Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕ್ರಿಕೆಟ್‌ ವಿಶ್ವಕಪ್‌ 2019: ಸ್ಟ್ಯಾಂಡ್‌ ಬೈ ಆಟಗಾರರ ಪಟ್ಟಿಗೆ ಇಶಾಂತ್‌, ಅಕ್ಷರ್‌

all rounder axar patel stand by player for india

ಮುಂಬಯಿ, ಏಪ್ರಿಲ್‌ 18: ಇಂಗ್ಲೆಂಡ್‌ ಮತ್ತು ವೇಲ್ಸ್‌ ಆತಿಥ್ಯದಲ್ಲಿ ಮೇ 30ರಂದು ಆರಂಭವಾಗಲಿರುವ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಗೆ ಅನುಭವಿ ವೇಗಿ ಇಶಾಂತ್‌ ಶರ್ಮಾ ಮತ್ತು ಆಲ್‌ರೌಂಡರ್‌ ಅಕ್ಷರ್‌ ಪಟೇಲ್‌ ಅವರನ್ನೂ ಸ್ಟ್ಯಾಂಡ್‌ ಬೈ ಆಟಗಾರರಾಗಿ ನೇಮಕ ಮಾಡಲಾಗಿದೆ.

ಈ ಮೊದಲು ವಿಶ್ವಕಪ್‌ಗೆ ಭಾರತದ ಕಾಯ್ದಿರಿಸಿದ ಆಟಗಾರರ ಪಟ್ಟಿಯಲ್ಲಿ ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ ರಿಷಭ್‌ ಪಂತ್‌, ಅಬುಭವಿ ಬ್ಯಾಟ್ಸ್‌ಮನ್‌ ಅಂಬಾಟಿ ರಾಯುಡು ಮತ್ತುಯುವ ವೇಗಿ ನವದೀಪ್‌ ಸೈನಿ ಸ್ಥಾನ ಪಡೆದಿದ್ದರು. ಇದೀಗ ಇಶಾಂತ್‌ ಶರ್ಮಾ ಮತ್ತು ಅಕ್ಷರ್‌ ಪಟೇಲ್‌ ಅವರ ಹೆರನ್ನು ಸೇರ್ಪಡೆ ಮಾಡಲಾಗಿದ್ದುಒಟ್ಟು 5 ಆಟಗಾರರು ವಿಶ್ವಕಪ್‌ಗೆ ಸ್ಟ್ಯಾಂಡ್‌ ಬೈಗಳಾಗಿದ್ದಾರೆ.

ವಿಶ್ವಕಪ್‌ಗೆ ಕಾಯ್ದಿರಿಸಲಾಗಿರುವ ಐವರು ಆಟಗಾರರಿಗೆ ಯಾವುದೇ ಸಂದರ್ಭದಲ್ಲಿ ತಂಡ ಸೇರಿಕೊಳ್ಳುವಂತೆ ಸಿದ್ದರಿಸಲು ಸೂಚಿಸಲಾಗಿದೆ. ನವದೀಪ್‌ ಸೈನಿ ಭಾರತ ತಂಡದ ನೆಟ್‌ ಬೌಲರ್‌ ಆಗಿರುವುದರಿಂದ ತಂಡದ ಜೊತೆಗೆ ಇಂಗ್ಲೆಂಡ್‌ಗೆ ತೆರಳಲಿದ್ದಾರೆ. ಉಳಿದ ಆಟಗಾರರು ಅಗತ್ಯ ಬಿದ್ದಲ್ಲಿ ಮಾತ್ರವೇ ವಿಮಾನ ಹತ್ತಲಿದ್ದಾರೆಂದು ಬಿಸಿಸಿಐ ಪದಾಧಿಕಾರಿಯೊಬ್ಬರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

"ರಿಷಭ್‌, ರಾಯುಡು, ಇಶಾಂತ್, ಅಕ್ಷರ್‌ ಮತ್ತು ಸೈನಿ ತಾವು ಸ್ಟ್ಯಾಂಡ್‌ ಬೈ ಆಟಗಾರರು ಎಂಬುದನ್ನು ತಿಳಿದಿದ್ದಾರೆ. ಸೈನಿ ಮಾತ್ರವೇ ತಂಡದೊಂದಿಗೆ ಪ್ರಯಾಣಿಸಲಿದ್ದು, ಉಳಿದ ನಾಲ್ವರು ಇಲ್ಲಿಯೇ ಉಳಿಯಲಿದ್ದಾರೆ ಎಂದು ಮಂಡಳಿ ಸ್ಪಷ್ಟಪಡಿಸಿದೆ. ಅಲ್ಲದೆ ಅಗತ್ಯ ಬಿದ್ದಲ್ಲಿ ಕೂಡಲೇ ಹೊರಡಲು ಸಿದ್ದರಿರುವಂತೆಯೂ ಸೂಚಿಸಲಾಗಿದೆ,'' ಎಂದು ಹೇಳಿದ್ದಾರೆ.

ಇಶಾಂತ್‌ ಆಯ್ಕೆ ಅಚ್ಚರಿ

ಭಾರತ ಟೆಸ್ಟ್‌ ತಂಡದ ಬೌಲರ್‌ ಇಶಾಂತ್‌ ಶರ್ಮಾ ಅವರನ್ನು ಸ್ಟ್ಯಾಂಡ್‌ ಬೈ ಆಟಗಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಿರುವುದು ಎಲ್ಲರ ಹುಬ್ಬೇರುವಂತೆ ಮಾಡಿದೆ.

ಕಳೆದ ವರ್ಷ ಐಪಿಎಲ್‌ ಟೂರ್ನಿಯಿಂದಲೂ ಹೊರಬಿದಿದ್ದ ಇಶಾಂತ್‌, ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಅವಕಾಶ ವಂಚಿತರಾಗಿದ್ದರು. ಆದರೂ, ಆತ್ಮವಿಶ್ವಾಸ ಕಳೆದುಕೊಳ್ಳದೆ ಕೌಂಟಿ ಕ್ರಿಕೆಟ್‌ನಲ್ಲಿ ತೊಡಗಿಸಿಕೊಂಡು ತಮ್ಮ ಬೌಲಿಂಗ್‌ ತಂತ್ರಗಾರಿಕೆಯನ್ನು ಮತ್ತಷ್ಟು ಸುಧಾರಿಸಿ, ಟೆಸ್ಟ್‌ ಕ್ರಿಕೆಟ್‌ನಲ್ಲಿ ಹೆಚ್ಚು ಪರಿಣಾಮಕಾರಿ ಬೌಲಿಂಗ್‌ ನಡೆಸಿ ಗಮನ ಸೆಳೆದಿದ್ದಾರೆ.

ಜೊತೆಗೆ ಈ ಬಾರಿಯ ಐಪಿಎಲ್‌ನಲ್ಲಿಯೂ ಉತ್ತಮ ಬೌಲಿಂಗ್‌ ದಾಳಿ ಸಂಘಟಿಸಿರುವ ಇಶಾಂತ್‌, 2013ರಲ್ಲಿ ಇಂಗ್ಲೆಂಡ್‌ ಮತ್ತು ವೇಲ್ಸ್‌ ಆತಿಥ್ಯದಲ್ಲಿ ನಡೆದ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದ ಭಾರತ ತಂಡದ ಸದಸ್ಯನಾಗಿದ್ದರು. ಹೀಗಾಗಿ ಅವರ ಅನುಭವ ಮತ್ತು ಸದ್ಯದ ಫಾರ್ಮ್ ಗಮನಿಸಿ ಟೀಮ್‌ ಇಂಡಿಯಾದ ಸ್ಟ್ಯಾಂಡ್‌ ಬೈ ಆಟಗಾರರ ಪಟ್ಟಿಗೆ ಪರಿಗಣಿಸಲಾಗಿದೆ.

ಸದ್ಯ ಐಪಿಎಲ್‌ನಲ್ಲಿ ಇಶಾಂತ್‌ ಶರ್ಮಾ ಮತ್ತು ಅಕ್ಷರ್‌ ಪಟೇಲ್‌ ಇಬ್ಬರೂ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಪರ ಆಡುತ್ತಿದ್ದಾರೆ.

ಮೊಹಮ್ಮದ್‌ ಶಮಿ, ಜಸ್‌ಪ್ರೀತ್‌ ಬುಮ್ರಾ ಹಾಗೂ ಭುವನೇಶ್ವರ್‌ ಕುಮಾರ್‌ ಅವರಂತಹ ಅನುಭವಿ ವೇಗಿಗಳು ಗಾಯಗೊಂಡಲ್ಲಿ ಅವರ ಸ್ಥಾನ ತುಂಬಲು ಇಶಾಂತ್‌ ಸೂಕ್ತ ಆಟಗಾರ ಎಂಬುದು ಬಿಸಿಸಿಐ ಪದಾಧಿಕಾರಿಗಳ ಅಭಿಪ್ರಾಯವಾಗಿದೆ.

Story first published: Thursday, April 18, 2019, 13:12 [IST]
Other articles published on Apr 18, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+