ವಿಶ್ವಕಪ್ ಅಂತಿಮ ತಂಡ ಪ್ರಕಟಿಸಿದ ವೆಸ್ಟ್ ಇಂಡೀಸ್, ಆ್ಯಂಡ್ರೆ ರಸೆಲ್‌ಗೆ ಸ್ಥಾನ

ಕಿಂಗ್ಸ್‌ಟೌನ್, ಏಪ್ರಿಲ್ 25: ಐಸಿಸಿ ವಿಶ್ವಕಪ್ 2019ಕ್ಕೆ ವೆಸ್ಟ್ ಇಂಡೀಸ್ ಅಂತಿಮ 15 ಜನರ ತಂಡವನ್ನು ಪ್ರಕಟಿಸಿದೆ. ಯೂನಿವರ್ಸ್ ಬಾಸ್ ಖ್ಯಾತಿಯ ಕ್ರಿಸ್‌ಗೇಲ್ ಮತ್ತು ಸದ್ಯ ನಡೆಯುತ್ತಿರುವ ಐಪಿಎಲ್‌ನಲ್ಲಿ ಸ್ಫೋಟಕ ಬ್ಯಾಟಿಂಗ್‌ಗಾಗಿ ಗಮನ ಸೆಳೆದಿದ್ದ ಆ್ಯಂಡ್ರೆ ರಸೆಲ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಬುಧವಾರ (ಏಪ್ರಿಲ್ 24) ರಾತ್ರಿ ಪ್ರಕಟಿಸಲಾಗಿರುವ ವೆಸ್ಟ್ ಇಂಡೀಸ್ ವಿಶ್ವಕಪ್ ತಂಡದಲ್ಲಿ ಆಲ್ ರೌಂಡರ್ ಸುನಿಲ್ ನರೇನ್ ಮತ್ತು ಬೀಸುಗೈ ದಾಂಡಿಗ ಕೀರನ್ ಪೊಲಾರ್ಡ್‌ಗೆ ಸ್ಥಾನ ನೀಡಲಾಗಿಲ್ಲ. ಡ್ಯಾರೆನ್ ಬ್ರಾವೋ, ಫ್ಯಾಬಿಯನ್ ಅಲೆನ್, ನಿಕೋಲಸ್ ಪೂರನ್ ಸೇರಿದಂತೆ ಇನ್ನಿತರರು ತಂಡದಲ್ಲಿ ಕಾಣಿಸಿಕೊಂಡಿದ್ದಾರೆ.
'ಆ್ಯಂಡ್ರೆ ರಸೆಲ್ ಜೊತೆ ಕೆಲ ದಿನಗಳ ಹಿಂದೆ ಮಾತನಾಡಿದ್ದೆ. ವಿಶ್ವಕಪ್‌ಗೆ ತಾನು ತಯಾರಿರುವುದಾಗಿ ಅವರು ಹೇಳಿದ್ದಾರೆ. ರಸೆಲ್‌ಗೆ ಕೊಂಚ ಮೊಣಕಾಲು ನೋವಿನ ಸಮಸ್ಯೆಯಿದೆ. ಆದರೂ ಅವರು ವಿಶ್ವಕಪ್ ವೇಳೆಗೆ ಚೇತರಿಸಿಕೊಳ್ಳುವ ಭರವಸೆ ನೀಡಿದ್ದಾರೆ' ಎಂದು ಕ್ರಿಕೆಟ್ ವೆಸ್ಟ್ ಇಂಡೀಸ್ ನಿರ್ದೇಶಕ ಜಿಮ್ಮಿ ಆ್ಯಡಮ್ಸ್ ಮಾಹಿತಿ ನೀಡಿದ್ದಾರೆ.
ವೆಸ್ಟ್ ಇಂಡೀಸ್ ವಿಶ್ವಕಪ್ ತಂಡ
ಜೇಸನ್ ಹೋಲ್ಡರ್ (ನಾಯಕ), ಕ್ರಿಸ್ ಗೇಲ್, ಎವಿನ್ ಲೆವಿಸ್, ಶಾಯ್ ಹೋಪ್, ಶಿಮ್ರಾನ್ ಹೆಟ್ಮೈರ್, ಡ್ಯಾರೆನ್ ಬ್ರಾವೋ, ಫ್ಯಾಬಿಯನ್ ಅಲೆನ್, ನಿಕೋಲಸ್ ಪೂರನ್, ಆ್ಯಂಡ್ರೆ ರಸೆಲ್, ಕಾರ್ಲೋಸ್ ಬ್ರಾಥ್ವೈಟ್, ಆಶ್ಲೆ ನರ್ಸ್, ಶಾನನ್ ಗೇಬ್ರಿಯಲ್, ಷೆಲ್ಡನ್ ಕಾಟ್ರೆಲ್, ಒಶೇನ್ ಥಾಮಸ್ ಮತ್ತು ಕೀಮರ್ ರೋಚ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications