ICC World Cup 2023 Qualifiers: ಸೂಪರ್ 6 ಪಂದ್ಯಗಳನ್ನು ನಿಗದಿಪಡಿಸಿದ ಐಸಿಸಿ; ಭಾರತದ ಟಿಕೆಟ್ ಯಾರಿಗೆ?
ಮಂಗಳವಾರ, ಜೂನ್ 27ರಂದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯು (ಐಸಿಸಿ) ಮುಂಬೈನಲ್ಲಿ 2023ರ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಪಂದ್ಯಾವಳಿಗೆ 100 ದಿನಗಳು ಬಾಕಿ ಇರುವಾಗ ಅಂತಿಮ ವೇಳಾಪಟ್ಟಿಯನ್ನು ಬಿಡುಗಡೆಗೊಳಿಸಿದೆ.
ಅಕ್ಟೋಬರ್ 5ರಿಂದ ನವೆಂಬರ್ 19ರವರೆಗೆ ಭಾರತದ ಪ್ರಮುಖ 10 ಸ್ಥಳಗಳಲ್ಲಿ ನಡೆಯಲಿರುವ ಪಂದ್ಯಾವಳಿಯಲ್ಲಿ 10 ತಂಡಗಳು ಭಾಗವಹಿಸಲಿದ್ದು, ಫೈನಲ್ ಸೇರಿದಂತೆ 48 ಪಂದ್ಯಗಳನ್ನು ಒಳಗೊಂಡಿರುತ್ತದೆ.

ಇನ್ನು ಜಿಂಬಾಬ್ವೆಯಲ್ಲಿ ನಡೆಯುತ್ತಿರುವ 2023ರ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ ಅರ್ಹತಾ ಸುತ್ತಿನ ಸೂಪರ್-6 ಪಂದ್ಯಗಳನ್ನು ಐಸಿಸಿ ನಿಗದಿಪಡಿಸಿದ್ದು, ಆರು ತಂಡಗಳು ಭಾರತದಲ್ಲಿ ನಡೆಯುವ 2023ರ ವಿಶ್ವಕಪ್ ಮುಖ್ಯ ವೇದಿಕೆಗೆ ಅಂತಿಮ ಎರಡು ಸ್ಥಾನಗಳಿಗಾಗಿ ಸ್ಪರ್ಧೆ ನಡೆಸಲಿವೆ.
ಆತಿಥೇಯ ಜಿಂಬಾಬ್ವೆ, ವೆಸ್ಟ್ ಇಂಡೀಸ್ ಮತ್ತು ನೆದರ್ಲ್ಯಾಂಡ್ಸ್ ತಂಡಗಳು ಎ ಗುಂಪಿನಿಂದ ಮೊದಲ ಮೂರು ಸ್ಥಾನಗಳನ್ನು ಪಡೆದುಕೊಂಡಿದ್ದರೆ, ಶ್ರೀಲಂಕಾ, ಓಮನ್ ಮತ್ತು ಸ್ಕಾಟ್ಲೆಂಡ್ ತಂಡಗಳು ಬಿ ಗುಂಪಿನಿಂದ ಸೂಪರ್-6 ಹಂತಕ್ಕೆ ಮುನ್ನಡೆ ಪಡೆದಿವೆ.
ಗುಂಪು ಹಂತದಲ್ಲಿ ಪಡೆದಿರುವ ಎಲ್ಲಾ ಅಂಕಗಳನ್ನು ಮುಂದಿನ ಹಂತಕ್ಕೂ ಸಾಗಿಸಲಾಗುತ್ತದೆ. ಸೂಪರ್-6 ಹಂತದಲ್ಲಿ ಪ್ರತಿ ತಂಡವು ಗುಂಪು ಹಂತದಲ್ಲಿ ಮುಖಾಮುಖಿಯಾಗದ ತಂಡಗಳನ್ನು ಎದುರಿಸಲಿದೆ. ನಂತರ ಅಗ್ರ ಎರಡು ತಂಡಗಳು ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ 2023ಕ್ಕೆ ಭಾರತದ ಟಿಕೆಟ್ ಖಚಿತಪಡಿಸಿಕೊಳ್ಳಲಿವೆ.
ಜಿಂಬಾಬ್ವೆ ಮತ್ತು ಶ್ರೀಲಂಕಾ ತಂಡಗಳು ಸೂಪರ್-6 ಹಂತದಲ್ಲಿ ತಲಾ ನಾಲ್ಕು ಅಂಕಗಳನ್ನು ತೆಗೆದುಕೊಳ್ಳುತ್ತವೆ. ಇದೆ ವೇಳೆ ಸ್ಕಾಟ್ಲೆಂಡ್ ಮತ್ತು ನೆದರ್ಲ್ಯಾಂಡ್ಸ್ ತಂಡಗಳು ಮುಂದಿನ ಹಂತಕ್ಕೆ ಎರಡು ಅಂಕಗಳನ್ನು ತೆಗೆದುಕೊಳ್ಳಲಿವೆ. ಸೂಪರ್ ಸಿಕ್ಸ್ ಹಂತ ತಲುಪದ ನಾಲ್ಕು ತಂಡಗಳು ಜಿಂಬಾಬ್ವೆಯಲ್ಲೇ ಉಳಿದು ಪ್ಲೇಆಫ್‌ನಲ್ಲಿ ಸ್ಪರ್ಧಿಸಲಿವೆ.
2023ರ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ ಕ್ವಾಲಿಫೈಯರ್‌ನ ಸೂಪರ್-6 ಮತ್ತು ಪ್ಲೇಆಫ್ ಪಂದ್ಯಗಳು ಸ್ಥಳೀಯ ಕಾಲಮಾನ ಬೆಳಿಗ್ಗೆ 9 ಗಂಟೆಗೆ ಪ್ರಾರಂಭವಾಗುತ್ತವೆ.

ಸೂಪರ್-6 ಹಂತದ ಪಂದ್ಯಗಳು, ದಿನಾಂಕ ಮತ್ತು ಸ್ಥಳ:
| ಕ್ರಮ ಸಂಖ್ಯೆ | ದಿನಾಂಕ | ಪಂದ್ಯ | ಸ್ಥಳ |
| 1 | ಜೂನ್ 29 | ಜಿಂಬಾಬ್ವೆ vs ಓಮನ್ (ಸೂಪರ್-6) | ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್ |
| 2 | ಜೂನ್ 30 | ಶ್ರೀಲಂಕಾ vs ನೆದರ್ಲ್ಯಾಂಡ್ಸ್ (ಸೂಪರ್-6) | ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್ |
| 3 | ಐರ್ಲೆಂಡ್ vs ಯುಎಸ್ಎ (ಪ್ಲೇಆಫ್) | ತಕಾಶಿಂಗಾ ಕ್ರಿಕೆಟ್ ಕ್ಲಬ್ | |
| 4 | ಜುಲೈ 1 | ಸ್ಕಾಟ್ಲೆಂಡ್ vs ವೆಸ್ಟ್ ಇಂಡೀಸ್ (ಸೂಪರ್-6) | ಹರಾರೆ ಸ್ಪೋರ್ಟ್ಸ್ ಕ್ಲಬ್ |
| 5 | ಜುಲೈ 2 | ಜಿಂಬಾಬ್ವೆ vs ಶ್ರೀಲಂಕಾ (ಸೂಪರ್-6) | ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್ |
| 6 | ನೇಪಾಳ vs ಯುಎಇ (ಪ್ಲೇಆಫ್) | ತಕಾಶಿಂಗಾ ಕ್ರಿಕೆಟ್ ಕ್ಲಬ್ | |
| 7 | ಜುಲೈ 3 | ನೆದರ್ಲ್ಯಾಂಡ್ಸ್ vs ಓಮನ್ (ಸೂಪರ್-6) | ಹರಾರೆ ಸ್ಪೋರ್ಟ್ಸ್ ಕ್ಲಬ್ |
| 8 | ಜುಲೈ 4 | ಜಿಂಬಾಬ್ವೆ vs ಸ್ಕಾಟ್ಲೆಂಡ್ (ಸೂಪರ್-6) | ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್ |
| 9 | 7ನೇ ಸ್ಥಾನಿ vs 8ನೇ ಸ್ಥಾನಿ (ಪ್ಲೇಆಫ್) | ತಕಾಶಿಂಗಾ ಕ್ರಿಕೆಟ್ ಕ್ಲಬ್ | |
| 10 | ಜುಲೈ 5 | ವೆಸ್ಟ್ ಇಂಡೀಸ್ vs ಓಮನ್ (ಸೂಪರ್-6) | ಹರಾರೆ ಸ್ಪೋರ್ಟ್ಸ್ ಕ್ಲಬ್ |
| 11 | ಜುಲೈ 6 | ಸ್ಕಾಟ್ಲೆಂಡ್ vs ನೆದರ್ಲ್ಯಾಂಡ್ಸ್ (ಸೂಪರ್-6) | ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್ |
| 12 | 9ನೇ ಸ್ಥಾನಿ vs 10ನೇ ಸ್ಥಾನಿ (ಪ್ಲೇಆಫ್) | ತಕಾಶಿಂಗಾ ಕ್ರಿಕೆಟ್ ಕ್ಲಬ್ | |
| 13 | ಜುಲೈ 7 | ಶ್ರೀಲಂಕಾ vs ವೆಸ್ಟ್ ಇಂಡೀಸ್ (ಸೂಪರ್-6) | ಹರಾರೆ ಸ್ಪೋರ್ಟ್ಸ್ ಕ್ಲಬ್ |
| 14 | ಜುಲೈ 9 | ಫೈನಲ್ | ಹರಾರೆ ಸ್ಪೋರ್ಟ್ಸ್ ಕ್ಲಬ್ |
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications