ಭಾರತ ವಿಶ್ವಕಪ್ ಮೀಸಲು ತಂಡದಲ್ಲಿ ವೇಗಿ ಇಶಾಂತ್ ಶರ್ಮಾಗೆ ಸ್ಥಾನ

ನವದೆಹಲಿ, ಮೇ 7: ಮುಂಬರಲಿರುವ 2019ರ ಐಸಿಸಿ ವಿಶ್ವಕಪ್‌ಗಾಗಿ ಭಾರತದ ಮೀಸಲು ತಂಡದಲ್ಲಿ ವೇಗಿ ಇಶಾಂತ್ ಶರ್ಮಾ ಕೂಡ ಸೇರಿಕೊಂಡಿದ್ದಾರೆ. ಮೂಲವೊಂದರ ಪ್ರಕಾರ ಇಶಾಂತ್ ಅವರನ್ನೂ ಅಂಬಾಟಿ ರಾಯುಡು, ರಿಷಬ್ ಪಂತ್ ಜೊತೆ ಮೀಸಲು ತಂಡದಲ್ಲಿ ಸೇರಿಸಲಾಗಿದೆ. ಮತ್ತೊಬ್ಬ ಸ್ಟ್ಯಾಂಡ್‌ಬೈ ವೇಗಿಯಾಗಿ ನವದೀಪ್ ಸೈನಿ ಇದ್ದಾರೆ (ಚಿತ್ರಕೃಪೆ: ಬಿಸಿಸಿಐ).
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಪ್ರತಿನಿಧಿಸಿದ್ದ ಇಶಾಂತ್ ಶರ್ಮಾ 10 ಪಂದ್ಯಗಳಲ್ಲಿ 7.65ರ ಎಕಾನಮಿಯಂತೆ 10 ವಿಕೆಟ್‌ಗಳನ್ನು ಕೆಡವುವ ಮೂಲಕ ಕ್ರಿಕೆಟ್ ಅಭಿಮಾನಿಗಳ ಮತ್ತು ಭಾರತದ ಆಯ್ಕೆ ಸಮಿತಿಯ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು.
'ಮೀಸಲು ಆಟಗಾರರಲ್ಲಿ ವೇಗಿಗಳ ಸಾಲಿನಲ್ಲಿ ಸೈನಿ ನಮ್ಮ ನಂ.1 ಆಯ್ಕೆ. ಜೊತೆಗೆ ಇಶಾಂತ್ ಕೂಡ 2ನೇ ಆಯ್ಕೆಯಾಗಿ ಕಾಣಿಸಿದ್ದಾರೆ. ಇಂಗ್ಲೆಂಡ್ ಪರಿಸ್ಥಿತಿಗೆ ಇಶಾಂತ್ ಅನುಭವಿ ಬೌಲರ್, ಅಲ್ಲದೆ ಅವರ ಬೌಲಿಂಗ್ ಪ್ರದರ್ಶನ ಈಗ ಚೆನ್ನಾಗಿಯೂ ಇದೆ' ಎಂದು ಬಿಸಿಸಿಐ ಮೂಲವೊಂದು ತಿಳಿಸಿದೆ.
ಎಲ್ಲಾ ತಂಡಗಳ ಆಡುವ ಆಟಗಾರರು ಮತ್ತು ಮೀಸಲು ಆಟಗಾರರ ಸಂಭಾವ್ಯ ಪಟ್ಟಿ ಐಸಿಸಿ ಕೈ ಸೇರಿದೆ. ಆದರೆ ಸಣ್ಣಪುಟ್ಟ ಬದಲಾವಣೆಗಳನ್ನು ಮಾಡಿಕೊಳ್ಳಲು ಬಿಸಿಸಿಐಗೆ ಅವಕಾಶವಿರುವುದರಿಂದ ಇಶಾಂತ್ ಗೆ ಅದೃಷ್ಟ ಖುಲಾಯಿಸಿದರೆ ಅದರಲ್ಲಿ ಅಚ್ಚರಿಯಿಲ್ಲ. ಅಂದ್ಹಾಗೆ ಇಶಾಂತ್ ಪ್ರತಿನಿಧಿಸಿದ್ದ ಡೆಲ್ಲಿ ತಂಡ ಐಪಿಎಲ್‌ನಲ್ಲಿ ಪ್ಲೇ ಆಫ್ ಗೆ ಅರ್ಹತೆ ಗಿಟ್ಟಿಸಿಕೊಂಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications