Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

SA vs AFG: ಅಜ್ಮತುಲ್ಲಾ ಒಮರ್ಜಾಯ್ ಭರ್ಜರಿ ಬ್ಯಾಟಿಂಗ್; ಹರಿಣ ಪಡೆಗೆ ಸವಾಲಿನ ಗುರಿ ನೀಡಿದ ಅಫ್ಘಾನಿಸ್ತಾನ

ಶುಕ್ರವಾರ, ನವೆಂಬರ್ 10ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ 2023ರ ಐಸಿಸಿ ಏಕದಿನ ವಿಶ್ವಕಪ್‌ನ 42ನೇ ನಿರ್ಣಾಯಕ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಅಫ್ಘಾನಿಸ್ತಾನ ತಂಡ ಸವಾಲಿನ ಮೊತ್ತವನ್ನು ಕಲೆಹಾಕಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ ತಂಡ ಅಜ್ಮತುಲ್ಲಾ ಒಮರ್ಜಾಯ್ ಅಮೋಘ ಅರ್ಧಶತಕದ ನೆರವಿನಿಂದ ನಿಗದಿತ 50 ಓವರ್‌ಗಳಲ್ಲಿ 244 ರನ್‌ಗಳಿಗೆ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿತು. ಈ ಮೂಲಕ ದಕ್ಷಿಣ ಆಫ್ರಿಕಾ ತಂಡಕ್ಕೆ 245 ರನ್‌ಗಳ ಗುರಿ ನೀಡಿದೆ.

icc-world-cup-2023

ಆದರೆ, ದಕ್ಷಿಣ ಆಫ್ರಿಕಾ ವಿರುದ್ಧದ ಈ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡ ಗೆದ್ದರೂ, ಸೋತರೂ 2023ರ ಐಸಿಸಿ ಏಕದಿನ ವಿಶ್ವಕಪ್‌ನಿಂದ ಹೊರಬೀಳಲಿದೆ. ನ್ಯೂಜಿಲೆಂಡ್ ತಂಡವನ್ನು ನೆಟ್‌ ರನ್ ರೇಟ್‌ನಲ್ಲಿ ನಾಲ್ಕನೇ ಸ್ಥಾನದಿಂದ ಹಿಂದಿಕ್ಕಲು ಅಫ್ಘಾನಿಸ್ತಾನ ತಂಡಕ್ಕೆ ದಕ್ಷಿಣ ಆಫ್ರಿಕಾ ವಿರುದ್ಧ 438 ರನ್‌ಗಳ ಗೆಲುವಿನ ಅವಶ್ಯಕತೆ ಇತ್ತು.

ಇನ್ನು ಅಫ್ಘಾನಿಸ್ತಾನ ತಂಡದ ಇನ್ನಿಂಗ್ಸ್ ಆರಂಭಿಸಿದ ರಹಮಾನುಲ್ಲಾ ಗುರ್ಬಾಜ್ 25 ರನ್ ಮತ್ತು ಇಬ್ರಾಹಿಂ ಝದ್ರಾನ್ 15 ರನ್ ಗಳಿಸಿ ಮೊದಲ ವಿಕೆಟ್‌ಗೆ 8.1 ಓವರ್‌ಗಳಲ್ಲಿ 41 ರನ್‌ಗಳ ಜೊತೆಯಾಟ ನೀಡಿ ಉತ್ತಮ ಆರಂಭ ಒದಗಿಸಿದರು. ಈ ವೇಳೆ ಇಬ್ಬರೂ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು.

ನಂತರ ಬಂದ ರಹಮತ್ ಷಾ 26 ರನ್, ನಾಯಕ ಹಶ್ಮತುಲ್ಲಾ ಶಾಹಿದಿ 2 ರನ್ ಗಳಿಸಿ ದಕ್ಷಿಣ ಆಫ್ರಿಕಾ ಬೌಲರ್‌ಗಳ ವಿರುದ್ಧ ಅಬ್ಬರಿಸಲು ವಿಫಲರಾದರು. ವಿಕೆಟ್ ಕೀಪರ್ ಇಕ್ರಮ್ ಅಲಿಖಿಲ್ 12 ರನ್ ಮಾತ್ರ ಗಳಿಸಲು ಸಫಲರಾದರು.

 ICC World Cup 2023: South Africa Need 245 Runs To Win Against Afghanistan In 42nd Match

5ನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದಿದ್ದ ಅಜ್ಮತುಲ್ಲಾ ಒಮರ್ಜಾಯ್ 107 ಎಸೆತಗಳಲ್ಲಿ 7 ಬೌಂಡರಿ ಹಾಗೂ 3 ಸಿಕ್ಸರ್ ಸಮೇತ ಅಜೇಯ 97 ರನ್ ಬಾರಿಸಿದರು.

ಬಳಿಕ ಬಂದ ಮೊಹಮ್ಮದ್ ನಬಿ 2 ರನ್, ರಶೀದ್ ಖಾನ್ 14 ರನ್, ನೂರ್ ಅಹ್ಮದ್ 26 ರನ್ ಮುಜೀಬ್ ಉರ್ ರಹಮಾನ್ 8 ರನ್ ಮತ್ತು ನವೀನ್-ಉಲ್-ಹಕ್ 2 ರನ್ ಗಳಿಸಿ ಔಟಾದರು.

ಬೌಲಿಂಗ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡದ ಪರ ಜೆರಾಲ್ಡ್ ಕೊಯೆಟ್ಜಿ 10 ಓವರ್‌ಗಳಲ್ಲಿ 44 ರನ್ ನೀಡಿ 4 ವಿಕೆಟ್ ಕಬಳಿಸಿದರೆ, ಕೇಶವ್ ಮಹಾರಾಜ್ 10 ಓವರ್‌ಗಳಲ್ಲಿ 25 ರನ್ ನೀಡಿ 2 ವಿಕೆಟ್ ಪಡೆದರು. ಲುಂಗಿ ಎನ್‌ಗಿಡಿ 8.3 ಓವರ್‌ಗಳಲ್ಲಿ 69 ರನ್ ನೀಡಿ 2 ವಿಕೆಟ್ ಪಡೆದರೆ, ಆಂಡಿಲೆ ಫೆಹ್ಲುಕ್ವಾಯೊ 7 ಓವರ್‌ಗಳಲ್ಲಿ 36 ರನ್ ನೀಡಿ 1 ವಿಕೆಟ್ ತಮ್ಮದಾಗಿಸಿಕೊಂಡರು.

Story first published: Friday, November 10, 2023, 18:11 [IST]
Other articles published on Nov 10, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+