For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್‌ಗಾಗಿ ವಿವಿಧ ದೇಶಗಳು 'ಈ ದಿನ' ಅಂತಿಮ ತಂಡ ಪ್ರಕಟಿಸಲಿವೆ!

ICC World Cup 2019: When will teams announce final squad - Full List 

ನವದೆಹಲಿ, ಏಪ್ರಿಲ್ 10: ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಐಸಿಸಿ ವಿಶ್ವಕಪ್ 2019ಕ್ಕೆ ಇನ್ನು ಬರೀ ಒಂದೂವರೆ ತಿಂಗಳು ಬಾಕಿಯಿದೆ. ಸದ್ಯಕ್ಕೆ ನ್ಯೂಜಿಲ್ಯಾಂಡ್ ಮಾತ್ರ ವಿಶ್ವಕಪ್‌ಗಾಗಿ ತಂಡವನ್ನು ಪ್ರಕಟಿಸಿದೆ. ಉಳಿದ ದೇಶಗಳೂ ಶೀಘ್ರ ತಮ್ಮ ಅಂತಿಮ ತಂಡಗಳನ್ನು ಪ್ರಕಟಿಸಲಿವೆ.

ನ್ಯೂಜಿಲ್ಯಾಂಡ್ ಬಿಟ್ಟರೆ ಅಫ್ಘಾನಿಸ್ತಾನ ತನ್ನ 23 ಆಟಗಾರರಿರುವ ವಿಶ್ವಕಪ್ ತಂಡವನ್ನು ಪ್ರಕಟಿಸಿದೆ. ಆದರೆ ಅಂತಿಮ ಪಟ್ಟಿಯನ್ನು ಇನ್ನು ಕೆಲವೇ ದಿನಗಳಲ್ಲಿ ಪ್ರಕಟಿಸಲಿದೆ. ಬೇರೆ ಬೇರೆ ದೇಶಗಳು ವಿಶ್ವಕಪ್ ಅಂತಿಮ ತಂಡವನ್ನು ಪ್ರಕಟಿಸಲು ದಿನಾಂಕ ನಿಗದಿ ಪಡಿಸಿವೆ. ಯಾವ ದೇಶಗಳು ಯಾವಾಗ ತಂಡ ಪ್ರಕಟಿಸುತ್ತಿವೆ ಎಂಬ ಮಾಹಿತಿ ಇಲ್ಲಿದೆ.

ಬಿಸಿಸಿಐ ವಿಶ್ವಕಪ್ ತಂಡವನ್ನು ಏಪ್ರಿಲ್ 15ಕ್ಕೆ ಪ್ರಕಟಿಸುತ್ತಿದೆ ಎಂಬ ಮಾಹಿತಿ ಹಿಂದೆಯೇ ನೀಡಿದ್ದೆವು. ಇನ್ನುಳಿದ ತಂಡಗಳ ದಿನಾಂಕಗಳು ಇಲ್ಲಿ ನೀಡಿದ್ದೇವೆ (ಕೆಲವು ದೇಶಗಳು ಈಗಲೂ ಅಂತಿಮ ದಿನಾಂಕವನ್ನು ನಿಗದಿಪಡಿಸಿಲ್ಲ). ಅಂದ್ಹಾಗೆ ಪ್ರತಿಷ್ಠಿತ ವಿಶ್ವಕಪ್ ಟೂರ್ನಿ ಇಂಗ್ಲೆಂಡ್ ಮತ್ತು ವೇಲ್ಸ್‌ನಲ್ಲಿ ಮೇ 30ರಿಂದ ಆರಂಭಗೊಳ್ಳಲಿದೆ.

ವಿಶ್ವಕಪ್‌ನಲ್ಲಿ ಪಾಲ್ಗೊಳ್ಳುತ್ತಿರುವ 10 ದೇಶಗಳು ಅಂತಿಮ ತಂಡ ಪ್ರಕಟಿಸುತ್ತಿರುವ ದಿನಾಂಕಗಳು (ಈವರೆಗೆ ಲಭಿಸಿದ ಮಾಹಿತಿಯಂತೆ)
1. ಭಾರತ: ಏಪ್ರಿಲ್ 15
2. ಪಾಕಿಸ್ತಾನ: ಏಪ್ರಿಲ್ 18
3. ದಕ್ಷಿಣ ಆಫ್ರಿಕಾ: ಏಪ್ರಿಲ್ 18
4. ಅಫ್ಘಾನಿಸ್ಥಾನ: ಸಂಭಾವ್ಯ ತಂಡ ಪ್ರಕಟಿಸಿದೆ.
5. ಬಾಂಗ್ಲಾದೇಶ: ಏಪ್ರಿಲ್ 15 ಮತ್ತು ಏಪ್ರಿಲ್ 20ರ ನಡುವೆ
6. ಇಂಗ್ಲೆಂಡ್: ದಿನಾಂಕ ಇನ್ನೂ ನಿಗದಿಯಾಗಿಲ್ಲ
7. ಆಸ್ಟ್ರೇಲಿಯಾ: ದಿನಾಂಕ ಇನ್ನೂ ನಿಗದಿಯಾಗಿಲ್ಲ
8. ವೆಸ್ಟ್ ಇಂಡೀಸ್: ದಿನಾಂಕ ಇನ್ನೂ ನಿಗದಿಯಾಗಿಲ್ಲ
9. ಶ್ರೀಲಂಕಾ: ದಿನಾಂಕ ಇನ್ನೂ ನಿಗದಿಯಾಗಿಲ್ಲ
10. ನ್ಯೂಜಿಲೆಂಡ್: ಈಗಾಗಲೇ ಪ್ರಕಟಿಸಿದೆ

Story first published: Wednesday, April 10, 2019, 17:44 [IST]
Other articles published on Apr 10, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+