ವಿಶ್ವಕಪ್ 2019: ಪಾಕಿಸ್ತಾನ ತಂಡಕ್ಕೆ ಅನುಭವಿ ವೇಗಿ ಆಮೀರ್ ಸೇರ್ಪಡೆ

ಇಸ್ಲಮಾಬಾದ್, ಮೇ 17: ಅನುಭವಿ ಎಡಗೈ ವೇಗಿ ಮೊಹಮ್ಮದ್ ಆಮೀರ್ ಅವರನ್ನು ಪಾಕಿಸ್ತಾನ ರಾಷ್ಟ್ರೀಯ ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ಅಮೀರ್ ಚೇತರಿಸಿಕೊಂಡಿದ್ದು, ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಚಿಕನ್ ಪಾಕ್ಸ್ ನಿಂದಾಗಿ ಬಳಲುತ್ತಿದ್ದರು ಎನ್ನಲಾಗಿದ್ದರಿಂದ ಆಮೀರ್ ಅವರನ್ನು ಲಂಡನ್‌ನಲ್ಲಿ ಪರೀಕ್ಷೆಗೊಳಪಡಿಸಲಾಗಿತ್ತು. ಪರೀಕ್ಷೆ ಬಳಿಕ ಅನುಮತಿ ದೊರೆತಿದ್ದರಿಂದ ಮೊಹಮ್ಮದ್ ಆಮೀರ್ ಅವರನ್ನು ತಂಡಕ್ಕೆ ಸೇರಿಕೊಳ್ಳಲಾಗಿದೆ ಎಂದು ಪಾಕಿಸ್ತಾನ ತಂಡ ನಿರ್ವಹಣಾ ಸಮಿತಿ ಮಾಹಿತಿ ನೀಡಿದೆ.
'ಪಾಕಿಸ್ತಾನ ವಿಶ್ವಕಪ್ ತಂಡದಲ್ಲಿ ಮೊಹಮ್ಮದ್ ಆಮೀರ್ ಸೇರ್ಪಡೆಗೆ ಆಯ್ಕೆ ಸಮಿತಿ ಮುಖ್ಯಸ್ಥ ಇಂಝಮಾಮ್ ಉಕ್ ಹಕ್ ಒಪ್ಪಿಗೆ ಸೂಚಿಸಿದ್ದಾರೆ. ಆದರೂ ಅಮೀರ್ ಅಂಪೂರ್ಣ ಫಿಟ್‌ಗೆ ಮರಳುವ ತನಕ ನಿರ್ಧಾರ ಕಾಯ್ದಿಡಲು ತಿಳಿಸಿದ್ದಾರೆ' ಎಂದು ಮೂಲವೊಂದು ತಿಳಿಸಿದೆ.
Story first published: Friday, May 17, 2019, 12:19 [IST]
Other articles published on May 17, 2019
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications