World Cup 2023: ಬಾಬರ್ ಅಜಂ ಪಾಕಿಸ್ತಾನ ತಂಡದ ನಾಯಕತ್ವ ತ್ಯಜಿಸಿದರೆ ಒಳ್ಳೆಯದು; ಶೋಯೆಬ್ ಮಲಿಕ್
ಶನಿವಾರ, ಅಕ್ಟೋಬರ್ 14ರಂದು ನಡೆದ 2023ರ ಐಸಿಸಿ ಏಕದಿನ ವಿಶ್ವಕಪ್‌ನ ಅತ್ಯಂತ ನಿರೀಕ್ಷಿತ ಪಂದ್ಯಗಳಲ್ಲಿ ಒಂದಾದ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈ-ವೋಲ್ಟೇಜ್ ಪಂದ್ಯವು ದೊಡ್ಡ ಸುದ್ದಿಯಾಗಿ ವಿಶ್ವದ ಗಮನ ಸೆಳೆಯಿತು.
ವಿಶ್ವದ ಅತಿ ದೊಡ್ಡ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಏಷ್ಯಾದ ದೈತ್ಯ ತಂಡಗಳಾದ ಭಾರತ ಮತ್ತು ಪಾಕಿಸ್ತಾನ ಪಂದ್ಯವು ಜಗತ್ತಿನಾದ್ಯಂತ ನಿರೀಕ್ಷೆ ಹುಟ್ಟಿಸಿತ್ತು. ಆದರೆ, ಪಂದ್ಯವು ಏಕಪಕ್ಷೀಯವಾಗಿ ಅಂತ್ಯಗೊಂಡಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 192 ರನ್‌ಗಳ ಅಲ್ಪ ಮೊತ್ತಕ್ಕೆ ಆಲೌಟ್ ಆಯಿತು. ಸುಲಭ ಗುರಿ ಬೆನ್ನಟ್ಟಿದ ಭಾರತ ಕೇವಲ 30.3 ಓವರ್‌ಗಳಲ್ಲಿ 3 ವಿಕೆಟ್‌ಗಳನ್ನು ಕಳೆದುಕೊಂಡು ಗೆಲುವಿನ ಗಡಿ ದಾಟಿತು.
ಎರಡು ತಿಂಗಳ ಅವಧಿಯಲ್ಲಿ ಭಾರತ ತಂಡದ ವಿರುದ್ಧ ಪಾಕಿಸ್ತಾನ ತಂಡಕ್ಕೆ ಎರಡನೇ ಸೋಲು ಇದಾಗಿದೆ. ಸೆಪ್ಟೆಂಬರ್‌ನಲ್ಲಿ ನಡೆದ 2023ರ ಏಷ್ಯಾ ಕಪ್‌ನಲ್ಲಿ "ಮೆನ್ ಇನ್ ಗ್ರೀನ್' ರೋಹಿತ್ ಶರ್ಮಾ ನಾಯಕತ್ವದ ಮೆನ್ ಇನ್ ಬ್ಲೂ ವಿರುದ್ಧ ಸೋಲು ಕಂಡಿತ್ತು.

2023ರ ವಿಶ್ವಕಪ್‌ನಲ್ಲಿ ಏಳು ವಿಕೆಟ್‌ಗಳ ಸೋಲಿನ ನಂತರ, ಬಾಬರ್ ಅಜಂ ಅವರ ನಾಯಕತ್ವದ ಭವಿಷ್ಯವು ದೊಡ್ಡ ಚರ್ಚೆಯ ವಿಷಯವಾಗಿದೆ. 29 ವರ್ಷದ ಆಟಗಾರನಿಗೆ ಇನ್ನಷ್ಟು ಸಮಯ ನೀಡಬೇಕು ಎಂದು ಕೆಲವರು ಭಾವಿಸಿದರೆ, ಬಾಬರ್ ಅಜಂ ಪಾಕಿಸ್ತಾನ ತಂಡದ ನಾಯಕನಾಗಿ ಉತ್ತಮ ನಾಯಕತ್ವ ಪ್ರದರ್ಶಿಸಿದ್ದಾನೆ ಕೆಲವರು ತಿಳಿಸಿದ್ದಾರೆ.
ಇದೀಗ ಪಾಕಿಸ್ತಾನ ಮಾಜಿ ಆಲ್‌ರೌಂಡರ್ ಶೋಯೆಬ್ ಮಲಿಕ್ ಅವರು ಭಾರತ ವಿರುದ್ಧ ಸೋಲಿನ ನಂತರ, ಬಾಬರ್ ಅಜಂ ಪಾಕಿಸ್ತಾನ ತಂಡದ ನಾಯಕತ್ವವನ್ನು ತೊರೆಯಬೇಕು ಎಂದು ಹೇಳಿದರು.
ಏಕೆಂದರೆ, ಬಾಬರ್ ಅಜಂ ಬ್ಯಾಟರ್ ಆಗಿ ತಂಡಕ್ಕೆ ಹೆಚ್ಚಿನ ಕೊಡುಗೆ ನೀಡಬಹುದು. ಇದು ಪಾಕಿಸ್ತಾನ ತಂಡಕ್ಕೆ ಅದ್ಭುತಗಳನ್ನು ಮಾಡಬಹುದು ಎಂದು ಎಂದು ಪಾಕಿಸ್ತಾನ ತಂಡದ ಮಾಜಿ ನಾಯಕ ಶೋಯೆಬ್ ಮಲಿಕ್ ಗಮನಸೆಳೆದರು.
"ನೋಡಿ, ನಾನು ಈ ಬಗ್ಗೆ ನನ್ನ ಪ್ರಾಮಾಣಿಕ ಅಭಿಪ್ರಾಯವನ್ನು ನೀಡುತ್ತೇನೆ. ಬಾಬರ್ ಅಜಂ ನಾಯಕತ್ವವನ್ನು ತೊರೆಯಬೇಕು ಎಂದು ನಾನು ಈಗಾಗಲೇ ಹಿಂದಿನ ಸಂದರ್ಶನಗಳಲ್ಲಿ ಹೇಳಿದ್ದೇನೆ, ಇದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದೆ. ಆಟಗಾರನಾಗಿ ಬಾಬರ್ ಅಜಂ ತನಗಾಗಿ ಮತ್ತು ತಂಡಕ್ಕಾಗಿ ಅದ್ಭುತಗಳನ್ನು ಮಾಡಬಹುದು," ಎಂದು ಶೋಯೆಬ್ ಮಲಿಕ್ ತಿಳಿಸಿದರು.
"ಇದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದೆ ಮತ್ತು ನಾವು ಇಂದು ಭಾರತದ ವಿರುದ್ಧದ ಪಂದ್ಯವನ್ನು ದೊಡ್ಡ ಅಂತರದಿಂದ ಸೋತಿದ್ದೇವೆ. ತಂಡದಲ್ಲಿ ಸಂಘಟಿತ ಹೋರಾಟದ ಕೊರತೆ ಇತ್ತು," ಎಂದು ಶೋಯೆಬ್ ಮಲಿಕ್ ಎ ಸ್ಪೋರ್ಟ್ಸ್‌ನೊಂದಿಗೆ ಮಾತನಾಡುತ್ತಾ ಹೇಳಿದರು.
ನಾಯಕನಾಗಿ ಬಾಬರ್ ಅಜಂ ಬಾಕ್ಸ್ ಹೊರಗೆ ಯೋಚಿಸುವುದಿಲ್ಲ: ಶೋಯೆಬ್ ಮಲಿಕ್
ಇದಲ್ಲದೆ, ಬಾಬರ್ ಅಜಂ ಅವರು ದೀರ್ಘಕಾಲದವರೆಗೆ ತಂಡವನ್ನು ಮುನ್ನಡೆಸಿದ್ದರೂ, ಒತ್ತಡದಲ್ಲಿದ್ದಾಗ ಬಾಕ್ಸ್ ಹೊರಗೆ ಯೋಚಿಸದ ವ್ಯಕ್ತಿ ಎಂದು ಶೋಯೆಬ್ ಮಲಿಕ್ ತಿಳಿಸಿದರು.
ಇದೇ ವೇಳೆ ಶೋಯೆಬ್ ಮಲಿಕ್ ಅವರು ಯಾವುದೇ ವೈಯಕ್ತಿಕ ಅಜೆಂಡಾ ಹೊಂದಿಲ್ಲ ಎಂದು ಹೇಳುವುದನ್ನು ಮರೆಯಲಿಲ್ಲ. ಆದರೆ, ಇದು ಬಾಬರ್ ಅಜಂ ಬಗ್ಗೆ ತಮ್ಮ ದೀರ್ಘಾವಧಿಯ ಅವಲೋಕನವಾಗಿದೆ. ಇದಲ್ಲದೆ, ಬಾಬರ್ ಅಜಂ ಬ್ಯಾಟಿಂಗ್ ಕೌಶಲ್ಯವನ್ನು ಅವರ ನಾಯಕತ್ವದ ಅಂಶಗಳೊಂದಿಗೆ ವಿಲೀನಗೊಳಿಸಬಾರದು ಎಂದು ಮಾಜಿ ನಾಯಕ ಪುನರುಚ್ಚರಿಸಿದರು.
"ಬಾಬರ್ ಅಜಂ ಒಬ್ಬ ನಾಯಕನಾಗಿ, ಬಾಕ್ಸ್ ಹೊರಗೆ ಯೋಚಿಸುವುದಿಲ್ಲ ಎಂದು ನಾನು ಭಾವಿಸುತ್ತೇನೆ. ಅವೆರಡೂ ಭಿನ್ನವಾಗಿರುವುದರಿಂದ ಅವರ ನಾಯಕತ್ವವನ್ನು ಅವರ ಬ್ಯಾಟಿಂಗ್ ಕೌಶಲ್ಯದೊಂದಿಗೆ ಬೆರೆಸಬಾರದು. ಅವರು ಬಹಳ ಸಮಯದಿಂದ ನಾಯಕರಾಗಿದ್ದಾರೆ. ಆದರೆ ಅವರು ತಮ್ಮನ್ನು ತಾವು ಸುಧಾರಿಸಿಕೊಳ್ಳಲು ಸಾಧ್ಯವಾಗಲಿಲ್ಲ," ಎಂದು 41 ವರ್ಷದ ಶೋಯೆಬ್ ಮಲಿಕ್ ಅಭಿಪ್ರಾಯಪಟ್ಟರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications