For Quick Alerts
ALLOW NOTIFICATIONS  
For Daily Alerts
 

World Cup 2023: ಶಫೀಕ್, ರಿಜ್ವಾನ್ ಭರ್ಜರಿ ಶತಕ; ಶ್ರೀಲಂಕಾ ವಿರುದ್ಧ ಬೃಹತ್ ಗುರಿ ಬೆನ್ನಟ್ಟಿ ದಾಖಲೆ ಬರೆದ ಪಾಕಿಸ್ತಾನ

ಮಂಗಳವಾರ, ಅಕ್ಟೋಬರ್ 10ರಂದು ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ 2023ರ ಐಸಿಸಿ ಏಕದಿನ ವಿಶ್ವಕಪ್‌ನ ಎಂಟನೇ ಪಂದ್ಯದಲ್ಲಿ ಪಾಕಿಸ್ತಾನ ತಂಡವು ಶ್ರೀಲಂಕಾ ವಿರುದ್ಧ ಬೃಹತ್ ಗುರಿ ಬೆನ್ನಟ್ಟಿ ವಿಶ್ವಕಪ್‌ನಲ್ಲಿ ದಾಖಲೆ ಬರೆದಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡ ಕುಸಲ್ ಮೆಂಡೀಸ್ ಮತ್ತು ಸದೀರ ಸಮರವಿಕ್ರಮ ಅವರ ಅಮೋಘ ಶತಕದ ನೆರವಿನಿಂದ ತಂಡ ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 344 ರನ್ ಕಲೆಹಾಕಿತ್ತು.

ICC World Cup 2023: Shafique, Rizwan Helps To Pakistan Defeat Sri Lanka By 6 Wickets in 8th Match

345 ರನ್‌ಗಳ ಬೃಹತ್ ಗುರಿ ಬೆನ್ನತ್ತಿದ ಪಾಕಿಸ್ತಾನ ತಂಡ 48.2 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು ನಿಗದಿತ ಗೆಲುವಿನ ಗುರಿ ತಲುಪಿ 6 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿತು.

ಬೃಹತ್ ಮೊತ್ತದ ಚೇಸಿಂಗ್‌ನಲ್ಲಿ ಪಾಕಿಸ್ತಾನ ತಂಡದ ಪರ ಮೊಹಮ್ಮದ್ ರಿಜ್ವಾನ್ ಅಜೇಯ 131 ರನ್ ಬಾರಿಸಿದರೆ, ಅಬ್ದುಲ್ಲಾ ಶಫೀಕ್ 113 ರನ್ ಗಳಿಸಿದರು. ಈ ಮೂಲಕ ಪಾಕಿಸ್ತಾನ ತಂಡ ಶ್ರೀಲಂಕಾವನ್ನು 6 ವಿಕೆಟ್‌ಗಳಿಂದ ಸೋಲಿಸಿದ್ದಲ್ಲದೇ, ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಅತ್ಯಧಿಕ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿದ ತಂಡವೆನಿಸಿತು.

ಇದಕ್ಕೂ ಮೊದಲು ಶ್ರೀಲಂಕಾ ತಂಡದ ಕುಸಲ್ ಮೆಂಡಿಸ್ ಮತ್ತು ಸದೀರ ಸಮರವಿಕ್ರಮ ಅವರ ಅಬ್ಬರದ ಶತಕಗಳ ಮೂಲಕ ವಿಶ್ವಕಪ್‌ನ ಒಂದೇ ಪಂದ್ಯದಲ್ಲಿ ಎರಡು ತಂಡಗಳ ಪರ ನಾಲ್ಕು ಶತಕಗಳು ದಾಖಲಾಗಿದ್ದು ಇದೇ ಮೊದಲ ನಿದರ್ಶನವಾಗಿದೆ.

ICC World Cup 2023: Shafique, Rizwan Helps To Pakistan Defeat Sri Lanka By 6 Wickets in 8th Match

ಬೃಹತ್ ಮೊತ್ತದ ಗುರಿಯಲ್ಲಿ ಪಾಕಿಸ್ತಾನ ತಂಡದ ಇನ್ನಿಂಗ್ಸ್ ಆರಂಭಿಸಿದ ಅಬ್ದುಲ್ಲಾ ಶಫೀಕ್ ಮತ್ತು ಇಮಾಮ್-ಉಲ್-ಹಕ್ ಉತ್ತಮ ಆರಂಭ ನೀಡುವಲ್ಲಿ ವಿಫಲರಾದರು. ಏಕೆಂದರೆ ಇಮಾಮ್-ಉಲ್-ಹಕ್ ಕೇವಲ 12 ರನ್ ಗಳಿಸಿ ಔಟಾದರು. ನಂತರ ಬಂದ ನಾಯಕ ಬಾಬರ್ ಅಜಂ ಕೂಡ 10 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.

37 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ವೇಳೆ ಜೊತೆಗೂಡಿದ ಅಬ್ದುಲ್ಲಾ ಶಫೀಕ್ ಮತ್ತು ಮೊಹಮ್ಮದ್ ರಿಜ್ವಾನ್ 3ನೇ ವಿಕೆಟ್‌ಗೆ 176 ರನ್‌ಗಳ ಜೊತೆಯಾಟದ ಮೂಲಕ ಪಾಕಿಸ್ತಾನ ತಂಡವನ್ನು ಗೆಲುವಿನ ಹಳಿಗೆ ತಂದರು.

ಅಬ್ದುಲ್ಲಾ ಶಫೀಕ್ 103 ಎಸೆತಗಳಲ್ಲಿ 10 ಬೌಂಡರಿ ಹಾಗೂ 3 ಭರ್ಜರಿ ಸಿಕ್ಸರ್‌ಗಳ ಮೂಲಕ 113 ರನ್ ಗಳಿಸಿದರೆ, ಮೊಹಮ್ಮದ್ ರಿಜ್ವಾನ್ 121 ಎಸೆತಗಳಲ್ಲಿ 8 ಬೌಂಡರಿ ಹಾಗೂ 3 ಸಿಕ್ಸರ್ ಸಮೇತ 131 ರನ್ ಬಾರಿಸಿ ಗೆಲುವಿನ ರೂವಾರಿಯಾದರು.

ICC World Cup 2023: Shafique, Rizwan Helps To Pakistan Defeat Sri Lanka By 6 Wickets in 8th Match

ಉಳಿದಂತೆ ಸೌದ್ ಶಕೀಲ್ 31 ರನ್ ಗಳಿಸಿದರೆ, ಇಫ್ತಿಕರ್ ಅಹ್ಮದ್ 4 ಬೌಂಡರಿಗಳ ಮೂಲಕ ಅಜೇಯ 22 ರನ್ ಗಳಿಸಿದರು. ಬೌಲಿಂಗ್‌ನಲ್ಲಿ ಶ್ರೀಲಂಕಾ ತಂಡದ ಪರ ದಿಲ್ಶನ್ ಮಧುಶಂಕ 9.2 ಓವರ್‌ಗಳಲ್ಲಿ 60 ರನ್ ನೀಡಿ 2 ವಿಕೆಟ್ ಪಡೆದರೆ, ಮಹೀಶ್ ತೀಕ್ಷಣ ಮತ್ತು ಮತೀಶ ಪತಿರಾಣ ತಲಾ ಒಂದೊಂದು ವಿಕೆಟ್ ಪಡೆದರು.

ಇದಕ್ಕೂ ಮುನ್ನ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ಕುಸಲ್ ಮೆಂಡೀಸ್ ಮತ್ತು ಸದೀರ ಸಮರವಿಕ್ರಮ ಅವರ ಅಮೋಘ ಶತಕದ ನೆರವಿನಿಂದ ತಂಡ ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 344 ರನ್ ಕಲೆಹಾಕಿದ್ದು, ಪಾಕಿಸ್ತಾನ ತಂಡಕ್ಕೆ 345 ರನ್‌ಗಳ ಗುರಿ ನೀಡಿದೆ.

ಶ್ರೀಲಂಕಾದ ಇನ್ನಿಂಗ್ಸ್ ಆರಂಭಿಸಿದ ಕುಸಲ್ ಪೆರೆರಾ ಸೊನ್ನೆಗೆ ಔಟಾದರೆ, ಪಾಥುಮ್ ನಿಸ್ಸಾಂಕ 61 ಎಸೆತಗಳಲ್ಲಿ 7 ಬೌಂಡರಿ ಮತ್ತು 1 ಸಿಕ್ಸರ್ ಸಮೇತ 51 ರನ್ ಗಳಿಸಿದರು.

ICC World Cup 2023: Shafique, Rizwan Helps To Pakistan Defeat Sri Lanka By 6 Wickets in 8th Match

ನಂತರ ಬಂದ ಕುಸಲ್ ಮೆಂಡೀಸ್ 77 ಎಸೆತಗಳಲ್ಲಿ 14 ಬೌಂಡರಿ ಹಾಗೂ 6 ಸಿಕ್ಸರ್ ಮೂಲಕ 122 ರನ್‌ಗಳ ಭರ್ಜರಿ ಶತಕ ಸಿಡಿಸಿದರು. ಸದೀರ ಸಮರವಿಕ್ರಮ 89 ಎಸೆತಗಳನ್ನು ಎದುರಿಸಿ 11 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 108 ರನ್ ಗಳಿಸಿದರು.

ಚರಿತ ಅಸಲಂಕಾ 1 ರನ್, ಧನಂಜಯ್ ಡಿ ಸಿಲ್ವ 25 ರನ್, ದಸುನ್ ಶನಕ 12 ರನ್, ದುನಿತ್ ವೆಲ್ಲಲಾಗೆ 10 ರನ್ ಗಳಿಸುವ ಮೂಲಕ ತಂಡದ ಮೊತ್ತವನ್ನು 340ರ ಗಡಿ ದಾಟಿಸಿದರು.

ಪಾಕಿಸ್ತಾನ ತಂಡದ ಪರ ಬೌಲಿಂಗ್‌ನಲ್ಲಿ ಹಸನ್ ಅಲಿ 10 ಓವರ್‌ಗಳಲ್ಲಿ 71 ರನ್ ನೀಡಿ 4 ವಿಕೆಟ್ ಪಡೆದರೆ, ಹ್ಯಾರಿಸ್ ರೌಫ್ 10 ಓವರ್‌ಗಳಲ್ಲಿ 64 ರನ್ ನೀಡಿ 2 ವಿಕೆಟ್ ಪಡೆದರೆ, ಉಳಿದಂತೆ ಶಾಹೀನ್ ಅಫ್ರಿದಿ, ಮೊಹಮ್ಮದ್ ನವಾಜ್ ಮತ್ತು ಶಾದಾಬ್ ಖಾನ್ ತಲಾ ಒಂದೊಂದು ವಿಕೆಟ್ ಕಬಳಿಸಿದರು.

Story first published: Tuesday, October 10, 2023, 22:44 [IST]
Other articles published on Oct 10, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+