ವಿಶ್ವಕಪ್ 2019: ವೆಸ್ಟ್ ಇಂಡೀಸ್‌ಗೆ ಆಘಾತ, ರಸೆಲ್ ವಿಶ್ವಕಪ್‌ನಿಂದ ಹೊರಕ್ಕೆ!

ಲಂಡನ್, ಜೂನ್ 24: ವೆಸ್ಟ್ ಇಂಡೀಸ್‌ನ ಆಲ್ ರೌಂಡರ್ ಆ್ಯಂಡ್ರೆ ರಸೆಲ್ ಐಸಿಸಿ ವಿಶ್ವಕಪ್ 2019ರಿಂದಲೇ ಹೊರ ಬಿದ್ದಿದ್ದಾರೆ. ಗಾಯದ ಸಮಸ್ಯೆಯಿಂದ ಬಳಲುತ್ತಿರುವ ರಸೆಲ್ ಇನ್ನುಳಿದ ಪಂದ್ಯಗಳಲ್ಲಿ ವಿಂಡೀಸ್ ಪರ ಕಣಕ್ಕಿಳಿಯುತ್ತಿಲ್ಲ. ವೆಸ್ಟ್ ಇಂಡೀಸ್‌ಗೆ ಜೂನ್ 27ರಂದು ಭಾರತ ವಿರುದ್ಧ ಪಂದ್ಯವಿದೆ. ಈ ಪಂದ್ಯಕ್ಕೂ ಮುನ್ನವೇ ಕೆರಿಬಿಯನ್ನರಿಗೆ ಆಘಾತವಾಗಿದೆ.
ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ್ದ ರಸೆಲ್ ವಿಶ್ವದ ಗಮನ ಸೆಳೆದಿದ್ದರು. ಆದರೆ ಪ್ರಸ್ತುತ ವಿಶ್ವಕಪ್‌ನಲ್ಲಿ ರಸೆಲ್ ಮಿಂಚು ಹರಿಸಿರಲಿಲ್ಲ. ಅದರಲ್ಲೂ ಪ್ರಮುಖ ಪಂದ್ಯಗಳು ಮುಂದಿರುವಾಗಲೇ ಆ್ಯಂಸ್ರೆ ತಂಡದಿಂದ ಹೊರ ಬಿದ್ದಿದ್ದಾರೆ.
ವೆಸ್ಟ್ ಇಂಡೀಸ್ ಇಲ್ಲೀವರೆಗೆ 6 ಪಂದ್ಯಗಳಲ್ಲಿ ಒಂದರಲ್ಲಷ್ಟೇ ಜಯ ಗಳಿಸಿದೆ. ಸದ್ಯ ಅಂಕಪಟ್ಟಿಯಲ್ಲಿ ವಿಂಡೀಸ್ 8ನೇ ಸ್ಥಾನದಲ್ಲಿದೆ. ಎಡ ಮೊಣಕಾಲು ಗಾಯಕ್ಕೆ ತುತ್ತಾಗಿರುವ ರಸೆಲ್ ಜಾಗಕ್ಕೆ ಸುನಿಲ್ ಆ್ಯಂಬ್ರಿಸ್ ಅವರನ್ನು ತರಲಾಗಿದೆ. ಇನ್ನುಳಿದ 3 ಪಂದ್ಯಗಳಲ್ಲಿ ವಿಂಡೀಸ್ ಪರ ಆ್ಯಂಬ್ರಿಸ್ ಮೈದಾನಕ್ಕಿಳಿಯಲಿದ್ದಾರೆ.
'ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ವಿಶ್ವಕಪ್ ಕ್ರಿಕೆಟ್ 2019ಕ್ಕೆ ವೆಸ್ಟ್ ಇಂಡೀಸ್ ತಂಡಕ್ಕೆ ಸುನಿಲ್ ಆ್ಯಬ್ರಿಸ್ ಅವರನ್ನು ಅನುಮೋದಿಸಿದೆ. ಆ್ಯಂಡ್ರೆ ರಸೆಲ್ ಬದಲಿಗೆ ಸುನಿಲ್ ಅವರು ತಂಡ ಸೇರಿಕೊಳ್ಳಲಿದ್ದಾರೆ. ಇನ್ನುಳಿದ ಪಂದ್ಯಗಳಲ್ಲಿ ಸುನಿಲ್ ವಿಂಡೀಸ್ ಪರ ಆಡಲಿದ್ದಾರೆ' ಎಂದು ಐಸಿಸಿ ಪ್ರಕಟಣೆಯಲ್ಲಿ ತಿಳಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications