ವಿಶ್ವಕಪ್ 2015: ಕ್ವಾರ್ಟರ್ ಫೈನಲ್ ಯಾವ ಯಾವ ತಂಡ?
ಸಿಡ್ನಿ, ಮಾ.10 : ವಿಶ್ವಕಪ್ 2015 ಟೂರ್ನಿ ಲೀಗ್ ಹಂತ ತಲುಪಿದ್ದು, ಕ್ವಾರ್ಟರ್ ಫೈನಲ್ ಗೆ ಯಾವ ತಂಡ ಅರ್ಹತೆ ಪಡೆಯಲಿದೆ ಎಂಬ ಕುತೂಹಲಕ್ಕೆ ಸದ್ಯದಲ್ಲೇ ತೆರೆ ಬೀಳಲಿದೆ. ಮಂಗಳವಾರ ಈ ಸಮಯಕ್ಕೆ ನಾಲ್ಕು ತಂಡಗಳು ಅರ್ಹತೆ ಪಡೆದಿವೆ.
ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಎಂಟರ ಘಟ್ಟ (ನಾಕೌಟ್ ಹಂತ) ವೇಳಾಪಟ್ಟಿ ಪ್ರಕಟವಾಗಿದ್ದು, ಎ ಗುಂಪಿನಿಂದ ಕ್ವಾರ್ಟರ್ ಫೈನಲ್ ತಲುಪುವ ನಾಲ್ಕು ತಂಡಗಳು ಪಕ್ಕಾ ಆಗಿದೆ. ಬಿ ಗುಂಪಿನಲ್ಲಿ ಮೂರು ಹಾಗೂ ನಾಲ್ಕನೇ ಸ್ಥಾನಕ್ಕೆ ಪೈಪೋಟಿ ಇನ್ನೂ ಮುಂದುವರೆದಿದೆ.
'ಬಿ' ಗುಂಪಿನಲ್ಲಿ ಅಜೇಯವಾಗಿ ಉಳಿದಿರುವ ಟೀಂ ಇಂಡಿಯಾ ಕ್ವಾರ್ಟರ್ ಫೈನಲಿಗೆ ಅರ್ಹತೆ ಪಡೆದ ಮೊದಲ ತಂಡವಾಗಿದೆ. ಉಳಿದಂತೆ ದಕ್ಷಿಣ ಆಫ್ರಿಕಾ, ಪಾಕಿಸ್ತಾನ, ಐರ್ಲೆಂಡ್ ಹಾಗೂ ವೆಸ್ಟ್ ಇಂಡೀಸ್ ಸ್ಪರ್ಧೆಯಲ್ಲಿವೆ.

ಜಿಂಬಾಬ್ವೆ ಹಾಗೂ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ತಂಡಗಳು ಟೂರ್ನಿಯಿಂದ ಔಟ್ ಆಗಿವೆ. ಕ್ವಾರ್ಟರ್ ಫೈನಲಿಗೂ ಮುಂಚಿತವಾಗಿ ಇಂಗ್ಲೆಂಡ್, ಸ್ಕಾಟ್ಲೆಂಡ್ ಹಾಗೂ ಅಫ್ಘಾನಿಸ್ತಾನ ತಂಡಗಳು ಕೂಡಾ ಪ್ಯಾಕ್ ಅಪ್ ಮಾಡಿವೆ. ಮಾ.10 ರಂತೆ ಬಿ ಗುಂಪಿನ ಪಟ್ಟಿ
ಕ್ವಾರ್ಟರ್ ಫೈನಲ್ ವೇಳಾಪಟ್ಟಿ ಹೀಗಿದೆ:
| ಕ್ವಾರ್ಟರ್ ಫೈನಲ್ | ದಿನಾಂಕ/ದಿನ | ತಂಡಗಳು | ಕ್ರೀಡಾಂಗಣ | ಸಮಯ |
| 1 | ಮಾ.18, ಬುಧವಾರ | ಶ್ರೀಲಂಕಾ vs ಇನ್ನೂ ನಿರ್ಧಾರವಾಗಿಲ್ಲ | ಸಿಡ್ನಿ | 9AM IST |
| 2 | ಮಾ.19 ಗುರುವಾರ | ಬಾಂಗ್ಲಾದೇಶ vs ಇನ್ನೂ ನಿರ್ಧಾರವಾಗಿಲ್ಲ | ಮೆಲ್ಬೋರ್ನ್ | 9AM IST |
| 3 | ಮಾ.20 ಶುಕ್ರವಾರ | ಆಸ್ಟ್ರೇಲಿಯಾ vs ಇನ್ನೂ ನಿರ್ಧಾರವಾಗಿಲ್ಲ | ಅಡಿಲೇಡ್ | 9AM IST |
| 4 | ಮಾ.21 ಶನಿವಾರ | ನ್ಯೂಜಿಲೆಂಡ್ vs ಇನ್ನೂ ನಿರ್ಧಾರವಾಗಿಲ್ಲ | ವೆಲ್ಲಿಂಗ್ಟನ್ | 6.30 AM IST |
| ಸೆಮಿಫೈನಲ್ | ಮಾ.24 (ಆಕ್ಲೆಂಡ್) ಹಾಗೂ ಮಾ.26(ಸಿಡ್ನಿ) | |||
| ಫೈನಲ್ | ಮಾ.29 (ಮೆಲ್ಬೋರ್ನ್) | |||
Story first published: Wednesday, January 3, 2018, 10:02 [IST]
Other articles published on Jan 3, 2018
Read in English: WC 2015: Who plays where in quarters?
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications