For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್ ಸೋಲಿನ ಹತಾಶೆ: ರೋಹಿತ್ ಶರ್ಮಾ ಟಾಸ್ ಪ್ಲಿಪ್ಪಿಂಗ್ ಬಗ್ಗೆ ಅನುಮಾನವಿದೆ ಎಂದ ಪಾಕ್ ಮಾಜಿ ಕ್ರಿಕೆಟಿಗ

2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಯ ಅವಧಿಯಲ್ಲಿ ಅನೇಕ ಪಿತೂರಿ ಆರೋಪಗಳು ಕೇಳಿಬಂದಿವೆ. ಅದರಲ್ಲಿ ಹೆಚ್ಚಿನವು ಹುಟ್ಟಿಕೊಂಡಿದ್ದು ಪಾಕಿಸ್ತಾನದಲ್ಲಿ ಎಂಬುದು ಸೋಜಿಗ. ವಿಶ್ವಕಪ್ ಸೋಲಿನ ಹತಾಶೆಯಲ್ಲಿ ಮುಳುಗಿರುವ ಪಾಕಿಸ್ತಾನ ಮತ್ತು ಅಲ್ಲಿನ ಮಾಜಿ ಕ್ರಿಕೆಟಿಗರಿಗೆ ಅನುಮಾನಗಳು ತಲೆಹೊಕ್ಕಿವೆ.

ಈ ಮೊದಲು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಹಸನ್ ರಝಾ ಅವರು ಪವರ್‌ಪ್ಲೇನಲ್ಲಿ ವಿಕೆಟ್‌ಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುವ ವಿಭಿನ್ನ ಕ್ರಿಕೆಟ್ ಚೆಂಡುಗಳನ್ನು ಐಸಿಸಿ ಭಾರತ ತಂಡಕ್ಕೆ ನೀಡುತ್ತಿದೆ ಎಂದು ಈ ಹಿಂದೆ ಅನುಮಾನಗಳನ್ನು ವ್ಯಕ್ತಪಡಿಸಿದ್ದರು.

rohit-sharmas-coin-toss-technique

ಇಂತಹ ಆಧಾರ ರಹಿತ ಆರೋಪಗಳಿಗಾಗಿ ಪಾಕಿಸ್ತಾನ ದೇಶದಲ್ಲೇ ಸೇರಿದಂತೆ ಭಾರತ ಮತ್ತು ಇತರೆಡೆ ಅಪಹಾಸ್ಯಕ್ಕೀಡಾಗಿದ್ದರು. ಕ್ರಿಕೆಟ್ ಲೆಜೆಂಡ್‌ಗಳಲ್ಲಿ ಒಬ್ಬರಾದ ಪಾಕಿಸ್ತಾನದ ಮಾಜಿ ನಾಯಕ ವಾಸಿಂ ಅಕ್ರಮ್, ಇಂತಹ ಹೇಳಿಕೆಗಳಿಂದ ಇಡೀ ಪಾಕಿಸ್ತಾನವನ್ನು ಮುಜುಗರಕ್ಕೀಡು ಮಾಡದಂತೆ ಹಸನ್ ರಾಝಾ ಅವರ ಹೆಸರನ್ನು ಬಳಸದೆ ವಿನಂತಿಸಿದ್ದರು.

ಪ್ರಸಕ್ತ ವಿಶ್ವಕಪ್‌ನಲ್ಲಿ ಭಾರತದ ಪರ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿರುವ ಮೊಹಮ್ಮದ್ ಶಮಿ ಅವರು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಸನ್ ರಾಝಾ ಅವರನ್ನು ಹಿಗ್ಗಾಮುಗ್ಗಾ ಟೀಕಿಸಿದ್ದರು.

ಪಾಕಿಸ್ತಾನದಿಂದಲೇ ಬಂದಿರುವ ಮತ್ತು ಕ್ರಿಕೆಟ್ ವಿಶ್ಲೇಷಣೆಯಲ್ಲಿ ಸ್ವಲ್ಪ ಕ್ರಿಕೆಟ್ ಅರ್ಥ ಮಾಡಿಕೊಂಡಿರುವ ವಾಸಿಂ ಅಕ್ರಮ್ ಅವರನ್ನು ಆಲಿಸುವಂತೆ ಹಸನ್ ರಾಝಾ ಅವರನ್ನು ಮೊಹಮ್ಮದ್ ಶಮಿ ತರಾಟೆಗೆ ತೆಗೆದುಕೊಂಡಿದ್ದರು.

ಇಂತಹ ಆಧಾರರಹಿತ ಆರೋಪಗಳು ಇನ್ನೂ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ . ಅದು ಮರೆಯಾಗುವ ಮುನ್ನವೇ, ಮೊತ್ತಬ್ಬ ಪಾಕಿಸ್ತಾನ ಮಾಜಿ ಕ್ರಿಕೆಟಿಗನಿಗೆ ಹೊಸದೊಂದು ಅನುಮಾನ ಹುಟ್ಟಿಕೊಂಡಿದೆ.

ಭಾರತ ತಂಡದ ನಾಯಕ ರೋಹಿತ್ ಶರ್ಮಾ ನಾಣ್ಯಗಳನ್ನು ಹೇಗೆ ತಿರುಗಿಸುತ್ತಾರೆ ಎಂಬ ವಿಡಿಯೋವನ್ನು ಕೆಲವು ಪಾಕಿಸ್ತಾನ ತಂಡದ ಅಭಿಮಾನಿಗಳು ಪೋಸ್ಟ್ ಮಾಡಲು ಪ್ರಾರಂಭಿಸಿದರು. ರೋಹಿತ್ ಶರ್ಮಾ ನಾಣ್ಯವನ್ನು ಮೇಲೆ ತೂರಿದಾಗ, ಅದು ಎದುರಾಳಿ ತಂಡದ ನಾಯಕ ಮತ್ತು ಮ್ಯಾಚ್ ರೆಫರಿಯಿಂದ ದೂರ ಬೀಳುತ್ತದೆ ಎಂದು ವಿಡಿಯೋ ತೋರಿಸುತ್ತದೆ.

rohit-sharmas-coin-toss-technique

ನಾಣ್ಯ ಯಾವ ಮುಖ ಬಿದ್ದಿದೆ ಎಂಬುದನ್ನು ಎದುರಾಳಿ ನಾಯಕ ನೋಡಬಾರದು ಮತ್ತು ರೆಫರಿಗೆ ಭಾರತದ ಪರವಾಗಿಸುವುದು ಸುಲಭವಾಗುತ್ತದೆ ಎಂಬ ಉದ್ದೇಶದಿಂದ ರೋಹಿತ್ ಶರ್ಮಾ ಹೀಗೆ ಮಾಡಿದ್ದಾರೆ ಎಂಬುದು ಪಾಕಿಸ್ತಾನ ಅಭಿಮಾನಿಗಳ ಆರೋಪ.

ಪಾಕಿಸ್ತಾನ ತಂಡದ ಪರ 26 ಟೆಸ್ಟ್ ಮತ್ತು 27 ಏಕದಿನ ಪಂದ್ಯಗಳನ್ನು ಆಡಿರುವ ಸಿಕಂದರ್ ಬಖ್ತ್ ಜಿಯೋ ನ್ಯೂಸ್‌ನಲ್ಲಿ ಮಾತನಾಡುವಾಗ ಟಾಸ್ ತೂರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದರು.

ಸಾಮಾಜಿಕ ಮಾಧ್ಯಮ ಎಕ್ಸ್‌ (ಟ್ವಿಟ್ಟರ್) ನಲ್ಲಿ ಪೋಸ್ಟ್ ಮಾಡಿದ್ದು, "ವಿಶ್ವಕಪ್‌ನ ಇತರೆ ನಾಯಕರಿಗೆ ಹೋಲಿಸಿದರೆ, ರೋಹಿತ್ ಶರ್ಮಾ ಟಾಸ್‌ನಲ್ಲಿ ನಾಣ್ಯವನ್ನು ತೂರುವ ರೀತಿ ತುಂಬಾ ವಿಚಿತ್ರವಾಗಿದೆ. ಎದುರಾಳಿ ತಂಡದ ನಾಯಕರು ನೋಡಬಾರದು ಎಂಬ ಕಾರಣಕ್ಕಾಗಿಯೇ? ಅಥವಾ ಯಾವುದಾದರೂ ಕಾರಣವಿದೆಯೇ?," ಎಂದು ಸಿಕಂದರ್ ಬಖ್ತ್ ಅವರು ಇದರ ಬಗ್ಗೆ ವಿವರಣೆ ಪಡೆಯಲು ಬಿಸಿಸಿಐ ಅನ್ನು ಟ್ಯಾಗ್ ಮಾಡಿದ್ದಾರೆ.

rohit-sharmas-coin-toss-technique

ರೋಹಿತ್ ಶರ್ಮಾ ನಾಣ್ಯವನ್ನು ತೂರಿದರೂ ಎಲ್ಲಾ ಸಂದರ್ಭಗಳಲ್ಲಿಯೂ ಟಾಸ್ ಗೆದ್ದಿಲ್ಲ ಎಂಬುದಂತೂ ಸತ್ಯ. ಇದು ಟಾಸ್ ಮಾಡುವುದು ರೋಹಿತ್ ಶರ್ಮಾ ಅವರ ಶೈಲಿಯಾಗಿದೆ.

ಟಾಸ್‌ನ ಮೇಲೆ ತನ್ನ ಆರೋಪ ಮಾಡುವ ಪ್ರಾರಂಭದಲ್ಲಿ ಸಿಕಂದರ್ ಬಖ್ತ್ ಅವರು ಶೋ ನಿರೂಪಕನಿಗೆ ತಾನು ಕಿಡಿಗೇಡಿತನದ ಉರ್ದು ಪದವಾದ 'ಶರಾರತ್' ಮಾಡಲು ಬಯಸುವುದಾಗಿ ಹೇಳುತ್ತಾನೆ. ಸ್ಪಷ್ಟವಾಗಿ, ಅವರು ಆಟದ ಉತ್ತಮ ಒಳನೋಟಗಳಿಗಿಂತ, ಹೆಚ್ಚಾಗಿ ಪ್ರೇಕ್ಷಕರಿಗೆ ತಲುಪುತ್ತಿನೆಂದು ಸಿಕಂದರ್ ಬಖ್ತ್‌ಗೆ ತಿಳಿದಿದೆ.

ಈ ಹಿಂದೆ, ಪಾಕಿಸ್ತಾನ ತಂಡದ ಮಾಜಿ ನಾಯಕ ಮೊಹಮ್ಮದ್ ಹಫೀಜ್ ಕೂಡ ವಿಶ್ವಕಪ್ ವೇಳೆ ಟಾಸ್ ತೋರಿಸಲು ಮೈದಾನದಲ್ಲಿರುವ ಸ್ಪೈಡರ್‌ಕ್ಯಾಮ್ ಅನ್ನು ಬಳಸಬೇಕೆಂದು ಪಾಕಿಸ್ತಾನ ಟಿವಿ ಚಾನೆಲ್‌ನಲ್ಲಿ ಮಾತನಾಡಿದ್ದರು.

ನಾನು ಯಾರನ್ನೂ ಅನುಮಾನಿಸುತ್ತಿಲ್ಲ. ಆದರೆ ನಾಣ್ಯ ಟಾಸ್‌ನ ಫಲಿತಾಂಶವನ್ನು ಇನ್ನಷ್ಟು ಪಾರದರ್ಶಕತೆಗಾಗಿ ಇಡೀ ಜಗತ್ತಿಗೆ ತೋರಿಸಬೇಕು ಮೊಹಮ್ಮದ್ ಹಫೀಜ್ ಹೇಳಿದ್ದರು.

Story first published: Thursday, November 16, 2023, 15:01 [IST]
Other articles published on Nov 16, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+