Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಶ್ವಕಪ್: 2 ಮೀಸಲು ಆಟಗಾರರ ಜೊತೆಗೆ ಪಾಕಿಸ್ತಾನ ತಂಡ ಪ್ರಕಟ!

ICC World Cup 2019: Pakistan to name World Cup squad with two reserves

ಕರಾಚಿ, ಏಪ್ರಿಲ್ 17: ಐಸಿಸಿ ಕ್ರಿಕೆಟ್ ವಿಶ್ವಕಪ್ 2019ಗಾಗಿ ಪಾಕಿಸ್ತಾನದ ಆಯ್ಕೆ ಸಮಿತಿ ಅಧ್ಯಕ್ಷ ಇನ್ಜಾಮಾಮ್ ಉಲ್ ಹಕ್ ಅವರು ಈಗಾಗಲೇ 23 ಮಂದಿ ಸದಸ್ಯರ ಸಂಭಾವ್ಯ ತಂಡವನ್ನು ಪ್ರಕಟಿಸಿದ್ದಾರೆ. ಗುರುವಾರದಂದು 15 ಸದಸ್ಯರ ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗುವುದು ಇಬ್ಬರು ಮೀಸಲು(reserve) ಆಟಗಾರರನ್ನು ಹೆಸರಿಸಲಾಗುವುದು ಎಂದು ಹೇಳಿದ್ದಾರೆ.

ಆಟಗಾರರ ಅಂತಿಮ ಪಟ್ಟಿ ಪ್ರಕಟಿಸಲು ಏಪ್ರಿಲ್ 23, 2019 ಕೊನೆ ದಿನಾಂಕವಾಗಿದ್ದು, ಇದಕ್ಕೂ ಮುನ್ನ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಆಟಗಾರರ ಸಾಮರ್ಥ್ಯವನ್ನು ಅಳೆಯಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ) ಮುಂದಾಗಿದೆ.

ಎಡಗೈ ಸ್ಪಿನ್ನರ್ ಆಲ್ ರೌಂಡರ್ ಎಮಾದ್ ವಾಸೀಂ, ಎಡಗೈ ವೇಗಿ ಮೊಹಮ್ಮದ್ ಅಮೀರ್ ಅವರ ಫಿಟ್ನೆಸ್ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. ಇದಲ್ಲದೆ, ಬದಲಿ ಆರಂಭಿಕ ಆಟಗಾರನಿಗಾಗಿ ಕೂಡಾ ಆಯ್ಕೆ ಮಂಡಳಿ ಹುಡುಕಾಟ ನಡೆಸಿದೆ.

ಫಖಾರ್ ಜಮಾನ್ ಹಾಗೂ ಇಮಾಮ್ ಉಲ್ ಹಕ್ ಜೊತೆಗೆ ಬದಲಿ ಓಪನರ್ ಆಗಿ ಅಬಿದ್ ಅಲಿ ಅಥವಾ ಹಾರೀಸ್ ಸೊಹೈಲ್ ಆಡುವ ನಿರೀಕ್ಷೆಯಿದೆ. ಅಬಿದ್ ಅವರು ಕಳೆದ ವಾರ ಫಿಟ್ನೆಸ್ ಪರೀಕ್ಷೆಯಲ್ಲಿ ಫೇಲ್ ಆಗಿದ್ದಾರೆ. ಅನುಭವಿ ಆಟಗಾರ ಮೊಹಮ್ಮದ್ ಹಫೀಜ್ ರನ್ನು ಕೂಡಾ ಆರಂಭಿಕನಾಗಿ ಕಣಕ್ಕಿಳಿಸಲು ಮುಂದಾಗಿದ್ದಾರೆ.

23 ಮಂದಿ ಸದಸ್ಯರ ಪಟ್ಟಿಯಲ್ಲಿ ಪ್ರಮುಖವಾಗಿ ಉಮರ್ ಅಕ್ಮಲ್ ಹಾಗೂ ವಹಾಬ್ ರಿಯಾಜ್ ಹೆಸರು ಕಾಣಿಸಿಕೊಂಡಿಲ್ಲ. ಮೊಹಮ್ಮದ್ ಅಬ್ಬಾದ್, ಶಾನ್ ಮಸೂದ್, ಮೊಹಮ್ಮದ್ ಹಸ್ನಾಯಿನ್ ಹೊಸಮುಖಗಳಾಗಿವೆ.

ಫಖಾರ್, ಇಮಾಮ್, ಹಾರಿಸ್, ಬಾಬರ್ ಅಜಮ್, ಶೊಯೆಬ್ ಮಲೀಕ್, ಮೊಹಮ್ಮದ್ ಹಫೀಜ್, ಮೊಹಮ್ಮದ್ ರಿಜ್ವಾನ್, ಸರ್ಫರಾಜ್ ಖಾನ್ (ನಾಯಕ), ಶಾದಾಬ್ ಖಾನ್, ಫಹೀಂ ಅಶ್ರಫ್, ಜುನೈದ್ ಖಾನ್, ಇಮಾದ್ ವಾಸೀಂ, ಶಾಹೀಂ ಅಫ್ರಿಡಿ, ಮೊಹಮ್ಮದ್ ಅಮೀರ್ ಅವರ ಆಯ್ಕೆ ಖಚಿತವಾಗಿದೆ.

Story first published: Wednesday, April 17, 2019, 21:24 [IST]
Other articles published on Apr 17, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+