For Quick Alerts
ALLOW NOTIFICATIONS  
For Daily Alerts
 

ಡ್ಯಾರೆನ್ ಸಮಿ ಪ್ರಕಾರ 8ನೇ ಶ್ರೇಯಾಂಕಿತ ತಂಡ ವಿಶ್ವಕಪ್ ಜಯಿಸಲಿದೆ!

ಇದು ಬ್ರಾವೊ ನಿಜವಾದ ತಾಕತ್ತು..! | Oneindia Kannada
ICC World Cup 2019: Darren Sammy makes bizarre prediction

ಕಿಂಗ್ಸ್‌ಟೌನ್, ಮೇ 18: ವೆಸ್ಟ್ ಇಂಡೀಸ್ ತಂಡದ ಮಾಜಿ ನಾಯಕ ಡ್ಯಾರೆನ್ ಸಮಿ ಪ್ರಕಾರ ಇಂಗ್ಲೆಂಡ್‌ನಲ್ಲಿ ನಡೆಯುವ ಐಸಿಸಿ ಕ್ರಿಕೆಟ್ ವಿಶ್ವಕಪ್‌ನಲ್ಲಿ ಈ ಸಾರಿ ವೆಸ್ಟ್ ಇಂಡೀಸ್ ತಂಡ ಚಾಂಪಿಯನ್‌ ಆಗಿ ಹೊರಹೊಮ್ಮಲಿದೆ. ಏಕದಿನ ಕ್ರಿಕೆಟ್‌ನಲ್ಲಿ 8ನೇ ಶ್ರೇಯಾಂಕದಲ್ಲಿರುವ ವೆಸ್ಟ್ ಇಂಡೀಸ್ ತಂಡವನ್ನು ಸಮಿ ಚಾಂಪಿಯನ್‌ ಎಂದು ಊಹಿಸಿರುವುದು ಅಚ್ಚರಿ ಮೂಡಿಸಿದೆಯಾದರೂ ಸಮಿ ಊಹೆಯನ್ನು ಅಲ್ಲಗೆಳೆಯುವಂತೆಯೂ ಇಲ್ಲ.

2012 ಮತ್ತು 2016ರಲ್ಲಿ ವಿಶ್ವ ಟಿ20 ಪ್ರಶಸ್ತಿ ಜಯಿಸಿದ್ದ ವೆಸ್ಟ್ ಇಂಡೀಸ್ ತಂಡವನ್ನು ಮುನ್ನಡೆಸಿದ್ದ ಆಲ್ ರೌಂಡರ್ ಸಮಿ, ವಿಶ್ವಕಪ್ ಬಳಿಕ ಅಂತಾರಾಷ್ಟ್ರೀಯ ಏಕದಿನ ಪಂದ್ಯಕ್ಕೆ ಕ್ರಿಸ್‌ಗೇಲ್ ನಿವೃತ್ತಿ ನೀಡುವುದಾಗಿ ಈಗಾಗಲೇ ಹೇಳಿರುವುದರಿಂದ ಗೇಲ್‌ಗಾಗಿ ಈ ಸಾರಿ ವೆಸ್ಟ್ ಇಂಡೀಸ್ ಚಾಂಪಿಯನ್ ತಂಡ ಪಟ್ಟ ಅಲಂಕರಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

'ಯುನಿವರ್ಸ್ ಬಾಸ್ (ಕ್ರಿಸ್‌ಗೇಲ್) ನಿವೃತ್ತಿಗೂ ಮುನ್ನ ವಿಶ್ವಕಪ್‌ ಗೆದ್ದು ಸಂಭ್ರಮಾಚರಿಸಲು ಬಯಸಿರುವುದರಿಂದ ಈ ಸಾರಿ ವೆಸ್ಟ್ ಇಂಡೀಸ್ ತಂಡ ವಿಶ್ವಕಪ್ ಜಯಿಸಲಿದೆ. ನನಗಂತೂ ಈ ಬಗ್ಗೆ ಸಂಪೂರ್ಣ ಭರವಸೆಯಿದೆ' ಎಂದು ಐಸಿಸಿ ಕ್ರಿಕೆಟ್ ವಿಶ್ವಕಪ್‌ನ ಪ್ರಿವ್ಯೂ ಶೋನಲ್ಲಿ ಮಾತನಾಡುತ್ತ ಸಮಿ ಹೇಳಿಕೊಂಡಿದ್ದಾರೆ.

ಸದ್ಯ ಏಕದಿನ ರ್ಯಾಂಕಿಂಗ್‌ನಲ್ಲಿ ಕೆರಿಬಿಯನ್ನರು 8ನೇ ಸ್ಥಾನದಲ್ಲಿದ್ದಾರಾದರೂ ಸಮಿ ಮಾತನ್ನು ತೀರಾ ಕಡೆಗಣಿಸುವಂತೆಯೂ ಇಲ್ಲ. ಯಾಕೆಂದರೆ ವಿಶ್ವಕಪ್ ಆರಂಭಗೊಂಡ ಮೊದಲೆರಡು ಆವೃತ್ತಿಗಳಲ್ಲಿ ಅಂದರೆ 1975 ಮತ್ತು 1979ರಲ್ಲಿ ವೆಸ್ಟ್ ಇಂಡೀಸ್ ತಂಡ ಚಾಂಪಿಯನ್ ಪಟ್ಟ ಗೆದ್ದಿತ್ತು.

ವಿಶ್ವಕಪ್‌ಗಾಗಿ ವಿಂಡೀಸ್ ತಂಡ: ಜೇಸನ್ ಹೋಲ್ಡರ್ (ಸಿ), ಆ್ಯಂಡ್ರೆ ರಸ್ಸೆಲ್, ಆಶ್ಲೆ ನರ್ಸ್, ಕಾರ್ಲೋಸ್ ಬ್ರಾಥ್ವೇಟ್, ಕ್ರಿಸ್ ಗೇಲ್, ಡ್ಯಾರೆನ್ ಬ್ರಾವೋ, ಎವಿನ್ ಲೆವಿಸ್, ಫ್ಯಾಬಿಯನ್ ಅಲೆನ್, ಕೆಮರ್ ರೋಚ್, ನಿಕೋಲಸ್ ಪೂರನ್, ಒಶೇನ್ ಥಾಮಸ್, ಶಾಯ್ ಹೋಪ್, ಶಾನನ್ ಗೇಬ್ರಿಯಲ್, ಶೆಲ್ಡನ್ ಕಾಟ್ರೆಲ್, ಶಿಮ್ರಾನ್ ಹೆಟ್ಮೈಯರ್.

Story first published: Saturday, May 18, 2019, 18:05 [IST]
Other articles published on May 18, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+