ಭಾರತ vs ಪಾಕಿಸ್ತಾನ ಹೈ ವೋಲ್ಟೇಜ್ ಪಂದ್ಯಕ್ಕೆ ಭಾರತ ಸಂಭಾವ್ಯ ತಂಡ

ಮ್ಯಾನ್ಚೆಸ್ಟರ್, ಜೂನ್ 15: ಐಸಿಸಿ ಕ್ರಿಕೆಟ್ ವಿಶ್ವಕಪ್ ಫೈನಲ್ ನಷ್ಟೇ ಕುತೂಹಲಕಾರಿ ಪಂದ್ಯಕ್ಕೆ ಭಾರತ ಮತ್ತು ಪಾಕಿಸ್ತಾನ ತಂಡಗಳ ಕದನ ಸಾಕ್ಷಿಯಾಗಲಿದೆ. ಭಾನುವಾರ (ಜೂನ್ 16) ವಿಶ್ವಕಪ್ 22ನೇ ಪಂದ್ಯದಲ್ಲಿ ಬದ್ಧ ಎದುರಾಳಿ ತಂಡಗಳು ಸೆಣಸಾಡಲಿವೆ. ಮ್ಯಾನ್ಚೆಸ್ಟರ್ ನ ಓಲ್ಡ್ ಟ್ರಾಫೋರ್ಡ್ ಸ್ಟೇಡಿಯಂನಲ್ಲಿ ಈ ಹೈವೋಲ್ಟೇಜ್ ಪಂದ್ಯ ನಡೆಯಲಿದೆ.
ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ
ವಿಶ್ವಕಪ್‌ನಲ್ಲಿ ಭಾರತ ತಂಡ ಸೋತ ಇತಿಹಾಸವೇ ಇಲ್ಲ. ಈ ಬಾರಿಯೂ ವಿರಾಟ್ ಕೊಹ್ಲಿ ಬಳಗ ದಾಖಲೆ ಮುಂದುವರೆಸುವ ವಿಶ್ವಾಸದಲ್ಲಿದೆ. 12ನೇ ಆವೃತ್ತಿಯ ಈ ವಿಶ್ವಕಪ್‌ನಲ್ಲಿ ಈವರೆಗೆ ಆಡಿರುವ 2 ಪಂದ್ಯಗಳಲ್ಲೂ ಬ್ಲೂ ಬಾಯ್ಸ್ ತಂಡ ಗೆದ್ದಿದ್ದು ಪಾಕ್ ವಿರುದ್ಧವೂ ಗೆಲ್ಲುವ ಭರವಸೆ ಮೂಡಿಸಿದೆ.
ಒಟ್ಟು 6 ಬಾರಿಯ ವಿಶ್ವಕಪ್ ಮುಖಾಮುಖಿಯಲ್ಲಿ ಭಾರತ ಎಲ್ಲದರಲ್ಲೂ ಮೇಲುಗೈ ಸಾಧಿಸಿದೆ. ಈ ಬಾರಿಯ ಕದನದಲ್ಲಿ ಸರ್ಫರಾಜ್ ಅಹ್ಮದ್ ಪಡೆಯನ್ನು ಹತ್ತಿಕ್ಕಲು ಕೊಹ್ಲಿ ಬಳಗದಲ್ಲಿ ಕಣಕ್ಕಿಳಿಯಲಿರುವ ಆಟಗಾರರ ಸಂಭಾವ್ಯ ಪಟ್ಟಿ ಇಂತಿದೆ.

ಆರಂಭಿಕರಾಗಿ ರೋಹಿತ್-ರಾಹುಲ್
ಭಾರತ ತಂಡ ಸ್ಟಾರ್ ಓಪನರ್ ಶಿಖರ್ ಧವನ್ ಗಾಯಾಳಾಗಿ ತಂಡದಿಂದ ಹೊರಗುಳಿದಿರುವುದು ಭಾರತ ತಂಡಕ್ಕೆ ಹಿನ್ನಡೆಯಾದರೂ ಆರಂಭಿಕರಾಗಿ ಧವನ್ ಬದಲಿಗೆ ಕನ್ನಡಿಗ ಕೆಎಲ್ ರಾಹುಲ್ ಕಾಣಿಸಿಕೊಳ್ಳಲಿದ್ದಾರೆ. ರಾಹುಲ್-ರೋಹಿತ್ ಶರ್ಮಾ ಜೋಡಿ ಟೀಮ್ ಇಂಡಿಯಾಕ್ಕೆ ಬಲ ತುಂಬಲಿದೆ. ಇನ್ನು 3ನೇ ಬ್ಯಾಟಿಂಗ್ ಕ್ರಮಾಂದಲ್ಲಿ ನಾಯಕ ವಿರಾಟ್ ಕೊಹ್ಲಿ ತಂಡದ ಬೆಂಗಾವಲಿಗೆ ನಿಲ್ಲಲಿದ್ದಾರೆ (1. ರೋಹಿತ್ ಶರ್ಮಾ, 2. ಕೆಎಲ್ ರಾಹುಲ್, 3. ವಿರಾಟ್ ಕೊಹ್ಲಿ)

4ರಲ್ಲಿ ವಿಜಯ್ ಅಥವಾ ದಿನೇಶ್
ಜೂನ್ 13ರಂದು ನ್ಯೂಜಿಲೆಂಡ್ vs ಭಾರತ ಪಂದ್ಯ ಮಳೆಯ ಕಾರಣ ರದ್ದಾಗದಿದ್ದರೆ ಧವನ್ ಅನುಪಸ್ಥಿತಿಯಲ್ಲಿ ಬದಲಾದ ಬ್ಯಾಟಿಂಗ್ ಕ್ರಮಾಂಕದ 4ನೇ ಸ್ಥಾನದಲ್ಲಿ ಯಾರು ಕಾಣಿಸಲಿದ್ದಾರೆ ಎಂಬುದು ಸ್ಪಷ್ಟವಾಗುತ್ತಿತ್ತು. ಸದ್ಯದ ಮಾಹಿತಿಯ ಪ್ರಕಾರ ದಿನೇಶ್ ಕಾರ್ತಿಕ್ ಅಥವಾ ಆಲ್ ರೌಂಡರ್ ವಿಜಯ್ ಶಂಕರ್ 4ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಬರಲಿದ್ದಾರೆ. 5ನೇ ಸ್ಥಾನ ಬೆಸ್ಟ್ ಫಿನಿಷರ್ ಎಂಎಸ್ ಧೋನಿಗೆ ಫಿಕ್ಸ್ (4. ದಿನೇಶ್ ಕಾರ್ತಿಕ್ ಅಥವಾ ವಿಜಯ್ ಶಂಕರ್, 5. ಎಂಎಸ್ ಧೋನಿ).

ಆಲ್ ರೌಂಡರ್‌ಗಳು
ಈ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾದ ಭವಿಷ್ಯ ನಿರ್ಧರಿಸುವಲ್ಲಿ ಆಲ್ ರೌಂಡರ್‌ಗಳ ಪಾತ್ರ ಮಹತ್ವದ್ದು ಎಂದು ಭಾವಿಸಲಾಗಿದೆ. ಮುಖ್ಯವಾಗಿ ಹಾರ್ದಿಕ್ ಪಾಂಡ್ಯ ಗೇಮ್ ಚೇಂಜರ್ ನಂತೆ ಕಾಣಿಸುತ್ತಿದ್ದಾರೆ. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತದ 6ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಕೇದಾರ್ ಜಾಧವ್ ಕಾಣಿಸಿಕೊಂಡರೆ, 7ನೇ ಕ್ರಮಾಂಕದಲ್ಲಿ ಮತ್ತೊಬ್ಬ ಆಲ್ ರೌಂಡರ್ ಪಾಂಡ್ಯ ಬ್ಯಾಟ್ ಎತ್ತಿಕೊಳ್ಳಲಿದ್ದಾರೆ (6. ಕೇದಾರ್ ಜಾಧವ್, 7. ಹಾರ್ದಿಕ್ ಪಾಂಡ್ಯ).

ಬೌಲರ್‌ಗಳ ಪಡೆ
ಪಾಕಿಸ್ತಾನವನ್ನು ಹಿಮ್ಮೆಟ್ಟಿಸುವ ಮೂಲಕ ಗೆಲುವಿನ ಇತಿಹಾಸ ಮುಂದುವರೆಸುವ ಯೋಜನೆಲ್ಲಿರುವ ಭಾರತ ತಂಡದಲ್ಲಿ ಬೌಲರ್‌ಗಳೂ ಗಮನ ಸೆಳೆಯಲಿದ್ದಾರೆ. ವೇಗಿ ಭುವನೇಶ್ವರ್ ಕುಮಾರ್ 8ನೇ ಕ್ರಮಾಂಕದಲ್ಲಿ, ಯುಜುವೇಂದ್ರ ಚಾಹಲ್ 9ನೇ, ಕುಲದೀಪ್ ಯಾದವ್ 10ನೇ ಮತ್ತು ಏಕದಿನದಲ್ಲಿನ ನಂ.1 ಬೌಲರ್ ಜಸ್‌ಪ್ರೀತ್ ಬೂಮ್ರಾ 11ನೇ ಸ್ಥಾನದಲ್ಲಿ ಬರಲಿದ್ದಾರೆ (8. ಭುವನೇಶ್ವರ್ ಕುಮಾರ್, 9. ಯುಜುವೇಂದ್ರ ಚಾಹಲ್, 10. ಕುಲದೀಪ್ ಯಾದವ್, 11. ಜಸ್‌ಪ್ರೀತ್ ಬೂಮ್ರಾ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications