಔಟ್. 6 ಬೌಂಡರಿ, 3 ಸಿಕ್ಸರ್ ಸಿಡಿಸಿದ ಮಿಲ್ಲರ್.
* 41 ಓವರ್ ಗಳ ನಂತರ ಸ್ಕೋರ್ 259/4
* 40 ಓವರ್ ಗಳಲ್ಲಿ 243/4 ಸ್ಕೋರ್. ಡಿವಿಲೆಯರ್ಸ್ 63 (41), ಮಿಲ್ಲರ್ 24(9 ಎಸೆತ)
* ಮಳೆ ನಂತರ ಆಟ ಶುರು. ಎರಡನೇ ಎಸೆತಕ್ಕೆ ವಿಕೆಟ್ ಪತನ. ಡು ಫ್ಲೆಸಿಸ್ ಔಟ್.
* ಡಕ್ ವರ್ತ್ ಲೂಯಿಸ್ ನಿಯಮದ ಪ್ರಕಾರ 43 ಓವರ್ ಗಳ ಪಂದ್ಯ ನಿಗದಿ.
* ಮಳೆ ಬಂದ ಕಾರಣ ಪಂದ್ಯ ತಾತ್ಕಾಲಿಕ ಸ್ಥಗಿತ. ಕಾಫಿ ಕುಡಿಯಲು ಆಕ್ಲೆಂಡಿನ ಈಡನ್ ಪಾರ್ಕ್ ನಲ್ಲಿ ಕ್ಯೂ.
* 38 ಓವರ್ಸ್ ನಲ್ಲಿ ತಂಡದ ಮೊತ್ತ 216/3 ಆಗಿದ್ದಾಗ ಮಳೆ ಅಡ್ಡಿ ಪಡಿಸಿದೆ. ಡುಫ್ಲೆಸಿಸ್ 82ರನ್ ಹಾಗೂ ಎಬಿ ಡಿ ವಿಲೆಯರ್ಸ್ 60ರನ್ ಗಳಿಸಿ ಆಡುತ್ತಿದ್ದಾರೆ.
* ತಂಡಕ್ಕೆ ಆಸರೆಯಾದ ಫ್ಲಾಪ್ ಡು ಫ್ಲೆಸಿಸ್ ನಿಧಾನಗತಿಯಲ್ಲಿ ಆಡಿದರೂ ವಿಕೆಟ್ ಕಾಯ್ದುಕೊಂಡು ಮೊತ್ತ ಹೆಚ್ಚಿಸಿದ್ದಾರೆ.

* ಡು ಫ್ಲೆಸಿಸ್ ಗೆ ಸಾಥ್ ನೀಡಿದ ರಿಲೇ ರೋಸೋ 53 ಎಸೆತಗಳಲ್ಲಿ 39ರನ್(2x4, 1x6) ಗಳಿಸಿ ಕೋರೆ ಆಂಡರ್ಸನ್ ಗೆ ವಿಕೆಟ್ ಒಪ್ಪಿಸಿದರು.
* ನಾಯಕ ಎಬಿ ಡಿ ವಿಲೆಯರ್ಸ್ ರನೌಟ್, ಕ್ಯಾಚ್ ಮಿಸ್ ಹೀಗೆ ಜೀವದಾನಗಳ ನಡುವೆ 35 ಎಸೆತಗಳಲ್ಲಿ 54 (7x4, 1x6) ಗಳಿಸಿದ್ದಾರೆ. 37 ಓವರ್ಸ್ 204/3.

* ಟ್ರೆಂಟ್ ಬೌಲ್ಟ್ 2 ವಿಕೆಟ್ ಕೀಳುವ ಮೂಲಕ ಟೂರ್ನಿಯ ಶ್ರೇಷ್ಠ ಬೌಲರ್ ಆಗಿದ್ದಾರೆ.
* ಆರಂಭಿಕ ಆಘಾತ ನೀಡಿದ ಕಿವೀಸ್, ಅಮ್ಲಾ (10 ), ಡಿ ಕಾಕ್ (14 ) ಪೆವಿಲಿಯನ್ ಗೆ ಕಳಿಸಿದೆ. 10 ಓವರ್ ಗಳಲ್ಲಿ 39/2 ಸ್ಕೋರ್ ಮಾಡಿರುವ ದಕ್ಷಿಣ ಆಫ್ರಿಕಾಕ್ಕೆ ಟ್ರೆಂಟ್ ಬೌಲ್ಟ್ ಮಾರಕವಾಗಿ ಪರಿಣಮಿಸಿದ್ದಾರೆ.
ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಏಳು ಪಂದ್ಯ ಗೆದ್ದು ಅಜೇಯವಾಗಿ ನ್ಯೂಜಿಲೆಂಡ್ ತಂಡ ನಾಲ್ಕರ ಘಟ್ಟ ತಲುಪಿದ್ದರೆ, ದಕ್ಷಿಣ ಆಫ್ರಿಕಾ ಎರಡು ಬಾರಿ ಸೋಲು ಕಂಡಿತ್ತು. ನ್ಯೂಜಿಲೆಂಡ್ ತಂಡದಲ್ಲಿ ಮ್ಯಾಟ್ ಹೆನ್ರಿ ಮೊದಲ ಪಂದ್ಯವಾಡುತ್ತಿದ್ದು ಗಾಯಗೊಂಡಿರುವ ಆಡಂ ಮಿಲ್ನ್ ಬದಲಿಗೆ ತಂಡ ಸೇರಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ ಅಬಾಟ್ ಬದಲಿಗೆ ಫಿಲ್ಯಾಂಡರ್ ತಂಡದಲ್ಲಿದ್ದಾರೆ.
ವಿಶ್ವಕಪ್ ಕ್ರಿಕೆಟ್ ವಿಶೇಷ ಪುಟ | 2015: ಟಾಪ್ 10 ಬದಲಾವಣೆ

ವಿಶ್ವಕಪ್‌ನ ಕ್ರಿಕೆಟ್ ಇತಿಹಾಸದಲ್ಲಿ 6 ಬಾರಿ (1975, 1979,1992,1999, 2007,2011) ಸೆಮಿಫೈನಲ್ ಹಂತ ಮುಟ್ಟಿರುವ ನ್ಯೂಜಿಲ್ಯಾಂಡ್ ಹಾಗೂ 3 ಬಾರಿ (1992, 1999,2007) ಉಪಾಂತ್ಯ ದಾಟಿರುವ ದಕ್ಷಿಣ ಆಫ್ರಿಕಾ ತಂಡಗಳಲ್ಲಿ ಯಾವ ತಂಡ ಫೈನಲ್ ತಲುಪಿದರೂ ಹೊಸ ಇತಿಹಾಸ ನಿರ್ಮಾಣವಾಗಲಿದೆ. ಮೊದಲ ಬಾರಿಗೆ ಫೈನಲ್ ತಲುಪಿದ ಸಾಧನೆ ಕಾಣಬಹುದು.
ದಕ್ಷಿಣ ಆಫ್ರಿಕಾ : ಎಬಿ ಡಿವಿಲೆಯರ್ಸ್ (ನಾಯಕ), ಹಶೀಂ ಆಮ್ಲಾ, ಕ್ವಿಂಟಾನ್ ಡಿ ಕಾಕ್(ವಿಕೆಟ್ ಕೀಪರ್), ಫಾಫ್ ಡು ಫ್ಲೆಸಿಸ್, ರಿಲೆ ರೋಸೋ, ಜೆಪಿ ಡುಮಿನಿ, ಡೇವಿಡ್ ಮಿಲ್ಲರ್, ವೆರಾನ್ ಫಿಲ್ಯಾಂಡರ್, ಮಾರ್ನೆ ಮಾರ್ಕೆಲ್, ಡೇಲ್ ಸ್ಟೇನ್, ಇಮ್ರಾನ್ ತಾಹೀರ್.
ನ್ಯೂಜಿಲೆಂಡ್: ಬ್ರೆಂಡನ್ ಮೆಕಲಮ್ (ನಾಯಕ, ವಿಕೆಟ್ ಕೀಪರ್), ಕೋರೆ ಆಂಡರ್ಸನ್, ಟ್ರೆಂಟ್ ಬೌಲ್ಟ್, ಗ್ರಾಂಟ್ ಇಲಿಯಟ್, ಮಾರ್ಟಿನ್ ಗಪ್ಟಿಲ್, ಮ್ಯಾಟ್ ಹೆನ್ರಿ, ಲೂಕ್ ರಾಂಚಿ (ವಿಕೆಟ್ ಕೀಪರ್), ಟಿಮ್ ಸೌಥಿ, ರಾಸ್ ಟೇಲರ್, ಡೇನಿಯಲ್ ವೆಟ್ಟೋರಿ, ಕೇನ್ ವಿಲಿಯಂಸನ್.
ಒನ್ ಇಂಡಿಯಾ ಸುದ್ದಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications